ಕ್ರೈಂ

ಕೊಡಗು: ವರದಕ್ಷಿಣೆ ಕಿರುಕುಳ, ಅಯ್ಯಂಗೇರಿಯ ನವ ವಿವಾಹಿತೆ ಆತ್ಮಹತ್ಯೆ

ಕೊಡಗು: ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ವಧು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ನಡೆದಿದೆ. ಅಮೀರಾ(20) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಈಕೆಗೆ 11 ತಿಂಗಳ ಹಿಂದೆ ರುವೈಸ್ ಎಂಬಾತನೊಂದಿಗೆ ವಿವಾಹವಾಗಿತ್ತು. ಆ ಬಳಿಕ ಆತ ವರದಕ್ಷಿಣೆ ಕೊಡುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ನೇಣು ಬಿಗಿದುಕೊಂಡು ಅಮಿರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Related posts

ಪುತ್ತೂರು: ಹಿಂದೂ ಯುವಕನ ಅಡ್ಡಗಟ್ಟಿ ನಾಲ್ವರಿಂದ ಹಲ್ಲೆ, ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ನಡೆದಿದ್ದೇನು..?

ಹಂದಿಗೆ ಇಟ್ಟ ಉರುಳಿಗೆ ಚಿರತೆ ಮತ್ತು 2 ಮರಿಗಳು ಬಲಿ..! ಈ ಬಗ್ಗೆ ಅರಣ್ಯಧಿಕಾರಿಗಳು ಹೇಳಿದ್ದೇನು? ಆ ನಾಲ್ವರು ಸಿಕ್ಕಿ ಬಿದ್ದದ್ದು ಹೇಗೆ?

ಸುಳ್ಯ ತಾಲೂಕು ಕಚೇರಿಯಲ್ಲಿ ದಿಢೀರ್ ಕುಸಿದು ಬಿದ್ದ ವ್ಯಕ್ತಿ, ಸಾವಿಗೀಡಾಗಿದ್ದನ್ನು ಖಚಿತಪಡಿಸಿದ ಸರ್ಕಾರಿ ಆಸ್ಪತ್ರೆಯ ವೈದ್ಯರು