ಕರಾವಳಿ

ಉಡುಪಿಯಲ್ಲಿ ನನ್ನ ಗಂಡನಿಗೆ ಮುಸ್ಲಿಂ ಮಹಿಳೆ ಜೊತೆ ಅಕ್ರಮ ಸಂಬಂಧವಿತ್ತು,ನ್ಯಾಯ ಕೇಳಿ ಬರುವ ಮಹಿಳೆಯರನ್ನು ಮಂಚಕ್ಕೆ ಕರಿತಾರೆ-ಪಿಎಸ್‌ಐ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ ಪತ್ನಿ,ಕಳಸ ಠಾಣೆಯಲ್ಲಿ ಪ್ರಕರಣ ದಾಖಲು

ನ್ಯೂಸ್‌ ನಾಟೌಟ್‌: ಚಿಕ್ಕಮಗಳೂರಿನಲ್ಲಿ ಪಿಎಸ್‌ಐ ಪತ್ನಿಯೊಬ್ಬರು ಪತಿ ಕುರಿತು ಗಂಭೀರವಾದ ಆರೋಪಗಳನ್ನು ಮಾಡಿದ್ದು,ಈ ವಿಚಾರ ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.ಗಂಡನಿಗೆ ಉಡುಪಿಯಲ್ಲಿ ಮುಸ್ಲಿಂ ಮಹಿಳೆ ಜೊತೆ ಅಕ್ರಮ ಸಂಬಂಧವಿತ್ತು, ಮಾತ್ರವಲ್ಲದೇ ನ್ಯಾಯ ಕೇಳಿ ಬರುವ ಮಹಿಳೆಯರನ್ನು ಅವರು ಮಂಚಕ್ಕೆ ಕರೆದು ಸಿಕ್ಕಿಬಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಿಳೆಯ ಪತಿ ಕಳಸದಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡುತ್ತಿದ್ದು, ಅವರು ಪೊಲೀಸ್ (Police) ಠಾಣೆಗೆ ನ್ಯಾಯ ಕೇಳಿ ಬರುತ್ತಿದ್ದ ಮಹಿಳೆಯರನ್ನು ಮಂಚಕ್ಕೆ ಕರೆದು ಸಿಕ್ಕಿಬಿದ್ದಿದ್ದಾರೆ ಎಂದು ಪತಿ ನಿತ್ಯಾನಂದಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಾತ್ರವಲ್ಲದೇ 50 ಲಕ್ಷ ರೂ. ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡುತ್ತಾರೆ ಎಂದು ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.

ಇವಿಷ್ಟು ಮಾತ್ರವಲ್ಲದೇ ಪತಿ ತಂಗಿ, ತಂಗಿ ಗಂಡನಿಂದಲೂ ಹಲ್ಲೆ, ಅವಾಚ್ಯ ಶಬ್ಧಗಳ ಬಳಕೆ ಮಾಡಿ ನನ್ನನ್ನು ನಿಂದಿಸುತ್ತಿದ್ದು,ಇದೀಗ ಪತಿ ಠಾಣೆಗಳಿಗೆ ಕಷ್ಟ ಎಂದು ಹೇಳಿಕೊಂಡು ಬರುವ , ಪಾಸ್‌ಪೋರ್ಟ್‌ಗೆಂದು ಬರುವ ಮಹಿಳೆಯರನ್ನ ಮಂಚಕ್ಕೆ ಕರೆಯುತ್ತಾರೆ ಎಂದು ಆರೋಪಿಸಿದ್ದಾರೆ.

ಉಡುಪಿಯ ಕಾಪು ಠಾಣೆಯಲ್ಲಿದ್ದಾಗ ಮುಸ್ಲಿಂ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು,ನಾನು ಅವರ ರೂಂಗೆ ಹೋದಾಗ ಕಾಂಡೋಮ್‌ಗಳು ಪತ್ತೆಯಾಗಿದ್ದವು ಎಂದು ಪತ್ನಿ ಹೇಳಿದ್ದಾರೆ. ಈ ವೇಳೆ ಅವರನ್ನು ಅನೇಕ ಬಾರಿ ರಕ್ಷಿಸುವ ಕೆಲಸಗಳು ಕೂಡ ನಡೆದಿವೆ ಎಂದು ಹೇಳಿದ್ದಾರೆ. ಕಾಪುವಿನಲ್ಲಿ ಮುಸ್ಲಿಮರು ಪಿಎಸ್‌ಐಗೆ ಹೊಡೆಯಲು ಬಂದಾಗ ಎಸ್‌ಪಿ ಅವರನ್ನು ರಕ್ಷಿಸಿದ್ದರು. ಕೋಟಾ ಠಾಣೆಯಲ್ಲೂ ಮಹಿಳೆಗೆ ನ್ಯಾಯ ಕೊಡಿಸುತ್ತೇನೆ ಎಂದು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಬೆಂಗಳೂರಿನಲ್ಲೂ ಮಹಿಳೆ ಒಬ್ಬಳನ್ನು ಮಂಚಕ್ಕೆ ಕರೆದು ಸಿಕ್ಕಿಬಿದ್ದಿದ್ದರು. ಆ ಮಹಿಳೆಗೆ 4 ಲಕ್ಷ ರೂ. ಹಣ ಕೊಟ್ಟು ಬಚಾವ್ ಆಗಿದ್ದಾರೆ ಎಂದು ಆರೋಪಿಸಿಸಲಾಗಿದೆ.ಈ ಸಂಬಂಧ ಪಿಎಸ್‌ಐ ಪತ್ನಿ ನೀಡಿದ ದೂರಿನ ಅಡಿಯಲ್ಲಿ ಕಳಸ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Related posts

ಸುಳ್ಯ:ಕೆ.ವಿ.ಜಿ ಆಯುರ್ವೇದ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ‘ಅಭಿನವ- 2024’,ಕಾರ್ಯಕ್ರಮದ ವಿಶೇಷತೆಗಳೇನು?ಇಲ್ಲಿದೆ ವರದಿ..

ದ.ಕ ಜಿಲ್ಲೆಯಲ್ಲಿ ಸಂಚರಿಸುವ ಆಟೋರಿಕ್ಷಾಗಳಿಗೆ ಇನ್ಮುಂದೆ ಕಲರ್ ಕೋಡ್

ಪುತ್ತೂರು: ಫೆ.3 ರಂದು ನಡೆಯಲಿದೆ ಅದ್ದೂರಿ ಬಿರುಮಲೋತ್ಸವ -2024,ಪ್ರಕೃತಿ ಸೌಂದರ್ಯದ ಮಧ್ಯೆ ಸ್ಪರ್ಧೆ,ಗಾಯನ,ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ..!