Uncategorized

ಮದುವೆಯಾಗಿ 30 ದಿನಕ್ಕೆ ಪ್ರಿಯತಮನೊಂದಿಗೆ ಓಡಿಹೋದ ಹೆಂಡ್ತಿ..!ಪತ್ನಿ,ಪ್ರಿಯಕರನನ್ನು ಕೊಚ್ಚಿ ಕೊಲೆಗೈದ ಮಾಜಿ ಪತಿ..!

ನ್ಯೂಸ್‌ ನಾಟೌಟ್‌ : ಮದುವೆಯಾಗಿ ಕೇವಲ ಒಂದು ತಿಂಗಳಿಗೆ ಮತ್ತೊಬ್ಬನನ್ನು ಪ್ರೀತಿಸಿ ಓಡಿ ಹೋದ ಹೆಂಡತಿ ಹಾಗೂ ಪ್ರಿಯತಮನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಬಗ್ಗೆ ವರದಿಯಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರ ವಲಯದಲ್ಲಿ ಈ ಘಟನೆ ನಡೆದಿದ್ದು ಬೆಚ್ಚಿ ಬೀಳಿಸುವಂತಿದೆ.

ಹೀನಾಕೌಸರ್ ಸುಧಾರಾಣೆ (19), ಯಾಸಿನ್ ಬಾಗೊಡೆ (21) ಕೊಲೆಯಾದವರೆಂದು ತಿಳಿದು ಬಂದಿದೆ. ತೌಫಿಕ್ ಕ್ಯಾಡಿ (24) ಕೊಲೆ ಮಾಡಿದ ಆರೋಪಿ. ಹಲ್ಲೆ ವೇಳೆ ಬಿಡಿಸಲು ಬಂದಿದ್ದ ಅಮಿನಾಬಾಯಿ ಬಾಗೂಡ, ಹಾಗೂ ಮಾವ ಮುಸ್ತಫಾ ಮುಲ್ಲಾ ಮೇಲೆ ಆರೋಪಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅವರನ್ನು ಮಿರಜ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೀನಾಕೌಸರ್ ಸುದಾರಾಣೆ ಹಾಗೂ ತೌಫಿಕ್‌ ಕಳೆದ 4 ತಿಂಗಳ ಹಿಂದೆ ಅದ್ದೂರಿ ಮದುವೆಯಾಗಿತ್ತು. ಆದರೆ, ಹೀನಾ ಮದುವೆಯಾದ ಒಂದೇ ತಿಂಗಳಿಗೆ ಯುವಕ ಯಾಸಿನ್‌ನ್ನು ಪ್ರೀತಿಸಿ ಆತನೊಂದಿಗೆ ಓಡಿ ಹೋಗಿದ್ದಳು ಎನ್ನಲಾಗಿದೆ. ಬಳಿಕ ಒಂದೂವರೆ ತಿಂಗಳ ಬಳಿಕ ಸಮಾಜದ ಹಿರಿಯರ ಸಮ್ಮುಖದಲ್ಲಿ ಗ್ರಾಮಸ್ಥರು ರಾಜಿ ಪಂಚಾಯ್ತಿ ಮಾಡಿದ್ದರು. ಬಳಿಕ ತೌಫಿಕ್‌ನಿಂದ ಹೀನಾ ದೂರವಾಗಿದ್ದಳು.ನಂತರ ಹಿರಿಯರು ಯಾಸಿನ್ ಜೊತೆ ಹೀನಾಕೌಸರ್ ಮದುವೆ ಮಾಡಿಸಿದ್ದರು. ಆದರೆ, ಮಂಗಳವಾರ ಸಂಜೆ ಕೋಪದಲ್ಲಿ ಮಾಜಿ ಪತಿ ತೌಫಿಕ್, ಹೀನಾಕೌಸರ್ ಹಾಗೂ ಪ್ರಿಯತಮ ಯಾಸಿನ್ ಇದ್ದ ಮನೆಗೆ ತೆರಳಿ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಪೊಲೀಸ್ ಠಾಣೆಗೆ ಹೋಗುವುದಾಗಿ ಹೇಳಿ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ತೌಫಿಕ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಹಂತಕನ ಪತ್ತೆಗೆ ಎರಡು ತಂಡಗಳನ್ನು ರಚನೆ ಮಾಡಲಾಗಿದೆ.

Related posts

ಮದುವೆ ದಿನ ಹಗಲಿಡೀ ನಾಪತ್ತೆಯಾದ ವರ ಸಂಜೆ ವೇಳೆ ದಿಢೀರ್ ಪ್ರತ್ಯಕ್ಷ

32 ವರ್ಷದ ಬಳಿಕ ತನ್ನವರನ್ನು ಹುಡುಕಿಕೊಂಡು ಮೈಸೂರಿಗೆ ಬಂದ ಸ್ವೀಡನ್ ಮಹಿಳೆ..!ಮೈಸೂರಿನಿಂದ ಸ್ವೀಡನ್‌ಗೆ ಹೋಗಿದ್ದೇಗೆ?ಏನಿದು ಘಟನೆ?

ಹಿಂದೂ-ಮುಸ್ಲಿಂ ಸೇರಿ ಶಿವನ ಸನ್ನಿಧಿಯ ಜೀರ್ಣೋದ್ದಾರ ಮಾಡಿದ್ರು