ದೇಶ-ಪ್ರಪಂಚ

ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯೊಬ್ಬರು ಪ್ರೆಗ್ನೆಂಟ್‌ ವಿಚಾರ..! ಪ್ರೆಗ್ನೆಂಟ್ ಆಗಿದ್ದು ನಿಜವೇ..? ರಿಪೋರ್ಟ್‌ ಏನು ಹೇಳುತ್ತೆ?

ನ್ಯೂಸ್ ನಾಟೌಟ್ :  ಬಿಗ್ ಬಾಸ್ 17 ರ ಮನೆಯೊಳಗೆ ಈ ಬಾರಿ ಪತಿ – ಪತ್ನಿ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿರುವ ಸುದ್ದಿ ಭಾರಿ ವೈರಲ್ ಆಗಿತ್ತು.ಅದಕ್ಕೂ ಒಂದು ಕಾರಣವಿದೆ.ಅಂಕಿತಾ ಲೋಖಂಡೆ ಎಂಬವರು ಗರ್ಭಧಾರಣೆಯ ಪರೀಕ್ಷೆ ಮಾಡುವಂತೆಯೂ ಬೇಡಿಕೆಯನ್ನು ಇಟ್ಟಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಹಾಗಾದರೆ ಅವರು ಪ್ರೆಗ್ನೆಂಟಾ? ವೈದ್ಯಕೀಯ ಪರೀಕ್ಷೆಯ ರಿಪೋರ್ಟ್ ಏನು ಹೇಳುತ್ತಿದೆ?

ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ದಂಪತಿ ಬಿಗ್‌ ಬಾಸ್‌ ಮನೆಯಲ್ಲಿ ಅದ್ಭುತವಾಗಿ ಆಡುತ್ತಿದ್ದಾರೆ.ದಂಪತಿ ಮನೆಯೊಳಗೆ ಅನೇಕ ಬಾರಿ ಜಗಳವಾಡಿದ್ದಾರೆ,ಆದರೆ ಪ್ರತಿ ಜಗಳದ ನಂತರ ಅವರು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುತ್ತಾರೆ.

ಹೀಗೆ ಅಂಕಿತಾ ಲೋಖಂಡೆ ಅವರ ಆ ಮಾತು ಬಿಗ್‌ ಬಾಸ್‌ ಮನೆಯೊಳಗೆ ಭಾರಿ ಚರ್ಚೆಗೆ ಕಾರಣವಾಗಿತ್ತು.ಗರ್ಭಧಾರಣೆ ಪರೀಕ್ಷೆ ಮಾಡಿಸಿಕೊಂಡ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಅವರ ಮನಸ್ಥಿತಿಯಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ ಎಂದು ಹೇಳಿದ್ದರು. ‘ಪವಿತ್ರಾ ರಿಶ್ತಾ’ ನಟಿ ಅಂಕಿತಾ ಲೋಖಂಡೆ ಪಿರಿಯಡ್ಸ್‌ ನಿಂತಿದೆ, ಹೀಗಾಗಿ ಗರ್ಭಧಾರಣೆಯ ಪರೀಕ್ಷೆ ಮಾಡುವಂತೆ ಬೇಡಿಕೆಯಿಟ್ಟಿದ್ದರು. ಅದರಂತೆ ಅವರಿಗೆ ಪ್ರೆಗ್ನೆನ್ಸಿ ಟೆಸ್ಟ್‌ ಮಾಡಿಸಲಾಗಿತ್ತು. ಇದೀಗ ಅಂಕಿತಾ ಗರ್ಭಧಾರಣೆ ಪರೀಕ್ಷೆಯ ವರದಿ ಹೊರಬಿದ್ದಿದೆ.ಅಂಕಿತಾ ಲೋಖಂಡೆ ಅವರ ಗರ್ಭಧಾರಣೆಯ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ವರದಿಯ ಪ್ರಕಾರ, ಅಂಕಿತಾ ಲೋಖಂಡೆ ಅವರ ಗರ್ಭಧಾರಣೆಯ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಅಂಕಿತಾ ಗರ್ಭಿಣಿ ಅಲ್ಲ ಎನ್ನಲಾಗಿದೆ.   

Related posts

ಭಾನುವಾರ ಬ್ಯಾಂಕ್ ​​ಗಳಿಗೆ ರಜೆ ರದ್ದುಗೊಳಿಸಿದ್ದೇಕೆ ಆರ್.ಬಿ.ಐ..? ಮಾ.31 ಕ್ಕೆ ಎಂದಿನಂತೆ ತೆರೆದಿರಲಿದೆ ಬ್ಯಾಂಕ್..!

76 ಶಾಲೆಗಳು ಪಾಕಿಸ್ತಾನದ ವಶಕ್ಕೆ..! ಶಾಲೆಗಳನ್ನು ಮಿಲಿಟರಿ ಪೋಸ್ಟ್‌ಗಳನ್ನಾಗಿ ಬದಲಿಸಿದ ಪಾಕ್‌ ಆರ್ಮಿ!

ಮುಂಬೈ: ಲ್ಯಾಂಡಿಂಗ್ ವೇಳೆ ಪತನಗೊಂಡ ಮಿನಿ ವಿಮಾನ..!ಒಟ್ಟು ಎಂಟು ಮಂದಿಯಿದ್ದ ವಿಮಾನ ನಿಯಂತ್ರಣ ತಪ್ಪಿದ್ದೇಗೆ..?