ದೇಶ-ಪ್ರಪಂಚ

75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭಾರತ-ಪಾಕ್ ಗಡಿಯಲ್ಲಿ ಸಿಹಿ ವಿನಿಮಯ

ಜಮ್ಮು: ಭಾರತೀಯ ಸೇನೆ ಮತ್ತು ಬಿಎಸ್ಎಫ್ ಸಿಬ್ಬಂದಿ ಭಾರತದ 75ನೇ ಸ್ವಾತಂತ್ರ್ಯದಿನಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ಗಡಿ ಭದ್ರತಾ ಯೋಧರೊಂದಿಗೆ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಮತ್ತು ಅಂತರಾಷ್ಟ್ರೀಯ ಗಡಿ (ಐಬಿ)ಯಲ್ಲಿ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಪಾಕಿಸ್ತಾನದ ಸೇನಾ ಪಡೆಗಳೊಂದಿಗೆ ಭಾರತೀಯ ಸೇನೆಯು ಮೆಂಧರ್ ನ ತಟಪಾನಿ ಕ್ರಾಸಿಂಗ್ ಪಾಯಿಂಟ್ ಮತ್ತು ಪೂಂಚ್ ಜಿಲ್ಲೆಯ ಎಲ್ಒಸಿ ಉದ್ದಕ್ಕೂ ರಾವಲಕೋಟ್ ಕ್ರಾಸಿಂಗ್ ಪಾಯಿಂಟ್ ನಲ್ಲಿ ಸಿಹಿ ಮತ್ತು ಅಭಿನಂದನೆ ವಿನಿಮಯ ಮಾಡಿಕೊಂಡಿದೆ ಎನ್ನಲಾಗಿದೆ. ಇನ್ನು ಅಮೃತಸರದಿಂದ 35 ಕಿ.ಮೀ. ದೂರವಿರುವ ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತದ ಬಿಎಸ್ಎಫ್ ಪಡೆಯು ಪಾಕಿಸ್ತಾನದ ಗಡಿಭದ್ರತಾ ಯೋಧರೊಂದಿಗೆ ಸಿಹಿ ವಿನಿಮಯ ಮಾಡಿಕೊಂಡಿದೆ.ಬಾಂಗ್ಲಾದೇಶದ ಯೋಧರೊಂದಿಗೂ ಸಿಹಿ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

Related posts

ಉತ್ತರ ಭಾರತದ ಪ್ರವಾಸದಲ್ಲಿರುವ ದ.ಕ. ಜಿಲ್ಲೆಯ ಯಾತ್ರಿಕರು ಸುರಕ್ಷಿತ, ಪ್ರವಾಹಕ್ಕೆ ಸಿಲುಕಿದ್ದ ಜಿಲ್ಲೆಯ ಯಾತ್ರಿಕರನ್ನು ರಕ್ಷಿಸಿದ್ದು ಹೇಗೆ ಗೊತ್ತಾ..?

ಪಾಸ್‌ ಪೋರ್ಟ್ ಕ್ಯಾನ್ಸಲ್ ಆಗುವುದನ್ನು ತಿಳಿದು ಪ್ರಜ್ವಲ್ ವಾಪಸ್ ಬರ್ತಿದ್ದಾರೆ ಎಂದ ಗೃಹ ಸಚಿವ..! ಪ್ರಜ್ವಲ್ ಗೆ ಜಿ.ಪರಮೇಶ್ವರ್ ನೀಡಿದ ಎಚ್ಚರಿಕೆ ಏನು..?