Uncategorized

ಶೂಟಿಂಗ್‌ ಟೈಮ್‌ನಲ್ಲಿ ಕರೆಂಟ್‌ ಹೋದಾಗ ಏನಾಯ್ತು? ರಜನಿಕಾಂತ್‌ ಈ ನಟಿ ಬೆನ್ನ ಹಿಂದೆ ಬಂದಿದ್ದು ಯಾಕೆ? ಶಾಕಿಂಗ್ ವಿಚಾರ ಬಿಚ್ಚಿಟ್ಟ ಬಹುಭಾಷಾ ನಟಿ ರಂಭಾ..!

ನ್ಯೂಸ್ ನಾಟೌಟ್ : ನಟ-ನಟಿಯರಿಗೆ ಹಳೆ ನೆನಪುಗಳ ಬಗ್ಗೆ ಪ್ರಶ್ನೆ ಮಾಡಿದಾಗ ನೂರಾರು ನೆನಪುಗಳನ್ನು ಹಂಚಿಕೊಳ್ಳೋದಿದೆ.ಅವರ ಬಗ್ಗೆ ಹಾಗೂ ಅವರು ಸಿನಿಮಾ ಶೂಟಿಂಗ್ ಟೈಮ್‌ನಲ್ಲಿ ಅನುಭವಿಸಿದ ಕೆಲವು ಘಟನೆಗಳ ಬಗ್ಗೆ ತಿಳಿದು ಕೊಳ್ಳಲು ಅಭಿಮಾನಿಗಳು ಕೂಡ ಕಾತುರರಾಗಿರುತ್ತಾರೆ.ಇದೀಗ ನಟಿ ರಂಭಾ ಅವರು ಸೂಪರ್‌ ಸ್ಟಾರ್‌ ರಜನಿ ಕಾಂತ್‌ ಅವರ ಬಗ್ಗೆ ಕೆಲವೊಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ʼಅರುಣಾಚಲಂʼ ಚಿತ್ರ ತಮಿಳು ಸಿನಿರಂಗದ ಹಿಟ್‌ ಸಿನಿಮಾಗಳಲ್ಲಿ ಒಂದು. ಇತ್ತೀಚಿಗೆ ನಟಿ ರಂಭಾ ಈ ಸಿನಿಮಾ ಶೂಟಿಂಗ್‌ ವೇಳೆ ನಡೆದ ಘಟನೆ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ. ಸೆಟ್‌ನಲ್ಲಿ ಸೂಪರ್‌ ಸ್ಟಾರ್‌  ರಜಿನಿಕಾಂತ್ ಅವರು ತಮಗೆ ಹೊಡೆದಿದ್ದಾಗಿ ರಂಭಾ ಹೇಳಿಕೆ ನೀಡಿದ್ದಾರೆ.

ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. 1997 ರಲ್ಲಿ ಈ ಚಿತ್ರ ತೆರೆ ಕಂಡಿತ್ತು. ರಜನಿಕಾಂತ್ ನಾಯಕನಾಗಿ ನಟಿಸಿದ್ದರು. ಅಲ್ಲದೆ ದಿವಂಗತ ನಟಿ ಸೌಂದರ್ಯ ಮತ್ತು ರಂಭಾ ರಜನಿಗೆ ಜೋಡಿಯಾಗಿ ನಟಿಸಿದ್ದರು. ಸದ್ಯ ಈ ಚಿತ್ರದ ಶೂಟಿಂಗ್‌ ವೇಳೆ ರಜನಿಕಾಂತ್‌ ಮಾಡಿದ ಕುಚೇಷ್ಟೆ ಘಟನೆಯನ್ನು ರಂಭಾ ಹಂಚಿಕೊಂಡಿದ್ದು, ಭಾರಿ ಕುತೂಹಲ ಮೂಡಿಸಿದೆ.

