ದೇಶ-ಪ್ರಪಂಚ

ತಾಲಿಬಾನ್ ಉಗ್ರರಿಗೆ ಹೆದರಿ ದೇಶ ಬಿಟ್ಟು ಓಡಿದ ಆಫ್ಘಾನಿಸ್ಥಾನ ಪ್ರಧಾನಿ..! ಇಡೀ ಆಫ್ಘಾನಿಸ್ಥಾನ ಈಗ ಉಗ್ರರ ಹಿಡಿತಕ್ಕೆ..!

ಕಾಬೂಲ್: ತಾಲಿಬಾನ್ ಉಗ್ರರ ಆಕ್ರಮಣದಿಂದಾಗಿ ಆಫ್ಘಾನಿಸ್ಥಾನ ಪ್ರಧಾನಿ ಅಶ್ರಫ್ ಘನಿ ದೇಶ ಬಿಟ್ಟು ಓಡಿ ಹೋಗಿದ್ದಾರೆ ಎಂದು ವರದಿಯಾಗಿದೆ. ತಮ್ಮ ಹುದ್ದೆಗೆ ರಾಜಿನಾಮೆ ನೀಡಲು ಮುಂದಾಗಿರುವ ಪ್ರಧಾನಿ ಬದುಕಿದರೆ ಭಿಕ್ಷೆ ಬೇಡಿಯಾದರೂ ತಿಂದೇನೂ ಅನ್ನುವ ನಿರ್ಧಾರ ಮಾಡಿ ಓಟಕ್ಕಿತ್ತಿದ್ದಾರೆ. ಆಫ್ಘಾನಿಸ್ಥಾನ ಮೇಲೆ ಬಿಗಿ ಹಿಡಿತ ಸಾಧಿಸಿರುವ ತಾಲಿಬಾನ್ ಉಗ್ರರು, ಭಾನುವಾರ ಕಾಬೂಲ್ ನಗರದ ಹೊರವಲಯವನ್ನು ಪ್ರವೇಶಿಸಿ ವಿಜಯೋತ್ಸವ ಆಚರಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಅಧ್ಯಕ್ಷ ಘನಿ ದೇಶ ಬಿಟ್ಟು ತೆರಳಿದ್ದಾರೆ. ದೇಶ ಬಿಡುವ ಮುನ್ನ ಪ್ರಧಾನಿ ಹುದ್ದೆ ತ್ಯಜಿಸಿದ್ದಾರೆ ಎಂಬ ವದಂತಿಯೂ ಹಬ್ಬಿದೆ. ಮೂಲಗಳ ಪ್ರಕಾರ,ಅಫ್ಘಾನ್ ಅಧ್ಯಕ್ಷೀಯ ಪ್ಯಾಲೆಸ್ ಎಆರ್ ಜಿಯಲ್ಲಿ ತಾಲಿಬಾನ್ ಗೆ ಅಧಿಕಾರ ಹಸ್ತಾಂತರ ಕುರಿತು ಚರ್ಚೆಗಳು ನಡೆಯುತ್ತಿವೆ. ಅಲ್ಲದೆ ಈ ಸಂಬಂಧ ಆಲಿ ಅಹ್ಮದ್ ಜಲಾಲಿ ಅವರನ್ನು ಭಾನುವಾರ ಹೊಸ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೇಮಕ ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ.

Related posts

9 ವಿದ್ಯಾರ್ಥಿಗಳ ಆತ್ಮಹತ್ಯೆ..! ಪರೀಕ್ಷಾ ಫಲಿತಾಂಶ ಪ್ರಕಟಕ್ಕೂ ಈ ನಿಗೂಢ ಸಾವಿಗೂ ಇದೆಯಾ ನಂಟು?

ವ್ಯಾನ್ ಒಳಗೆ ಗುಂಡು ಹಾರಿಸಿಕೊಂಡು ದುರಂತ ಅಂತ್ಯ ಕಂಡ ಪೊಲೀಸ್ ಹೆಡ್ ಕಾನ್ ಸ್ಟೇಬಲ್! ಹಲವು ಅನುಮಾನಗಳಿಗೆ ಕಾರಣವಾದ ಆತ್ಮಹತ್ಯೆ!

ಕೆನಡಾ ದೇಶಕ್ಕೆ ಭಾರತ ಮೂಲದ ಪ್ರಧಾನಿ..?, ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಭರವಸೆ ಹುಟ್ಟಿಸಿದ ಹೆಮ್ಮೆಯ ಕನ್ನಡಿಗ