Latestಕ್ರೈಂರಾಜಕೀಯರಾಜ್ಯ

‘ನಾನು ಡಿಕೆ ಸುರೇಶ್ ಪತ್ನಿ..’ ಎಂದು ವಿಡಿಯೋ ಹರಿಬಿಟ್ಟ ಮಹಿಳೆ ವಿರುದ್ಧ ಎಫ್.ಐ.ಆರ್..! ದೂರಿನಲ್ಲೇನಿದೆ..?

773

ನ್ಯೂಸ್ ನಾಟೌಟ್: ಮಾಜಿ ಸಂಸದ ಡಿಕೆ ಸುರೇಶ್ ಅವರ ಪತ್ನಿ ಎಂದು ಸಾಮಾಜಿಕ ಜಾಲತಾಣಗಳಾದ ಫೇಸ್‌ ಬುಕ್ ಮತ್ತು ಇನ್‌ ಸ್ಟಾಗ್ರಾಮ್‌ ನಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆಯ ವಿರುದ್ಧ ರಾಮನಗರ ಸೆನ್ ಪೊಲೀಸರು ಎಫ್‌ ಐಆರ್ ದಾಖಲಿಸಿದ್ದಾರೆ.

ಪವಿತ್ರ ಎಂಬ ಮಹಿಳೆಯ ವಿರುದ್ಧ ಡಿಕೆ ಸುರೇಶ್ ಪರ ವಕೀಲ ಪ್ರದೀಪ್ ಎಂಬವರು ದೂರು ದಾಖಲಿಸಿದ್ದಾರೆ.

ಏಪ್ರಿಲ್ 8, 2025 ರಂದು ಆರೋಪಿ ಮಹಿಳೆ, ಡಿಕೆ ಸುರೇಶ್ ಅವರ ಫೋಟೊದೊಂದಿಗೆ ತನ್ನ ಫೋಟೊವನ್ನು ಎಡಿಟ್ ಮಾಡಿ, ತಾನು ಅವರ ಪತ್ನಿ ಎಂದು ಫೇಸ್‌ ಬುಕ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಕೃತ್ಯವನ್ನು ದುರುದ್ದೇಶದಿಂದ ಮಾಡಿ, ಡಿಕೆ ಸುರೇಶ್ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ವಕೀಲ ಪ್ರದೀಪ್ ದೂರಿನಲ್ಲಿ ತಿಳಿಸಿದ್ದಾರೆ.

ರಾಮನಗರ ಸೆನ್ ಪೊಲೀಸರು ಈ ಸಂಬಂಧ ಎಫ್‌ ಐಆರ್ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ತನಿಖೆಯ ಫಲಿತಾಂಶದ ಬಗ್ಗೆ ಕಾದು ನೋಡಬೇಕಿದೆ.

ಪಹಲ್ಗಾಮ್ ದಾಳಿ: ಕರ್ನಾಟಕದ ಕರಾವಳಿ ಸಮುದ್ರ ಮಾರ್ಗಗಳಲ್ಲಿ ಉಗ್ರರು ನುಸುಳುವ ಶಂಕೆ..! ಆಳ ಸಮುದ್ರದಲ್ಲಿ ಗಸ್ತು ಕಾರ್ಯಚರಣೆ..!

See also  ಮಾರುತಿ 800 ಕಾರಿನಲ್ಲಿ ದನ ಸಾಗಾಟ, ವ್ಯಕ್ತಿ, ಕಾರು ಪೊಲೀಸ್ ವಶಕ್ಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget