ಕರಾವಳಿ

ಸುಬ್ರಹ್ಮಣ್ಯದಲ್ಲಿ ಕಾಡನೆ ಪ್ರತ್ಯಕ್ಷ! ಸ್ಥಳೀಯರಲ್ಲಿ ಹೆಚ್ಚಿದ ಆತಂಕ!

ನ್ಯೂಸ್ ನಟೌಟ್: ಸುಬ್ರಹ್ಮಣ್ಯ ಸಮೀಪದ ಆದಿಸುಬ್ರಹ್ಮಣ್ಯದ ಕಲ್ಲಗುಡ್ಡೆ ಎಂಬಲ್ಲಿ ಕಾಡನೆ ಪ್ರತ್ಯಕ್ಷವಾದ ಘಟನೆ ಮಾ. 24 ಶುಕ್ರವಾರ ನಡೆದಿದೆ.

ಕಡಬ ತಾಲೂಕಿನ ಐತ್ತೂರು ಕೊಣಾಜೆ ಸಂಪರ್ಕ ರಸ್ತೆಯಲ್ಲಿ ನಿನ್ನೆ ಸಂಜೆ ಕಾಡಾನೆ ಕಾಣಸಿಕ್ಕಿದ್ದು, ಸ್ಥಳೀಯರು ಆನೆಯ ವಿಡಿಯೋ ಮಾಡಿದ್ದಾರೆ.

ಐತ್ತೂರು- ಕಡ್ಯ ಕೊಣಾಜೆ ಸಂಪರ್ಕ ರಸ್ತೆಯ ಕೊಣಾಜೆ ಸಮೀಪ ರಾಮನಗರ ಕ್ರಾಸ್ ಎಂಬಲ್ಲಿ ಕಾಡಾನೆ ರಬ್ಬರ್‌ತೋಟದಿಂದ ಆಗಮಿಸಿ ರಸ್ತೆದಾಟಿ ಇನ್ನೊಂದು ಭಾಗದ ರಬ್ಬರ್ ತೋಟದತ್ತ ಸಾಗಿದೆ ಎನ್ನಲಾಗಿದೆ. ಕೆಲಸ ಮಾಡಿ ಸಂಜೆ ಮನೆಗೆ ಹಿಂತಿರುಗುವ ವೇಳೆ ಸ್ಥಳೀಯರಿಗೆ ಕಾಡಾನೆ ಕಾಣಸಿಕ್ಕಿದೆ ಎಂದು ತಿಳಿದು ಬಂದಿದ್ದು, ಈ ವೇಳೆ ಅವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

Related posts

ಕೊಡಗು ದುರಂತಕ್ಕೂ ಮುನ್ನ ಭೂಮಿ ಹೀಗೆಯೇ ಕಂಪಿಸುತ್ತಿತ್ತು..!

ಮಂಗಳೂರು ಹುಡುಗನಿಗೆ ವಿಶ್ವ ನ್ಯಾಚುರಲ್ ದೇಹದಾರ್ಢ್ಯ ಕಿರೀಟ, ಎಫ್ರಾಯಿಮ್ ಪೌಲ್ ಗೆ ಚೊಚ್ಚಲ ಅಂತಾರಾಷ್ಟ್ರೀಯ ಪ್ರಶಸ್ತಿ

ಸ್ವಚ್ಛ ಭಾರತದ ಬಗ್ಗೆ ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರಪತಿಗಳ ಮುಂದೆ ಭಾಷಣ ,ಪ್ರಥಮ ಸ್ಥಾನ ಪಡೆದು ವೈರಲ್ ಆದ ಉಡುಪಿಯ ಬಾಲಕಿ!