ವೈರಲ್ ನ್ಯೂಸ್

ಸರ್ವರೋಗಕ್ಕೂ ಹಾವಿನ ರಕ್ತ ರಾಮಬಾಣವಂತೆ ..! ಇಲ್ಲಿನ ಜನ ಆರೋಗ್ಯಕ್ಕಾಗಿ ಗಟಗಟನೆ ರಕ್ತ ಕುಡಿಯುತ್ತಾರೆ ಗೊತ್ತಾ?

ನ್ಯೂಸ್‌ ನಾಟೌಟ್‌:ಹಾವು ಎಂದಾಕ್ಷಣ ಭಯಪಡುವವರೇ ಹೆಚ್ಚು. ಅತ್ಯಂತ ಅಪಾಯಕಾರಿ ಜೀವಿಗಳಲ್ಲಿ ಹಾವೂ ಕೂಡಾ ಒಂದು. ಆದರೆ ಕೆಲವು ಸ್ಥಳಗಳಲ್ಲಿ ಜನರು ಹಾವುಗಳ ಜತೆ ವಾಸಮಾಡುತ್ತಾರೆ ಅನ್ನೋದರ ಬಗ್ಗೆ ನಿಮ್ಗೊತ್ತಾ?ಹೆಚ್ಯಾಕೆ ಅವುಗಳ ರಕ್ತವನ್ನು ಕುಡಿಯುತ್ತಾರೆ ಅನ್ನೋದನ್ನನೀವು ಕೇಳಿದ್ದೀರಾ?ಹಾಗಾದರೆ ಇದು ಎಲ್ಲಿ? ಯಾಕೆ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ…

ಹೌದು,ಹಾವಿನ ರಕ್ತವು ಅನೇಕ ಗುಣಗಳನ್ನು ಹೊಂದಿದೆ ಎಂದು ಚೀನಿಯರು ನಂಬುತ್ತಾರೆ.ಇದಲ್ಲದೆ, ಹಾವಿನ ರಕ್ತವು ಮಾನವನ ಚರ್ಮಕ್ಕೆ ಒಳ್ಳೆಯದು ಎಂದು ಅನೇಕ ಜನರು ನಂಬುತ್ತಾರೆ. ಹಾವಿನ ವಿಷವು ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಪ್ರತಿವಿಷವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಚೀನಿಯರು ನಂಬುತ್ತಾರೆ. ಅದಕ್ಕಾಗಿಯೇ ಕೆಲವರು ಹಾವಿನ ರಕ್ತವನ್ನು ಕುಡಿಯುತ್ತಾರೆ ಎನ್ನಲಾಗಿದೆ.

ವಿಯೆಟ್ನಾಮೀಸ್ ಸಂಸ್ಕೃತಿಯಲ್ಲಿ ಸ್ನೇಕ್ ವೈನ್ ಆರೋಗ್ಯ ಮತ್ತು ಪುರುಷತ್ವವನ್ನು ಸುಧಾರಿಸುತ್ತದೆ ಎಂದು ಕೆಲವು ವ್ಯಕ್ತಿಗಳು ನಂಬುತ್ತಾರೆ . ಹಾವಿನ ಮಾಂಸವನ್ನು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಬಳಸಲಾಗುತ್ತದೆ, ಆದರೆ ಪಿತ್ತ, ಮೂಳೆಗಳು ಮತ್ತು ಹಾವಿನ ಚರ್ಮವನ್ನು ಮೈಗ್ರೇನ್ ಮತ್ತು ಕೀಲು ನೋವಿನಂತಹ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಚೀನಾದಲ್ಲಿ ‘ದೈವಿಕ ಔಷಧ’ ಎಂದು ಕರೆಯಲ್ಪಡುವ ಹಾವಿನ ವಿಷವು ಕುಷ್ಠರೋಗ, ಕಡಿಮೆ ದೃಷ್ಟಿ, ಕೂದಲು ಉದುರುವಿಕೆ ಚಿಕಿತ್ಸೆಗೆ ಸಂಬಂಧಿಸಿದೆ ಮತ್ತು ಕಾಮೋತ್ತೇಜಕ ಎಂದು ಹೇಳಲಾಗುತ್ತದೆ.

