ದೇಶ-ಪ್ರಪಂಚದೇಶ-ವಿದೇಶರಾಜ್ಯವೈರಲ್ ನ್ಯೂಸ್

ಚುನಾವಣಾ ಫಲಿತಾಂಶಕ್ಕೂ ಮುನ್ನ ವಾಹನ ಚಾಲಕರಿಗೆ ಶಾಕ್..! ಇಂದಿನಿಂದ(ಜೂ.3) ಹೆದ್ದಾರಿಗಳ ಟೋಲ್ ಶುಲ್ಕ ಶೇ.5 ರಷ್ಟು ಏರಿಕೆ..!

ನ್ಯೂಸ್ ನಾಟೌಟ್: ದೇಶಾದ್ಯಂತ ಹೆದ್ದಾರಿಗಳನ್ನು ಬಳಕೆ ಮಾಡುವ ವಾಹನ ಚಾಲಕರು ಸೋಮವಾರದಿಂದ(ಜೂನ್ 3) ಟೋಲ್‌ಗಳಲ್ಲಿ ಹೆಚ್ಚಿನ ಶುಲ್ಕವನ್ನು ನೀಡಬೇಕಾಗುತ್ತದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ದೇಶಾದ್ಯಂತ ಹೆದ್ದಾರಿಗಳ ಟೋಲ್ ಶುಲ್ಕವನ್ನು ಸರಾಸರಿ ಶೇ. 5ರಷ್ಟು ಏರಿಕೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ.

ಸಾಮಾನ್ಯವಾಗಿ ಟೋಲ್ ಶುಲ್ಕ ಪ್ರತಿವರ್ಷ ಹೆಚ್ಚಾಗುತ್ತದೆ. ಇದರಂತೆ ಎಪ್ರಿಲ್ 1 ರಿಂದ ಪರಿಷ್ಕೃತ ಶುಲ್ಕ ಜಾರಿಯಾಗಬೇಕಿತ್ತು. ಆದರೆ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪರಿಷ್ಕೃತ ಶುಲ್ಕ ಜಾರಿಗೆ ವಿಳಂಬವಾಗಿತ್ತು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ ಜಾಲದಲ್ಲಿ ಸರಿಸುಮಾರು 855 ಟೋಲ್ ಪ್ಲಾಝಾಗಳಿವೆ. ಇವುಗಳ ಮೇಲೆ ರಾಷ್ಟ್ರೀಯ ಹೆದ್ದಾರಿ ಶುಲ್ಕ ಕಾಯ್ದೆ, 2008ಕ್ಕೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ ಎನ್ನಲಾಗಿದೆ. ಪರಿಷ್ಕೃತ ಶುಲ್ಕ 03.06.2024ರಿಂದ ಜಾರಿಗೆ ಬರಲಿದೆ ಎಂದು ಎನ್‌ಎಚ್‌ಎಐಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Related posts

ಕಾಲೇಜಿನಲ್ಲೇ ಯುವಕ-ಯುವತಿಯ ಲವ್ವಿ ಡವ್ವಿ, ವಿಡಿಯೋ ವೈರಲ್ ಪ್ರಕರಣಕ್ಕೆ ಟ್ವಿಸ್ಟ್! ವಿದ್ಯಾರ್ಥಿಗಳಿಬ್ಬರೂ ಆತ್ಮಹತ್ಯೆಗೆ ಶರಣು!

‘ಕೇಸರಿ ಬಟ್ಟೆ ಏಕೆ ಹಾಕಿಕೊಂಡು ಬಂದ್ರಿ’ ಅಂತ ಗದರಿದ ಪ್ರಾಂಶುಪಾಲ, ಸಿಟ್ಟಿಗೆದ್ದ ಹಿಂದೂ ಕಾರ್ಯಕರ್ತರಿಂದ ತೆರೆಸಾ ಶಾಲೆ ಮೇಲೆ ದಾಳಿ

ಏರ್ ಇಂಡಿಯಾ ವಿಮಾನ ಟೇಕ್‌ ಆಫ್‌ ಆಗುವ ವೇಳೆಗೆ ರನ್‌ ವೇಗೆ ಬಂದಿಳಿದ ಇನ್ನೊಂದು ವಿಮಾನ..! ಕರ್ತವ್ಯದಲ್ಲಿದ್ದ ಅಧಿಕಾರಿಗಳು ಪದಚ್ಯುತಿ..! ಇಲ್ಲಿದೆ ವೈರಲ್ ವಿಡಿಯೋ