ಕರಾವಳಿ

ಮತದಾನ ಮುಗಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ 5 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ

ನ್ಯೂಸ್ ನಾಟೌಟ್: ಮತದಾನ ಮುಗಿದ ಬೆನ್ನಲ್ಲೇ ಭಾರಿ ಅಶಾಂತಿ ಕರಾವಳಿಯಲ್ಲಿ ಬುಗಿಲೆದ್ದಿದೆ.

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಂತೆ ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 14ರವರೆಗೆ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕಾವೂರು, ಸುರತ್ಕಲ್ ಬಜ್ಪೆ, ಮೂಡುಬಿದಿರೆ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಕಾನೂನು ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಮೇ ೧೦ ರ ರಾತ್ರಿಯಿಂದ ಮೇ 14ರ ಬೆಳಗ್ಗೆ 6ರವರೆಗೆ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಆದೇಶ ಹೊರಡಿಸಿದ್ದಾರೆ.

Related posts

ಸುಳ್ಯ: ಅಕ್ರಮವಾಗಿ ಜಮೀನಿಗೆ ನುಗ್ಗಿ ಗಂಡ-ಹೆಂಡತಿಗೆ ಜೀವ ಬೆದರಿಕೆ, 120 ಮೀ. ವಿದ್ಯುತ್ ಕೇಬಲ್ ಹೊತ್ತೊಯ್ದ ದೂರು

ಅಂತಾರಾಷ್ಟ್ರೀಯ ನ್ಯತ್ಯ ಸ್ಪರ್ಧೆ: ತೊಡಿಕಾನದ ಧನ್ಯ ಮಯ್ಯ ಪ್ರಥಮ

ದಕ್ಷಿಣ ಕನ್ನಡ, ಕೊಡಗಿಗೆ ಭಾರಿ ಮಳೆ ಅಪ್ಪಳಿಸುವ ಸಾಧ್ಯತೆ