Uncategorized

ನಿಮ್ಮಲ್ಲಿ ಪಿಎಫ್‌ ಖಾತೆ ಇದೆಯಾ..? ಹಣ ಬೇರೆಯವರ ಪಾಲಾಗದಂತೆ ಎಚ್ಚರಿಕೆ ವಹಿಸಿ

ನ್ಯೂಸ್ ನಾಟೌಟ್: ಭಾರತದಾದ್ಯಂತ ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್‌) ಖಾತೆ ಹೊಂದಿರುವ ಲಕ್ಷಾಂತರ ಉದ್ಯೋಗಿಗಳು ಇದ್ದಾರೆ .

ಉದ್ಯೋಗಿಗಳು ತಮ್ಮ ಮುಂದಿನ ಉತ್ತಮ ಭವಿಷ್ಯಕ್ಕಾಗಿ, ಸಂಬಳದ ಒಂದು ಭಾಗವನ್ನು ಪಿಎಫ್‌ನಲ್ಲಿ ವಿನಿಯೋಗಿಸಿರುತ್ತಾರೆ. ಮುಂದೊಂದು ದಿನ ಎಲ್ಲಾ ಹಣವು ಆ ವ್ಯಕ್ತಿ ನಿವೃತ್ತರಾದಾಗ ನೇರವಾಗಿ ಖಾತೆದಾರರಿಗೆ ಸೇರುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ, ಅನಾರೋಗ್ಯ, ಮಗುವಿನ ಶಿಕ್ಷಣ ಅಥವಾ ಮದುವೆಯಂತಹ ಹಣಕಾಸಿನ ತುರ್ತು ಸ್ಥಿತಿಯಲ್ಲೂ ನಿಮಗೆ ಅಗತ್ಯವಿದ್ದರೆ ಈ ಹಣವನ್ನು ನೀವು ಬಳಸಿಕೊಳ್ಳಲು ಅವಕಾಶವಿದೆ.

ಇತ್ತೀಚಿನ ದಿನದಲ್ಲಿ ಸೈಬರ್ ಕ್ರೈಂ ಘಟನೆಗಳು ಹೆಚ್ಚಾಗುತ್ತಿವೆ. ಅದೇರೀತಿ ಉದ್ಯೋಗಗಳನ್ನು ಬದಲಾಯಿಸುವಾಗ ಜನರು ವಂಚನೆಗೆ ಒಳಗಾಗುತ್ತಾರೆ . ಉದ್ಯೋಗ ಬದಲಾವಣೆ ಸಂದರ್ಭದಲ್ಲಿ ವ್ಯಕ್ತಿಗಳ ಇಪಿಎಫ್ಒ ಮಾಹಿತಿಯನ್ನು ನವೀಕರಿಸುವ ನೆಪದಲ್ಲಿ ವ್ಯಕ್ತಿಗಳಿಂದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ. ನಂತರ ಈ ವಿವರಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಖಾತೆದಾರರ ಹಣವನ್ನು ದೋಚುತ್ತಾರೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ಬಹಿರಂಗಪಡಿಸಬೇಡಿ. ಇದರ ಜೊತೆಗೆ ನೀವು ವಂಚನೆಗೆ ಒಳಗಾದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೆ ನೀವು ಹಣ ಕಳೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು.

Related posts

ಗೋಕಾಕ್‌ನಲ್ಲೂ ಸಾಮೂಹಿಕ ಅತ್ಯಾಚಾರ: ಅಪ್ರಾಪ್ತೆ ಕುಟುಂಬಕ್ಕೆ ಬೆದರಿಕೆ

ಹಾಡು ಆಯ್ತು, ಡಾನ್ಸೂ ಆಯ್ತು.. ಇದೀಗ ಸೀರಿಯಲ್‌ನಲ್ಲೂ’ಕರಿಮಣಿ’, ಕರಿಮಣಿ ಮಾಲೀಕ ಯಾರು?

ಪತ್ನಿ ಅನುಷ್ಕಾ ಶರ್ಮಾ ಜೊತೆ  ಬೀಚ್‌ನಲ್ಲಿ ಕೊಹ್ಲಿ ಮೋಜು-ಮಸ್ತಿ..! ಶರ್ಟ್‌ಲೆಸ್ ಫೋಟೋ ವೈರಲ್