ಕರಾವಳಿಸುಳ್ಯ

ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಆರೋಗ್ಯ ಶಿಬಿರ:ಎ.18,19ರಂದು ಕೊಕ್ಕಡ,ಬೆಳ್ಳಾರೆ,ಉಪ್ಪಿನಂಗಡಿಯಲ್ಲಿ ಶಿಬಿರ

ನ್ಯೂಸ್ ನಾಟೌಟ್ :ಎಂಡೋಸಲ್ಫಾನ್‌ ಸಂತ್ರಸ್ತರಿಗಾಗಿ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ಎ. 15ರಿಂದ 19ರ ವರೆಗೆ ಜಿಲ್ಲೆಯ ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಎ. 18ರಂದು ಬೆಳ್ತಂಗಡಿಯ ಕಣಿಯೂರು, ಪುತ್ತೂರಿನ ಕೋಯಿಲಾ, ಉಪ್ಪಿನಂಗಡಿ, ಸುಳ್ಯದ ಬೆಳ್ಳಾರೆ ಹಾಗೂ ಎ. 19ರಂದು ಬೆಳ್ತಂಗಡಿಯ ಕೊಕ್ಕಡ ಆರೋಗ್ಯ ಕೇಂದ್ರಗಳಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರದ ಸದುಪಯೋಗ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕೊಕ್ಕಡ,ಕೌಕ್ರಾಡಿ ಭಾಗದಲ್ಲಿ ಮುಂದುವರಿದ ಕಾಡಾನೆಗಳ ಉಪಟಳ, ರಬ್ಬರ್ ಟ್ಯಾಪಿಂಗ್ ವೇಳೆ ಕಣ್ಣಿಗೆ ಕಾಣಿಸಿದ ಸಲಗ!

ಧರ್ಮಸ್ಥಳ ನೈತಿಕ ಪೊಲೀಸ್‌ಗಿರಿ ಪ್ರಕರಣ, ಪೊಲೀಸರ ಮಿಂಚಿನ ಕಾರ್ಯಾಚರಣೆ, ಮೂವರ ಬಂಧನ

ಮಾಣಿಯಲ್ಲಿ ತಲವಾರು ದಾಳಿ ನಡೆದಿಲ್ಲ-ಪೊಲೀಸರ ಸ್ಪಷ್ಟನೆ : ಜಾಲತಾಣದಲ್ಲಿ ಸುಳ್ಳುಸುದ್ದಿ ಹರಡಬೇಡಿ ಪೊಲೀಸರ ಮನವಿ