ಒಂದು ದಿನ ಅರುಣಾಚಲಂ ಚಿತ್ರದ ಶೂಟಿಂಗ್‌ ನಡೆಯುತ್ತಿತ್ತು.ಈ ವೇಳೆ ಇದ್ದಕ್ಕಿದ್ದಂತೆ ಎಲ್ಲಾ ದೀಪಗಳು ಆರಿಹೋದವು. ಆಗ ಬೆನ್ನಿಗೆ ಯಾರೋ ಹೊಡೆದರು. ಇದರಿಂದ ಭಯಗೊಂಡ ನಾನು ತಕ್ಷಣ ಕಿರುಚಿದ್ದೆ. ಬೆಳಕು ಬಂದ ಕೂಡಲೇ ಎಲ್ಲರನ್ನು ನಿಲ್ಲಿಸಿ, ‘ನಂಗೆ ಹೊಡೆದದ್ದು ಯಾರು?’ ಅಂತ ಪ್ರಶ್ನೆ ಕೇಳಲಾಯಿತು. ಕೊನೆಗೆ ನನ್ನನ್ನು ಹೆದರಿಸಿದ್ದು ರಜನಿಕಾಂತ್ ಎಂದು ತಿಳಿದು ಬಂತು ಎಂದು ರಂಭಾ ಹೇಳಿದ್ದಾರೆ.

ಸಂದರ್ಶನದಲ್ಲಿ ರಜನಿ ಮಾಡಿದ ಮತ್ತೊಂದು ತಮಾಷೆಯನ್ನು ಹಂಚಿಕೊಂಡಿದ್ದು,ಅರುಣಾಚಲಂ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದರು. ಆಗ ಅವರನ್ನು ಸ್ವಾಗತಿಸಿದ ರಂಭಾ ಓಡಿ ಬಂದು ಅಪ್ಪಿಕೊಂಡಿದ್ದರು. ಇದನ್ನು ನೋಡಿದ ರಜನಿ ರಂಭಾಗೆ “ನಾನು ಗುಡ್ ಮಾರ್ನಿಂಗ್ ಹೇಳ್ತೇನೆ ಸರ್.. ಅವರು ಓಡಿ ಬಂದು ನನ್ನ ಅಪ್ಪಿಕೊಳ್ಳುತ್ತಾರೆ.. ಇನ್ನು ಮುಂದೆ ಯೂನಿಟ್ ಗೆ ಯಾರೇ ಬಂದರೂ ಹೀಗೆ ಸ್ವಾಗತ ಮಾಡ್ತಾಳೆ” ಅಂತ ಕಾಡಿಸಿದ್ದಾಗಿ ರಂಭಾ ಹೇಳಿ ನಕ್ಕಿದ್ದರು. 

ನಟಿ ರಂಭಾ 90ರ ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ನಟಿ.ತೆರೆಗೆ ಬಂದ ಕೆಲವೇ ವರ್ಷಗಳಲ್ಲಿ ರಂಭಾ ಭಾರಿ ಅಭಿಮಾನಿಗಳನ್ನು ಗಳಿಸಿದ್ದರು.ಕನ್ನಡ, ತೆಲುಗು, ಹಿಂದಿ, ತಮಿಳಿನಲ್ಲಿ ಹಲವು ಸ್ಟಾರ್‌ ನಟರ ಜೊತೆ ನಟಿಸಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ್ದರು. 2010ರವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ಮದುವೆ ನಂತರ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 

Related posts

ಈತ ಪ್ರತಿನಿತ್ಯ ವಿಷಕಾರಿ ಕಾಳಿಂಗ ಸರ್ಪವನ್ನು ಸ್ನಾನ ಮಾಡಿಸ್ತಾನೆ..!

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಮುರುಘಾ ಶ್ರೀಗಳ ಬಂಧನ

ಬಿಗ್‌ ಬಾಸ್‌ ಸೀಸನ್‌ 10 :ಈ ಸಲ ಟ್ರೋಫಿಯನ್ನು ‘ಸಿಂಗಲ್‌ ಸಿಂಹಿಣಿ’ ಗೆಲ್ತಾರಾ? ಸಂಗೀತಾ ಫ್ಯಾನ್ಸ್‌ ಹೇಳಿದ್ದೇನು?ನಿಮ್ಮ ಪ್ರಕಾರ ಯಾರು ವಿನ್ ಆಗ್ಬಹುದು?