ಕರಾವಳಿ

ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಗೆ ಪುತ್ತೂರು ಕಂಬಳದಲ್ಲಿ ಕಪಾಳಮೋಕ್ಷ, ಜುಟ್ಟು ಹಿಡಿದವನಿಗೆ ಸಾರ್ವಜನಿಕರಿಂದ ಗೂಸಾ

ನ್ಯೂಸ್ ನಾಟೌಟ್: ಪುತ್ತೂರಿನಲ್ಲಿ ನಡೆದ ೩೦ನೇ ವರ್ಷದ ಕಂಬಳ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಆಗಮಿಸಿದ್ದರು. ಅಲ್ಲಿ ಅವರ ಕೈಯನ್ನು ಅಭಿಮಾನಿಯೊಬ್ಬ ಹಿಡಿದೆಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿ ಗಲಾಟೆಗಳಾಗಿದ್ದು ಸಾನ್ಯಾ ಅಯ್ಯರ್ ಕೆಂಡಾಮಂಡಲರಾಗಿದ್ದರು. ಆತನಿಗೆ ಸ್ಥಳೀಯರು ಧರ್ಮದೇಟು ನೀಡಿ ಹೊರದಬ್ಬಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ಯುವಕನಿಂದ ಅಸಭ್ಯ ವರ್ತನೆ:

ಪುಟ್ಟ ಗೌರಿ ಧಾರಾವಾಹಿ ಮೂಲಕ ನಟನೆಗಿಳಿದ ಸಾನ್ಯಾ ಅಯ್ಯರ್ ವಿವಾದಗಳಿಂದ ಸುದ್ದಿಯಾದರು. ಇತ್ತೀಚೆಗೆ ಬಿಗ್‌ಬಾಸ್ 9 ನಲ್ಲಿ ಭಾಗವಹಿಸಿ, ರೂಪೇಶ್ ಶೆಟ್ಟಿಯೊಂದಿಗೆ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಸದ್ಯ, ಇದೀಗ ಮತ್ತೆ ಪುತ್ತೂರಿನಲ್ಲಿ ನಡೆದ 30ನೇ ವರ್ಷದ ಕಂಬಳದಲ್ಲಿ ನಡೆದ ಗಲಾಟೆಯಿಂದ ಸುದ್ದಿಯಾಗಿದ್ದಾರೆ.ಪುತ್ತೂರಿನಲ್ಲಿ ಇತ್ತೀಚೆಗಷ್ಟೇ 30ನೇ ವರ್ಷದ ಕಂಬಳ ಆಯೋಜನೆಗೊಂಡಿತ್ತು. ಕಾರ್ಯಕ್ರಮಕ್ಕೆ ಸಾನ್ಯಾ ಅಯ್ಯರ್, ಅವರ ತಾಯಿ ದೀಪಾ ಹಾಗೂ ಬೆಂಗಳೂರಿನ ಸ್ನೇಹಿತರ ಜತೆ ಆಗಮಿಸಿದ್ದರು. ಕಂಬಳ ವೀಕ್ಷಿಸುತ್ತಿದ್ದ ವೇಳೆ ಸೆಲ್ಫಿಗಾಗಿ ವೇದಿಕೆಯೇರಿ ಬಂದ ಅಭಿಮಾನಿಯೊಬ್ಬ, ಸಾನ್ಯಾರ ಕೈ ಹಿಡಿದೆಳೆದು ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಸಾನ್ಯಾ ತಾಯಿ ಹಾಗೂ ಸ್ನೇಹಿತರು ವೇದಿಕೆಯ ಮೇಲೆಯೇ ಗಲಾಟೆ ಮಾಡಿದ್ದಾರೆ.

