ದೇಶ-ಪ್ರಪಂಚಬೆಂಗಳೂರು

ಬಿಗ್‌ ಬಾಸ್‌ ಸ್ಪರ್ಧಿ , ನಟಿ ಸಂಗೀತಾ ಶೃಂಗೇರಿಗೆ ಮದುವೆ? ಇಷ್ಟವಿಲ್ಲದಿದ್ದರೂ ಹೊಸ ಜೀವನಕ್ಕೆ ಕಾಲಿಡಲು ಡೇಟ್‌ ಫಿಕ್ಸ್‌?

ನ್ಯೂಸ್ ನಾಟೌಟ್ : ವೀಕ್ಷಕರ ಕುತೂಹಲಕ್ಕೆ ಕಾರಣವಾಗಿರುವ ಬಿಗ್ ಬಾಸ್ ಸೀಸನ್ 10 ಮನೆಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ 2024ರ ವರ್ಷ ದೊಡ್ಮನೆಯ ಸದಸ್ಯರಿಗೆ ಯಾವ ರೀತಿ ಇರುತ್ತದೆ ಎಂಬ ವಿಚಾರದ ಬಗ್ಗೆ ಮಾತನಾಡಿದ್ದು ,ಎಲ್ಲರ ಚಿತ್ತ ಗುರೂಜಿಯ ಭವಿಷ್ಯದತ್ತ ನೆಟ್ಟಿತ್ತು. ಅದರಲ್ಲೂ ಮುಖ್ಯವಾಗಿ ಸಂಗೀತಾ ಶೃಂಗೇರಿ ಮದುವೆ ಬಗ್ಗೆ ಸ್ವಾಮೀಜಿ ವಿಶೇಷ ಭವಿಷ್ಯವೊಂದನ್ನು ನುಡಿದಿದ್ದಾರೆ.

ಕಲರ್ಸ್‌ ಕನ್ನಡ  ವಾಹಿನಿಯಲ್ಲಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಮಹರ್ಷಿ ದರ್ಶನ ಕಾರ್ಯಕ್ರಮದ ಪ್ರಯುಕ್ತ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. “ನಾನು ಜೀವನದಲ್ಲಿ ಮದುವೆನೇ ಆಗಲ್ಲ ಎನ್ನುತ್ತಿದ್ದ ಸಂಗೀತಾ ಶೃಂಗೇರಿ ಬಗ್ಗೆ ಮಾತನಾಡುತ್ತಾ “ನಿಮ್ಮ ಮನಸ್ಸಿನ ದುಃಖಗಳನ್ನು ನೀಗಿಸುವಂತಹ ಒಬ್ಬ ವ್ಯಕ್ತಿ ಬರಲಿದ್ದಾರೆ. 2024ರಲ್ಲಿ ನಿಮ್ಮ ಬಾಳಲ್ಲಿ ಹೊಸ ಚೈತನ್ಯ ಮೂಡಲಿದೆ. ವೃತ್ತಿಬದುಕಿನಲ್ಲಿ ಏರಿಳಿತಗಳು ಇರುತ್ತದೆ. ಆದರೆ 2025ರಲ್ಲಿ ನಿಮ್ಮ ಮದುವೆ ನಡೆದೇ ನಡೆಯುತ್ತದೆ. ಸಂಗಾತಿ ಬಂದ ಮೇಲೆ ನಿಮ್ಮ ಜೀವನ ಚೆನ್ನಾಗಿ ನಡೆಯುತ್ತದೆ” ಎಂದು ಗುರೂಜಿ ಭವಿಷ್ಯ ಹೇಳಿದ್ದಾರೆ.

Related posts

2ನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ಪ್ಲಾನ್..! ವಿದೇಶದ ಮತದಾರರಿಗೆ ವಿಮಾನ ಟಿಕೆಟ್ ಆಫರ್

ಶಾಲೆಗೆ ಎಕ್ಸಾಂ ಬರೆಯಲು ಹೋದವಳಿಗೆ ಹೃದಯಾಘಾತ..! 15 ವರ್ಷದ ಬಾಲಕಿ ದುರಂತ ಅಂತ್ಯ

166 ಕೋಟಿ ರೂ.ನ ಐಷಾರಾಮಿ ಮನೆಯಲ್ಲೂ ನೀರು ಸೋರಿಕೆ ಸಮಸ್ಯೆ..!ಮನೆ ಸರಿ ಮಾಡಲೆಂದು ಕೋಟಿಗಟ್ಟಲೆ ಖರ್ಚು ಮಾಡಿ,ಮನೆ ಖಾಲಿ ಮಾಡಿದ ಪ್ರಿಯಾಂಕ ದಂಪತಿ..!ಮನೆ ಮಾರಾಟ ಮಾಡಿದವನ ವಿರುದ್ಧ ದೂರು