ಕರಾವಳಿ

ಧರ್ಮಸ್ಥಳ: ತಡರಾತ್ರಿ ಆಟೋದಲ್ಲಿ ಹಿಂದೂ ಹುಡುಗಿಯನ್ನು ಕೂರಿಸಿಕೊಂಡು ಹೋಗಿದ್ದಕ್ಕೆ ಚಾಲಕನಿಗೆ ಥಳಿತ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ನೈತಿಕ ಪೊಲೀಸ್ ಗಿರಿ

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಮತ್ತೆ ವರದಿಯಾಗುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ ಅನ್ನುವಂತಹ ವಿಚಾರ ಹೊರಬಿದ್ದಿದೆ.

ಧರ್ಮಸ್ಥಳ ದ್ವಾರದ ಬಳಿ ಬಸ್ ನಿಲ್ದಾಣದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿರುವುದಾಗಿ ವರದಿಯಾಗಿದೆ. ಬೆಳ್ತಂಗಡಿಯ ಮುಸ್ಲಿಂ ಆಟೋ ಚಾಲಕನೊಬ್ಬ ರಾತ್ರಿ 9 ಗಂಟೆಗೆ ತನ್ನ ಆಟೋದಲ್ಲಿ ಹಿಂದೂ ಹುಡುಗಿಯನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ತಂಡವೊಂದು ತಡೆ್ದು ಉಜಿರೆ ನಿವಾಸಿ ಮೊಹಮ್ಮದ್ ಆಶಿಕ್ (22 ವರ್ಷ) ಎಂಬಾತನ ಮೇಲೆ ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ. ಸದ್ಯ ಧರ್ಮಸ್ಥಳದಲ್ಲಿ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಘಟನೆ ನಡೆದಿದೆ.

ಕರಾವಳಿಯ ವಿವಿಧ ಕಡೆ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಕಳೆದ ಕೆಲವು ದಿನಗಳಲ್ಲಿ ಹೆಚ್ಚುತ್ತಿದೆ. ಉಡುಪಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ವರದಿಯಾದ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮತ್ತೆ ಇಂತಹ ಘಟನೆ ನಡೆಯುತ್ತಿದೆ. ಪೊಲೀಸರು ಹಾಗೂ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಯಾವ ಕ್ರಮವನ್ನು ತೆಗೆದುಕೊಳ್ಳುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ.

Related posts

ಬೆಳ್ತಂಗಡಿ: ಆಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

ಮೂರು ಇಂಚು ಎತ್ತರವಾಗಲು 12 ಕೋಟಿ ರು. ವೆಚ್ಚ ಮಾಡಿದ ಭೂಪ..!

ಮರದ ಕೊಂಬೆ ಹಿಡಿದು ಹತ್ತು ಜನರ ಜೀವ ಉಳಿಸಿದ ಬೋಟ್ ಚಾಲಕ