ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಗೆ ಅಪ್ಪಳಿಸಲಿರುವ ‘ಬಿಪರ್ ಜಾಯ್‌’ ಚಂಡಮಾರುತ ಎಷ್ಟು ಅಪಾಯಕಾರಿ? ಮಂಗಳೂರಿನ ಮೂರು ಬೀಚ್‌ಗಳ ಪ್ರವೇಶಕ್ಕೆ ನಿರ್ಬಂಧಿಸಿದ್ದೇಕೆ?

ನ್ಯೂಸ್ ನಾಟೌಟ್: ಅಲೆಗಳ ಅಬ್ಬರ ಜೋರಾಗಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬೀಚ್‌ಗಳಾದ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರದ ಬೀಚ್‌ಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.
ಬುಧವಾರ ಬೆಳಗ್ಗಿನಿಂದ ಅಲೆಗಳ ಅಬ್ಬರ ಜೋರಾಗಿದೆ. ಬಿಪರ್ ಜಾಯ್‌ ಚಂಡ ಮಾರುತ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದ್ದು ಚಂಡಮಾರುತದ ಪ್ರಭಾವಳಿ ಕರಾವಳಿ ಸಮುದ್ರ ತೀರದಲ್ಲಿ ಗೋಚರಿಸುತ್ತಿದೆ ಎಂದು ತಿಳಿದುಬಂದಿದೆ.

ಮುಂಜಾಗ್ರತ ಕ್ರಮವಾಗಿ ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಸಮುದ್ರ ತೀರಕ್ಕೆ ಬರುವವರನ್ನು ವಾಪಸ್ ಕಳಿಸಲಾಗುತ್ತಿದೆ. ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರಪಟ್ನ, ಕೈಕೋ, ಹಿಲೆರಿಯಾನಗರ, ಸುಭಾಷನಗರ,ಸಮ್ಮರ್‌ ಸ್ಯಾಂಡ್‌, ಸೋಮೇಶ್ವರ, ಉಚ್ಚಿಲ, ಬಟ್ಟಂಪಾಡಿ ಸಮುದ್ರ ತೀರದ ಜನರಿಗೆ ಸ್ಥಳೀಯಾಡಳಿತ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಈ ಚಂಡಮಾರುತಕ್ಕೆ ಬಿಪರ್ ಜಾಯ್ ಎಂದು ಹೆಸರಿಡಲಾಗಿದೆ. ಬಾಂಗ್ಲಾದೇಶದಿಂದ ಈ ಹೆಸರು ಬಂದಿದೆ.

ಬಿಪರ್‌ಜಾಯ್ ಎಂದರೆ ಹವಾಮಾನ ವೈಪರೀತ್ಯ ಅಥವಾ ವಿಪತ್ತು ಅನ್ನುವ ಅರ್ಥವಿದೆ. ಈ ಪದವನ್ನು ವಿಶ್ವ ಹವಾಮಾನ ಸಂಸ್ಥೆ 2020ರಲ್ಲಿ ಅಳವಡಿಸಿಕೊಂಡಿದೆ. ಅರಬ್ಬಿ ಸಮುದ್ರ ಸೇರಿ ಆಯಾ ಪ್ರಾದೇಶಿಕ ನಿಯಮಗಳಿಗೆ ಅನ್ವಯವಾಗುವಂತೆ ಚಂಡಮಾರುತಗಳಿಗೆ ಹೆಸರಿಡಲಾಗುತ್ತದೆ. ಬಿಪರ್‌ಜಾಯ್ ಚಂಡಮಾರುತದ ಮುಂದಿನ ಮೂರ್ನಾಲು ದಿನಗಳಲ್ಲಿ ಗಂಟೆಗೆ 135-160 ಕಿ.ಮೀ. ವೇಗದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ.

Related posts

ಆಟೋ ಚಾಲಕ ಕೆರೆಗೆ ಹಾರಿ ಆತ್ಮಹತ್ಯೆ ಶಂಕೆ

ಸಂಪಾಜೆ:ಜೇನು ತೆಗೆಯಲೆಂದು ಹೋದ ಯುವಕನ ಬಾಳಲ್ಲಿ ವಿಧಿಯಾಟ,ಮರದಿಂದ ಕೆಳಕ್ಕೆ ಬಿದ್ದು ಮೃತ್ಯು

ಉದಯ್ ಕುಮಾರ್ ಲಾಯಿಲಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