ವಿಯೆಟ್ನಾಂನ ರಾಜಧಾನಿ ಹನೋಯ್‌  ಹಾವಿನ ಹಳ್ಳಿಗೆ ಹೆಸರುವಾಸಿಯಾಗಿದೆ. ಅಲ್ಲಿ ಹಾವುಗಳಿಂದ ತಯಾರಿಸಿದ ವಿಲಕ್ಷಣ ಭಕ್ಷ್ಯಗಳನ್ನು ನೀಡುವ ರೆಸ್ಟೋರೆಂಟ್‌ಗಳಿಂದ ಕೂಡಿದ ಬೀದಿಗಳನ್ನು ಕಾಣಬಹುದು.ಹಾವಿನ ರಕ್ತ ಮಾತ್ರವಲ್ಲ ವಿಷಕ್ಕೂ ತನ್ನದೇ ಆಗಿರುವ ಬೇಡಿಕೆ ಇದೆ. ಹಾವಿನಿಂದ ತಯಾರಿಸಿದ ಬೇರೆ ಬೇರೆ ಖಾದ್ಯಗಳಿಗೂ ಇಲ್ಲಿ ಬೇಡಿಕೆ ಹೆಚ್ಚಾಗಿದೆ.ಹಾವು ಮನುಷ್ಯನಿಗೆ ಕಚ್ಚಿದರೆ ವಿಷ, ಮನುಷ್ಯ ಸಾಯುತ್ತಾನೆ. ಆದರೆ ಇವರು ಹಾವಿನ ಕೆಲವು ಪ್ರಭೇದಗಳನ್ನು ಬಳಕೆ ಮಾಡಿ ಖಾದ್ಯ ಮತ್ತು, ಪಾನೀಯವಾಗಿ ಸೇವನೆ ಮಾಡುವುದರ ಜತೆ ನೇರವಾಗಿ ಹಾವಿನ ರಕ್ತವನ್ನೇ ಕುಡಿದು ಅನೇಕ ಕಾಯಿಲೆಗೆ ಮದ್ದಾಗಿ ಹೇಗೆ ಪರಿವರ್ತಿಸಿ ಕೊಂಡಿದ್ದಾರೆ? ಇದು ಹೇಗೆ ಸಾಧ್ಯ? ಇವರಿಗೆ ಮೊದಲಿನಿಂದಲೂ ರೂಢಿ ಆಗಿರುವುದರಿಂದ ಏನು ಅಪಘಾತ ಸಂಭವಿಸಲ್ವಾ ಎನ್ನುವ ಪ್ರಶ್ನೆ ಮಾತ್ರ ಇನ್ನೂ ನಿಗೂಢವಾಗಿದೆ.

Related posts

‘ಕೈ ನಡುಕ, ಅಸ್ಪಷ್ಟ ಮಾತು’ ಪುನೀತ್ ರಾಜ್ ಕುಮಾರ್ ನ ಆಪ್ತ ವಿಶಾಲ್‌ ಗೆ ಏನಾಗಿದೆ..? ನಟನ ಆಘಾತಕಾರಿ ವಿಡಿಯೋ ವೈರಲ್..!

ಹೆಚ್ಚು ವೇತನದ ಆಸೆಗೆ ವಿದೇಶಕ್ಕೆ ಹಾರಿದ ಕರ್ನಾಟಕದ ಯುವಕರು! ಕುವೈತ್‌ನಲ್ಲಿ ಒಂಟೆ ಕಾಯೋ ಕೆಲಸ ಮಾಡಿದ ಯುವಕರು ಬಿಚ್ಚಿಟ್ಟ ರಹಸ್ಯವೇನು?

ರಾಹುಲ್ ಗಾಂಧಿಯನ್ನು ದೇವಾಲಯ ಪ್ರವೇಶಕ್ಕೆ ತಡೆದದ್ದೇಕೆ..? ಧರಣಿ ಕುಳಿತ ರಾಹುಲ್