ಕ್ರೀಡೆ/ಸಿನಿಮಾ

ಕನ್ನಡದ ಹಿರಿಯ ನಟ ಮಂಡ್ಯ ರಮೇಶ್‌ಗೆ ದಿಢೀರ್ ಅಸ್ವಸ್ಥ, ಆಗಿದ್ದೇನು?

ನ್ಯೂಸ್ ನಾಟೌಟ್ : ಸ್ಯಾಂಡಲ್‌ವುಡ್‌ನ ಖ್ಯಾತ ಕಾಮಿಡಿಯನ್‌ ಹಾಗೂ ಹಿರಿಯ ನಟ ಮಂಡ್ಯ ರಮೇಶ್‌ ಅವರು ದಿಢೀರ್ ಅಸ್ವಸ್ಥರಾಗಿದ್ದು, ಅವರನ್ನು ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.ಇನ್ನು ಇತ್ತೀಚೆಗೆ ರಾಜರಾಜೇಶ್ವರಿ ನಗರದಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದ್ದು,ಕಲ್ಲು ಕ್ವಾರಿಯಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ನಟ ಮಂಡ್ಯ ರಮೇಶ್ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿತ್ತು. ಇದರಿಂದಾಗಿ ಅವರ ಕಾಲಿಗೆ ಚಿಕಿತ್ಸೆ ಕೊಡಲಾಗಿದೆ ಎಂದು ವರದಿಯಾಗಿದೆ.

ಇದೀಗ ಈ ಬಗ್ಗೆ ಮಂಡ್ಯ ರಮೇಶ್ ಅವರ ಪತ್ನಿ ಸರೋಜಾ ಹೆಗಡೆ ಮಾಹಿತಿ ನೀಡಿದ್ದು, ವೈದ್ಯರ ಸಲಹೆ ಮೇರೆಗೆ ನಾಳೆ ಆಸ್ಪತ್ರೆಯಿಂದ ನಟ ಮಂಡ್ಯ ರಮೇಶ್​ ಡಿಸ್ಚಾರ್ಜ್​​ ಆಗಲಿದ್ದಾರೆ ಎನ್ನಲಾಗಿದೆ. ಸದ್ಯ ರಮೇಶ್​ ಅವರು ಸೂಕ್ತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಗುಣಮುಖವಾಗುವ ಹಂತದಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Related posts

ಒಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ ಖಚಿತ, ಸೆಮಿಫೈನಲ್​​​​​​ ಪ್ರವೇಶಿಸಿ ಇತಿಹಾಸ ಬರೆದ ಬಾಕ್ಸರ್​ ಲವ್ಲಿನಾ !

ಕೇವಲ 9 ಗಂಟೆಯೊಳಗೆ ಈ ನಟಿಗೆ ಒಂದು ಮಿಲಿಯನ್‌ಗಿಂತಲೂ ಅಧಿಕ ಫಾಲವರ್ಸ್..!,ಆ ನಟಿ ಯಾರು ಗೊತ್ತೆ?

Bigg Boss Kannada 10: ಡ್ರೋನ್ ಪ್ರತಾಪ್ ಮೇಲೆಯೇ ಮುಗಿ ಬೀಳುತ್ತಿರುವ ಬಿಗ್ ಬಾಸ್ ಸ್ಪರ್ಧಿಗಳು..! ಅವಮಾನದ ಮೇಲೆ ಅವಮಾನ ಅನುಭವಿಸುತ್ತಿರುವ ಪ್ರತಾಪ್ ಈಗ ಜನರ ಫೇವರಿಟ್ ಸ್ಪರ್ಧಿ..!