ದೇಶ-ಪ್ರಪಂಚ

‘ಬ್ರಾ’ ಸೈಜ್ ಮೇಲೆ ಹುಡುಗಿಯರನ್ನ ಅಳೆಯುವ ವಿಶ್ವದ ಕೋಟ್ಯಾಧಿಪತಿ ಇಲಾನ್ ಮಸ್ಕ್..!, ಸ್ಪೇಸ್ ಎಕ್ಸ್ ಮಾಜಿ ಮಹಿಳಾ ಉದ್ಯೋಗಿಗಳಿಂದಲೇ ಲೈಂಗಿಕ ದೌರ್ಜನ್ಯದ ಆರೋಪ

ನ್ಯೂಸ್ ನಾಟೌಟ್: ಇಲಾನ್ ಮಸ್ಕ್ ಅನ್ನುವ ಹೆಸರು ಎಲ್ಲರಿಗೂ ಗೊತ್ತಿದೆ. ವಿಶ್ವದ ಅತೀ ದೊಡ್ಡ ಶ್ರೀಮಂತ, ಪ್ರಚಂಡ ಬುದ್ಧಿವಂತಿಕೆ ಹೊಂದಿರುವ ವ್ಯಕ್ತಿ. ಅಷ್ಟೇ ವಿವಾದಗಳಿಗೂ ಕಾರಣನಾಗಿರುವ ವ್ಯಕ್ತಿ. ಇದೀಗ ಎಲಾನ್ ಮಸ್ಕ್ ಮತ್ತೊಂದು ದೊಡ್ಡ ಲೈಂಗಿಕ ಆರೋಪದ ಸುಳಿಗೆ ಸಿಲುಕಿದ್ದಾರೆ.

ಇಲಾನ್ ಮಸ್ಕ್ ವಿರುದ್ಧ ಈ ಹಿಂದೆ ಸಾಕಷ್ಟು ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಿದ್ದವು. ಇದೀಗ ಸ್ಪೇಸ್ ಎಕ್ಸ್ ಮಾಜಿ ಮಹಿಳಾ ಸಿಬ್ಬಂದಿ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ.

ಸ್ಪೇಸ್ ಎಕ್ಸ್ ಕಂಪನಿಯಲ್ಲಿ ಹುಡುಗಿಯರನ್ನು ಲೈಂಗಿಕ ವಸ್ತುಗಳಂತೆ ನೋಡಲಾಗುತ್ತಿದೆ ಎಂದು ಮಾಜಿ ಉದ್ಯೋಗಿಗಳು ಆರೋಪವನ್ನು ಮಾಡುತ್ತಿದ್ದಾರೆ.

ಕಂಪನಿಯೊಳಗೆ ಎಲಾನ್ ಮಸ್ಕ್ ಮಹಿಳಾ ಉದ್ಯೋಗಿಗಳನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಇದರ ವಿರುದ್ಧ ಧ್ವನಿ ಎತ್ತಿದರೆ ಕೆಲಸದಿಂದ ತೆಗೆದು ಹಾಕುತ್ತಾರೆ. ಇದೀಗ ಮಹಿಳಾ ಉದ್ಯೋಗಿಗಳು ಸಿಡಿದೆದ್ದಿದ್ದಾರೆ. ಎಂಟು ಮಂದಿ ಮಾಜಿ ಉದ್ಯೋಗಿಗಳು ಮಸ್ಕ್ ವಿರುದ್ಧ ಕಾನೂನು ಮೊಕದ್ದಮೆ ಹೂಡುವುದಕ್ಕೆ ಸಿದ್ಧವಾಗಿದ್ದಾರೆ.

‘ಕೆಲಸದ ಸ್ಥಳದಲ್ಲಿ ಇಲಾನ್ ಮಸ್ಕ್ ಅಶ್ಲೀಲವಾಗಿ ಮಾತನಾಡುತ್ತಾರೆ. ಹುಡುಗಿಯರನ್ನು ಅವರ ಬ್ರಾ ಸೈಜ್ ಮೇಲೆ ಅಳೆಯುತ್ತಾರೆ. ಈ ರೀತಿಯ ಮೃಗೀಯ ಸ್ಥಳದ ವಾತಾವರಣವನ್ನು ಯಾರಾದರೂ ಪ್ರಶ್ನಿಸಿದರೆ, ಬೇರೆ ಕಡೆ ಕೆಲಸ ನೋಡುವಂತೆ ಹೇಳಿ ಉದ್ಯೋಗದಿಂದಲೇ ತೆಗೆದುಹಾಕುತ್ತಾರೆ,’ ಎಂದು ಇವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಟೆಸ್ಲಾ, ಸ್ಪೇಸ್​ಎಕ್ಸ್, ಎಕ್ಸ್ ಇತ್ಯಾದಿ ಸಂಸ್ಥೆಗಳ ಮುಖ್ಯಸ್ಥರಾಗಿರುವ ಇಲಾನ್ ಮಸ್ಕ್ ಲೈಂಗಿಕ ಕಿರುಕುಳದ ದೂರು ಇದು ಮೊದಲೇನಲ್ಲ. ಈ ಹಿಂದೆ ಇಂಟರ್ನ್ ಆಗಿ ಬಂದಿರುವ ಹುಡುಗಿಯೊಬ್ಬಳ ಜೊತೆ ಮಸ್ಕ್ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದರು. ಒಬ್ಬ ಉದ್ಯೋಗಿಗಂತೂ ತನ್ನ ಮಕ್ಕಳಿಗೆ ತಾಯಿ ಆಗುತ್ತೀಯಾ ಎಂದು ಕೇಳಿದ್ದರೆಂದು ಇತ್ತೀಚೆಗೆ ಸ್ಟ್ರೀಟ್ ಜರ್ನಲ್ ಪತ್ರಿಕೆ ವರದಿ ಬಿಡುಗಡೆ ಮಾಡಿತ್ತು. ಸದ್ಯ ಮಸ್ಕ್ ವಿರುದ್ಧ ನಾಗರಿಕ ಹಕ್ಕು ಸಂಸ್ಥೆಯೊಂದು ತನಿಖೆ ಕೂಡ ನಡೆಸುತ್ತಿದೆ.

Related posts

ಶಾಲಾ ಬಾಲಕಿಗೆ ತಿಂಡಿ-ಜ್ಯೂಸ್ ಕೊಡಿಸಿ ಕಾಡಿಗೆ ಕರೆದೊಯ್ದು ಕಿರಾತಕ! ಮೂರು ದಿನಗಳ ಬಳಿಕ ಶವ ಪತ್ತೆ!

ಮೆಕ್ಕಾ ತೀರ್ಥಯಾತ್ರೆಗೆ ತೆರಳುತ್ತಿದ್ದ ಭಾರತೀಯರಿದ್ದ ಬಸ್ಸ್ ಪಲ್ಟಿ! 20 ಮಂದಿ ಸಾವು!

ಟಾಕ್ ಶೋನಲ್ಲಿ ಅತಿಥಿಗೆ ‘ಹನಿಮೂನ್’ ಬಗ್ಗೆ ಪ್ರಶ್ನೆ..! ನಿರೂಪಕನಿಗೆ ಲೈವ್‌ನಲ್ಲಿಯೇ ಕಪಾಳಮೋಕ್ಷ ಮಾಡಿದ ಖ್ಯಾತ ಗಾಯಕಿ..!