ಕ್ರೈಂದೇಶ-ವಿದೇಶವೈರಲ್ ನ್ಯೂಸ್

ನಾಲ್ವರು ಉಗ್ರರ ಹತ್ಯೆ ಮಾಡಿದ ಭಾರತೀಯ ಸೇನೆ..! ಗುಂಡಿನ ಚಕಮಕಿಯಲ್ಲಿ ಸೇನಾಧಿಕಾರಿ ಹುತಾತ್ಮ..!

ನ್ಯೂಸ್ ನಾಟೌಟ್: ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಅಪರಿಚಿತ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಬುಧವಾರ(ಆ.14) ನಡೆದ ಭಾರಿ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾ ಕ್ಯಾಪ್ಟನ್ ಹುತಾತ್ಮರಾಗಿದ್ದಾರೆ.

ಉಗ್ರರು ಅಡಗಿರುವ ಮಾಹಿತಿ ತಿಳಿದು ದೋಡಾದ ಅಸ್ಸಾರ್ ಪ್ರದೇಶದ ಶಿವಗಢ-ಅಸ್ಸಾರ್ ಬೆಲ್ಟ್‌ನ ಅರಣ್ಯ ಪ್ರದೇಶದಲ್ಲಿ ಜಂಟಿ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ 48 ನೇ ರಾಷ್ಟ್ರೀಯ ರೈಫಲ್ಸ್ ನ ಭಾರತೀಯ ಸೇನೆಯ ಕ್ಯಾಪ್ಟನ್ ದೀಪಕ್ ಸಿಂಗ್ ಹುತಾತ್ಮರಾಗಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಮುಂಚಿತವಾಗಿ ನಡೆದ ಎನ್‌ಕೌಂಟರ್‌ನಲ್ಲಿ ನಾಗರಿಕರೊಬ್ಬರು ಗಾಯಗೊಂಡಿದ್ದಾರೆ. ಶಿವಗಢ-ಅಸ್ಸಾರ್ ಬೆಲ್ಟ್‌ನಲ್ಲಿ ಅಡಗಿರುವ ವಿದೇಶಿ ಭಯೋತ್ಪಾದಕರ ಗುಂಪನ್ನು ಪತ್ತೆಹಚ್ಚಲು ಜಂಟಿ ತಂಡವು ಪ್ರದೇಶ ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿತ್ತು. (CASO) ಈ ಸಮಯದಲ್ಲಿ ದಟ್ಟ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಗುಂಡಿನ ಚಕಮಕಿ ನಡೆದಿದೆ.

ಎನ್‌ಕೌಂಟರ್‌ನಲ್ಲಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ನಿನ್ನೆ ಸಾಯಂಕಾಲ ಸೇನಾ ಸಿಬ್ಬಂದಿ ಶೋಧ ಕಾರ್ಯಾಚರಣೆ ವೇಳೆ ಅರಣ್ಯ ಪ್ರದೇಶದಲ್ಲಿ ಅಡಗಿರುವ ಉಗ್ರರ ಗುಂಪನ್ನು ಪತ್ತೆ ಹಚ್ಚಿದ ಬಳಿಕ ಎನ್‌ಕೌಂಟರ್ ಆರಂಭವಾಯಿತು.

Click

https://newsnotout.com/2024/08/renuka-swamy-and-darshan-case-pavitra-gowda-issue-another-evidence/
https://newsnotout.com/2024/08/ayodya-main-street-lights-are-theft-by-unkown-and-fir-kananda-news/
https://newsnotout.com/2024/08/couple-issue-kannada-news-divorce-matter-ends-in-tragedy/
https://newsnotout.com/2024/08/amrica-visa-kannada-news-ayodya-sclupter-kannada-visa-rejected/

Related posts

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲೆ ಗುಂಡಿನ ದಾಳಿ, ಆಸ್ಪತ್ರೆಗೆ ದಾಖಲು…! ಈ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು..?

ಸಂಸದ ಪ್ರತಾಪ್ ಸಿಂಹನ ಸಹೋದರ ವಿಕ್ರಮ್ ಸಿಂಹನ ಬಂಧನವಾದದ್ದೇಕೆ..? 5 ಅರಣ್ಯಧಿಕಾರಿಗಳು ಅಮಾನತ್ತಾದದ್ದೇಕೆ?

ಬೆಳ್ತಂಗಡಿ: ಸ್ಕೂಟಿ-ಪಿಕಪ್ ನಡುವೆ ಅಪಘಾತ, ಓರ್ವ ಸಾವು, ಮತ್ತೋರ್ವ ಗಂಭೀರ