ಕೊಡಗು

ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲಿಯೇ ಲಾರಿ ನಿಲ್ಲಿಸಿ ನಿದ್ರೆಗೆ ಜಾರಿದ ಚಾಲಕ

ಮಡಿಕೇರಿ: ಇಲ್ಲಿನ ಚೈನ್ ಗೇಟ್‌ ಬಳಿ ಮದ್ಯದ ನಶೆಯಲ್ಲಿ ಚಾಲಕನೊಬ್ಬ ನಡು ರಸ್ತೆಯಲ್ಲಿಯೇ ತನ್ನ ಲಾರಿ ನಿಲ್ಲಿಸಿ ನಿದ್ರೆಗೆ ಜಾರಿದ ಘಟನೆ ನಡೆದಿದೆ. ಆತನೊಂದಿಗೆ ಕ್ಲೀನರ್ ಕೂಡ ಇದ್ದು ಆತನೂ ಕೂಡ ಕುಡಿದು ಆತನೊಂದಿಗೆ ನಿದ್ರೆಗೆ ಶರಣಾಗಿದ್ದ ಅನ್ನುವುದು ವಿಶೇಷ.

ಪಾನಮತ್ತರಿಬ್ಬರ ಅವಾಂತರವು ಅದೇ ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಇಬ್ಬರಿಗೂ ಚೆನ್ನಾಗಿ ಕ್ಲಾಸ್ ಕೊಟ್ಟು ವಾಹನವನ್ನು ಸೈಡ್ ಗೆ ಹಾಕಿಸಿರುವ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ. ಚಾಲಕ ಹೆಚ್ಚು ಕುಡಿದು ಕೂರಲೂ ಆಗದ ಸ್ಥಿತಿಯಲ್ಲಿದ್ದ, ಕ್ಲೀನರ್ ಕೂಡ ಅದೇ ಸ್ಥಿತಿಯಲ್ಲಿದ್ದ. ಇಂತಹ ಪರಿಸ್ಥಿತಿಯಲ್ಲಿ ಆತ ವಾಹನ ಚಲಾಯಿಸದೆ ನಿಂತಿದ್ದರಿಂದ ಭಾರಿ ದುರಂತವೊಂದು ತಪ್ಪಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related posts

ಲಕ್ಷಾಂತರ ರೂ. ಮೌಲ್ಯದ ಹಶೀಶ್ ಆಯಿಲ್ ಮಾರಾಟ ಯತ್ನ, ಮೂವರು ಅರೆಸ್ಟ್‌

ದೇವರಕೊಲ್ಲಿ ಬಳಿ ಬಿರುಕು ಬಿಟ್ಟ ರಾಷ್ಟ್ರೀಯ ಹೆದ್ದಾರಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್‌. ರವಿ ಕುಮಾರ್,ಸಿಇಒ ಡಾ. ಕುಮಾರ್ ದಿಢೀರ್ ವರ್ಗಾವಣೆ