ಕ್ರೈಂವೈರಲ್ ನ್ಯೂಸ್

ಪತ್ನಿ ಜೊತೆ ಮೂರು ಸಾಕುನಾಯಿಗೂ ಜೀವನಾಂಶ ಕೊಡುವಂತೆ ಪತಿಗೆ ಕೋರ್ಟ್‌ ಆದೇಶ! ಏನಿದು ವಿಚಿತ್ರ ತೀರ್ಪು? ಈ ಬಗ್ಗೆ ಆಕೆಯ ಪತಿ ಹೇಳಿದ್ದೇನು?

302

ನ್ಯೂಸ್ ನಾಟೌಟ್ : 55 ವರ್ಷದ ಮಹಿಳೆಯೊಬ್ಬರು ತಮ್ಮ ಗಂಡ ಹಲ್ಲೆ ಮಾಡುತ್ತಾನೆ ಎಂದು ಅವನಿಂದ ದೂರವಾಗಿ ಡಿವೋರ್ಸ್ ಪಡೆದುಕೊಂಡಿದ್ದರು. ಮಾತ್ರವಲ್ಲ, 70 ಸಾವಿರ ಜೀವನಾಂಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಮದುವೆ ಡಿವೋರ್ಸ್‌ನಲ್ಲಿ ಕೋರ್ಟ್‌ ಪತಿಗೆ, ಪತ್ನಿ ಜತೆ 3 ನಾಯಿಗೂ ಜೀವನಾಂಶ ಕೊಡುವಂತೆ ತೀರ್ಪು ನೀಡಿ ಆಶ್ಚರ್ಯ ಮೂಡಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಮಾತ್ರವಲ್ಲ ಅರ್ಜಿಯಲ್ಲಿ ಮಹಿಳೆ, ಗಂಡನಿಂದ ಬೇರೆಯಾಗಿರುವ ನಾನು, ಮೂರು ರಾಟ್‌ವೀಲರ್‌ ನಾಯಿಗಳು ಹಾಗೂ ಇಬ್ಬರು ಮಕ್ಕಳನ್ನು ಸಾಕುತ್ತಿದ್ದೇನೆ ಜೊತೆಗೆ ನನಗೆ ಕೆಲಸವೂ ಇಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನು ಆಲಿಸಿದ ಇಲ್ಲಿನ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ,’ಪ್ರಾಣಿಗಳು ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಮಹಿಳೆ ಹಾಗೂ ಆಕೆಯ 3 ನಾಯಿಗಳಿಗೂ ಸೇರಿ ತಿಂಗಳಿಗೆ 50 ಸಾವಿರ ರೂಪಾಯಿ ಜೀವನಾಂಶ ನೀಡಬೇಕು’ ಎಂದು ಪತಿಗೆ ಆದೇಶಿಸಿದೆ.

ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಮಲ್ಸಿಂಗ್ ರಜಪೂತ್ ಅವರು ಡಿವಿ ಆಕ್ಟ್‌ನ ಸೆಕ್ಷನ್ 12 ರ ಅಡಿಯಲ್ಲಿ 55 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ ಮಧ್ಯಂತರ ಜೀವನಾಂಶ ಪ್ರಕರಣದ ಅಧ್ಯಕ್ಷತೆ ವಹಿಸಿ ಅವಲೋಕನ ಮಾಡಿದ್ದರು. ಮಹಿಳೆ ತನ್ನ ಮೂರು ಸಾಕುಪ್ರಾಣಿ ರೊಟ್ವೀಲರ್ ಎಂಬ ಜಾತಿಯ ನಾಯಿಗಳ ಪೋಷಣೆಗೆ ಹಣವನ್ನು ಒಳಗೊಂಡಂತೆ ಜೀವನಾಂಶವನ್ನು ಕೋರಿದ್ದರು ಎನ್ನಲಾಗಿದೆ. ಪತಿ ಈ ಬೇಡಿಕೆಯನ್ನು ವಿರೋಧಿಸಿದ್ದರು ಮತ್ತು ಇದು ನಿರ್ವಹಣೆಯ ವೆಚ್ಚ ಪಡೆಯಲು ಸಾಕು ಪ್ರಾಣಿಗಳನ್ನು ಆಧಾರವಾಗಿ ಪರಿಗಣಿಸಬಾರದು ಎಂದು ಪತಿ ಪ್ರತಿಪಾದಿಸಿದ್ದರು ಎನ್ನಲಾಗಿದೆ.

ಪತಿಯ ವಾದವನ್ನು ತಳ್ಳಿಹಾಕಿದ ಮ್ಯಾಜಿಸ್ಟ್ರೇಟ್ ರಜಪೂತ್, ಸಾಕುಪ್ರಾಣಿಗಳು ಗೌರವಾನ್ವಿತ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ ಮತ್ತು ಮುರಿದ ಸಂಬಂಧಗಳಿಂದ ಉಂಟಾಗುವ ಭಾವನಾತ್ಮಕ ನೋವನ್ನು ತುಂಬುವ ಮೂಲಕ ವ್ಯಕ್ತಿಗಳು ಆರೋಗ್ಯಕರ ಜೀವನವನ್ನು ನಡೆಸಲು ಅವು ಅನುವು ಮಾಡಿಕೊಡುತ್ತವೆ ಎಂದು ಅವುಗಳಿಗೂ ಪರಿಹಾರ ಮೊತ್ತ ನೀಡುವಂತೆ ಕೋರ್ಟ್ ಆದೇಶಿಸಿದೆ. ಈ ವಿಚಿತ್ರ ತೀರ್ಪಿನ ಕುರಿತಂತೆ ಪತಿಯ ವಿರೋಧದ ನಡುವೆ ಹಲವರು ತೀರ್ಪಿನ ಪರ ಮತ್ತು ವಿರೋಧವಾಗಿ ಮಾತನಾಡುತ್ತಿದ್ದಾರೆ.

See also  ಸರಸ್ವತಿ ಕಾಮತ್ ಗೆ ಹಲ್ಲೆ ಕೇಸ್: ಹರೀಶ್ ಕಂಜಿಪಿಲಿ ಜೈಲು ಶಿಕ್ಷೆ ಅಮಾನತುಗೊಳಿಸಿದ ನ್ಯಾಯಾಲಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget