ಕರಾವಳಿಕೃಷಿ ಸಂಪತ್ತುಪುತ್ತೂರು

ಪೆರಂದೋಡಿಯಲ್ಲಿ ಮತ್ತೆ ಕಾಡಾನೆ ಹಾವಳಿ; ಆತಂಕದಲ್ಲಿ ಗ್ರಾಮಸ್ಥರು

357

ನ್ಯೂಸ್ ನಾಟೌಟ್‌: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಸಮೀಪ ಸೋಮವಾರ ಬೆಳಗ್ಗೆ ಇಬ್ಬರನ್ನು ಬಲಿ ಪಡೆದ ಕಾಡಾನೆ ಘಟನೆ ಮಾಸುವ ಮುನ್ನವೇ ಮಂಗಳವಾರ ಮತ್ತೆ ಕೊಂಬಾರು ಗ್ರಾಮದ ಪೆರುಂದೋಡಿ ಎಂಬಲ್ಲಿ ಕೃಷಿಕ ಮೋಹನ್ ಎಂಬರನ್ನು ಕಾಡಾನೆ ಬೆನ್ನಟ್ಟಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದು ಗ್ರಾಮಸ್ಥರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.

ಪೆರುಂದೋಡಿ ನಿವಾಸಿ ಮೋಹನ್ ಮಂಗಳವಾರ ಮುಂಜಾನೆ 3.30ರ ಹೊತ್ತಿಗೆ ತೋಟಕ್ಕೆ ನೀರು ಹಾಯಿಸಲೆಂದು ತೆರಳಿದ್ದ ವೇಳೆ ಕಾಡಾನೆ ಬೆನ್ನಟ್ಟಿದ್ದು, ಅದೃಷ್ಟವಶಾತ್ ಓಡಿ ತಪ್ಪಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಸಮೀಪದ ಮಣಿಬಾಂಡ ಕಟ್ಟೆ ನಿವಾಸಿ ದೇವರಾಜ್ ಎಂಬವರ ಕೃಷಿ ತೋಟಕ್ಕೆ ಭಾಗಶಃ ಹಾನಿಯಾಗಿದ್ದು, ಕಟ್ಟೆ, ಪೆರುಂದೋಡಿ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೊಂಬಾರು ಪರಿಸರದಲ್ಲಿ ಕಾಡಾನೆ ದಾಳಿಯಿಂದ ಹಲವಾರು ಕೃಷಿ ತೋಟಗಳಿಗೆ ಹಾನಿಯಾಗಿವೆ.

See also  ಸುಳ್ಯ ಪೇಟೆಯಲ್ಲಿ ಅಪಾಯಕಾರಿ ಹೊಂಡ..ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಯಾವಾಗ?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget