ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ದುಬೈನಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ..! ರಸ್ತೆ, ಹೆದ್ದಾರಿ ಜಲಾವೃತ, ವಿಮಾನಗಳ ಹಾರಾಟ ಸ್ಥಗಿತ, ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹಾಗೂ ದುಬೈನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಮಂಗಳವಾರ(ಎ.16) ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬುಧವಾರ ಎ.17 ಕೂಡ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ದುಬೈನಲ್ಲಿ ಕಳೆದ 24 ಗಂಟೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಭಾರೀ ಮಳೆಯ ಪರಿಣಾಮ ಇಲ್ಲಿನ ವಿಮಾನ ನಿಲ್ದಾಣ ಜಲಾವೃತಗೊಂಡಿದ್ದು ಹತ್ತಾರು ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿತ್ತು. ನಗರದ ಪ್ರಮುಖ ರಸ್ತೆ, ಹೆದ್ದಾರಿಗಳು ಜಲಾವೃತಗೊಂಡಿದ್ದವು. ಭಾರೀ ಮಳೆಯಿಂದಾಗಿ ಸ್ಥಳೀಯ ಸರ್ಕಾರ ಮಂಗಳವಾರ ಜನರನ್ನು ತಮ್ಮ ಮನೆಗಳಲ್ಲಿ ಇರುವಂತೆ ಸೂಚನೆ ನೀಡಿತ್ತು.

ಶಾಲೆ, ಕಾಲೇಜುಗಳಿಗೆ ಆನ್‌ಲೈನ್‌ ತರಗತಿ ನಡೆಸುವಂತೆ ಹಾಗೂ ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ನೌಕರರು ಮನೆಯಲ್ಲೇ ಕೆಲಸ ಮಾಡುವಂತೆ ಸೂಚನೆ ನೀಡಿತ್ತು. ದುಬೈ, ಅಬುಧಾಬಿ, ಶಾರ್ಜಾ, ಕತಾರ್, ಸೌದಿ ಅರೇಬಿಯಾದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.

Related posts

ಮತ್ತೆ ಧ್ಯಾನಕ್ಕೆ ಜಾರಿದರಾ ಸೂಪರ್ ಸ್ಟಾರ್? ಏನಿದು ರಜನಿಕಾಂತ್ ಹಿಮಾಲಯ ರಹಸ್ಯ? ಕನ್ನಡ ಬರಹಗಾರ ಸುಪ್ರೀತ್ ಈ ಬಗ್ಗೆ ಹೇಳಿದ್ದೇನು?

ದೊಡ್ಡಡ್ಕ ಶ್ರೀ ಕೊರಗಜ್ಜ ದೈವ ಸನ್ನಿಧಿಗೆ ಸರಿಗಮಪ ಖ್ಯಾತಿಯ ಗಾಯಕನ ಭೇಟಿ, ಭಜನೆ ಹಾಡಿ ಅಜ್ಜನ ಮೇಲಿನ ಭಕ್ತಿ ತೋರಿದ ಪೊಲೀಸ್..!

ಕಲ್ಚರ್ಪೆ: ಅಸಮರ್ಪಕ ಕಸ ವಿಲೇವಾರಿ ಬಗ್ಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ, ಪ್ರಜಾಪ್ರಭುತ್ವದ ಮಾನವ ಸರಪಳಿ ಕಾರ್ಯಕ್ರಮದ ವೇಳೆ ಸಿರಿಕುರಳ್ ನಗರದ ಜನರ ಆಕ್ರೋಶ..!