ಸಾನ್ಯಾರ ಜುಟ್ಟು ಹಿಡಿದೆಳೆದ:

ಸಾನ್ಯಾ ಅಯ್ಯರ್ ಭಾನುವಾರ ಕಂಬಳವನ್ನು ಉದ್ಘಾಟಿಸಿ ಕೊಂಚ ವಿರಾಮದ ನಂತರ, ಮತ್ತೆ ತಾಯಿ ಹಾಗೂ ಸ್ನೇಹಿತರೊಂದಿಗೆ ವೇದಿಕೆಯಲ್ಲಿ ಕುಳಿತು ಕಂಬಳ ವೀಕ್ಷಿಸುತ್ತಿದ್ದರು. ಈ ವೇಳೆ ಇಬ್ರಾಹಿಂ ಹೆಸರಿನ ಅಭಿಮಾನಿಯೊಬ್ಬ ಸೆಲ್ಫಿಗಾಗಿ ವೇದಿಕೆಯೇರಿದ್ದಾನೆ. ಸಾನ್ಯಾರ ಜುಟ್ಟು ಹಿಡಿದೆಳೆದಿದ್ದಾನೆ. ಇದರಿಂದಾಗಿ ಸಿಟ್ಟಿಗೆದ್ದ ಸಾನ್ಯಾ , ಇಬ್ರಾಹಿಂ ನಡುವೆ ಮಾತಿನ ಚಕಮಕಿ ನಡೆಸಿದರು. ಕೋಪದಿಂದ ಸಾನ್ಯಾ ಆತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದರಿಂದ ಆಕ್ರೋಶಿತಗೊಂಡ ಇಬ್ರಾಹಿಂ ಸಾನ್ಯಾರಿಗೂ ಕಪಾಳಮೋಕ್ಷ ಮಾಡಿದ್ದಾನೆ ಎನ್ನಲಾಗಿದೆ.

ಸ್ಥಳೀಯರಿಂದ ಧರ್ಮದೇಟು :

ಕಾರ್ಯಕ್ರಮದಲ್ಲಿ ಮಾತನಾಡಿದ ಸಾನ್ಯಾ ಐ ಲವ್ ಯು ಪುತ್ತೂರು ಎಂದು ಹೇಳಿದ್ದರು ಎನ್ನಲಾಗಿದೆ. ಇದನ್ನು ಕೇಳಿಸಿಕೊಂಡು ಇಬ್ರಾಹಿಂ ಐ ಲವ್ ಯು ಸಾನ್ಯಾ ಎಂದು ಕಿರುಚಾಡಿದ್ದನಂತೆ. ಬಳಿಕ ಆತ ಸಾನ್ಯಾ ಒಳಿ ಓಡೋಡಿ ಬಂದು ಅಸಭ್ಯವಾಗಿ ವರ್ತಿಸಿದ್ದು, ವೇದಿಕೆಯಿಂದ ಸಾನ್ಯಾ ಇಳಿಯುತ್ತಿದ್ದಂತೆ ಕೈ ಹಿಡಿದು ಎಳೆದಾಡಿದ್ದಾನೆ. ಕುಡಿತದ ನಶೆಯಲ್ಲಿದ್ದ ಇಬ್ರಾಹಿಂನಿಗೆ ಸ್ಥಳಿಯರು ಧರ್ಮದೇಟು ನೀಡಿ ಕಾರ್ಯಕ್ರಮದಿಂದ ಹೊರದಬ್ಬಿದ್ದಾರೆ ಎಂದು ತಿಳಿದು ಬಂದಿದೆ.

Related posts

ಜರಿಯುವ ಭೀತಿಯಲ್ಲಿ ಬೆಳ್ಳಾರೆ ಹೊಸ ಪೊಲೀಸ್ ಠಾಣೆ, ಉದ್ಘಾಟನೆಗೊಂಡ ಕೆಲವೇ ತಿಂಗಳಲ್ಲಿ ಸ್ವಲ್ಪ ಸ್ವಲ್ಪವೇ ಕುಸಿಯುತ್ತಿರುವ ಮಣ್ಣು..!

ಮನೆಯನ್ನೇ ಮ್ಯೂಸಿಯಂನ್ನಾಗಿಸಿದ ಬಂಟ್ವಾಳದ ವ್ಯಕ್ತಿ,ಇವರ ಮನೆಯಲ್ಲಿರುವ ಒಟ್ಟು ಗಡಿಯಾರಗಳೆಷ್ಟು ಗೊತ್ತಾ?

ಓದುವ ಹವ್ಯಾಸ ಹೆಚ್ಚು ಬೆಳೆಸಿಕೊಂಡಾಗ ಶೈಕ್ಷಣಿಕ ಪ್ರಗತಿ ಸಾಧ್ಯ: ಡಾ. ಕೆ.ವಿ. ಚಿದಾನಂದ