ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ವಿಚ್ಛೇದನದ ವೇಳೆ ಕಿಡ್ನಿ ವಾಪಸ್ ಕೇಳಿದ ಪತಿ..! ಕೋರ್ಟ್ ನೀಡಿದ ತೀರ್ಪೇನು..? ಮುಂದೇನಾಯ್ತು..?

ನ್ಯೂಸ್‌ ನಾಟೌಟ್‌ : ವಿಚ್ಛೇದನ ಆದಾಗ ಆಸ್ತಿಗಳ ಪಾಲಾಗುವುದು ಮತ್ತು ಜೀವನಾಂಶ ನೀಡುವ ಬಗ್ಗೆ ಕೇಳಿದ್ದೇವೆ ಆದರೆ ಇಲ್ಲಿ ಕೊಟ್ಟ ಕಿಡ್ನಿಯನ್ನೇ ಮತ್ತೆ ಕೇಳಿದ ಘಟನೆ ನಡೆದಿದೆ.2001 ರಲ್ಲಿ, ತನ್ನ ಪತ್ನಿಯ ಜೀವ ಉಳಿಸಲು ಪತಿ ಮುಂದಾಗಿದ್ದು, ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದಾನೆ.

ಆದರೆ ಇದಾದ ಕೆಲವೇ ವರ್ಷಗಳ ಬಳಿಕ ಪತ್ನಿ ವಿಚ್ಛೇದನ ಪಡೆಯಲು ಕೋರ್ಟ್​​​​ಗೆ ಅರ್ಜಿ ಸಲ್ಲಿಸಿದ್ದಳು.ಇದರಿಂದ ಕೋಪಗೊಂಡ ಪತಿ ಕಿಡ್ನಿ ವಾಪಸ್ ಕೇಳಿದ್ದಾನೆ ಎನ್ನಲಾಗಿದೆ.

ವಿಚ್ಛೇದನದ ವೇಳೆ ‘ನನ್ನ ಕಿಡ್ನಿಯನ್ನು ನನಗೆ ಮರಳಿಸು’ ಎಂದು ಪತಿಯೊಬ್ಬ ಪತ್ನಿಗೆ ಕೋರ್ಟ್​​ನಲ್ಲಿ ಬೇಡಿಕೆ ಇಟ್ಟಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಇದಲ್ಲದೆ ಕಿಡ್ನಿ ವಾಪಾಸ್ ಕೊಡಲು ಆಗದ್ದಿದ್ದಲ್ಲಿ 1.2 ಮಿಲಿಯನ್ ಪೌಂಡ್(12.56ಕೋಟಿ ರೂ.) ಹಣ ನೀಡಬೇಕಾಗಿ ಬೇಡಿಕೆಯಿಟ್ಟಿದ್ದಾನೆ ಎನ್ನಲಾಗಿದೆ.ಪತ್ನಿಯ ಎರಡು ಕಿಡ್ನಿಯೂ ವಿಫಲವಾದ್ದುದನ್ನು ತಿಳಿದು ಆಕೆಯನ್ನು ಬದುಕುಳಿಸುವ ಸಲುವಾಗಿ 2001 ರಲ್ಲಿ ಪತಿ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದ. ಆದರೆ ವರ್ಷಗಳ ನಂತರ ಇಬರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂದ ಕಾರಣ ವಿಚ್ಛೇದನ ಪಡೆದುಕೊಳ್ಳಲು ಪತ್ನಿ ಕೋರ್ಟ್​​​​ ಮೆಟ್ಟಿಲೇರಿದ್ದಾಳೆ.

ಇದರಿಂದ ಕೋಪಗೊಂಡ ಪತಿ ಕಿಡ್ನಿ ವಾಪಸ್ ಕೇಳಿದ್ದಾನೆ ಎನ್ನಲಾಗಿದೆ.ಅಮೇರಿ ಮಾಧ್ಯಮಗಳ ವರದಿ ಪ್ರಕಾರ, 1990ರಲ್ಲಿ ರಿಚರ್ಡ್ ಬಟಿಸ್ಟಾ(ಪತಿ) ಮತ್ತು ಡೊನ್ನೆಲ್ (ಪತ್ನಿ) ವಿವಾಹವಾಗಿದ್ದರು. ಇವರಿಗೆ ಮೂರು ಮಕ್ಕಳಿದ್ದಾರೆ. ಆದರೆ 2001 ರಲ್ಲಿ, ಡೊನ್ನೆಲ್​​ಗೆ ತೀವ್ರ ಅನಾರೋಗ್ಯ ಕಾಡಿದೆ. ಕಡೆಗೆ ಆಕೆಯ ಎರಡು ಕಿಡ್ನಿಯೂ ವಿಫಲವಾಗಿದೆ ಎಂದು ವೈದ್ಯರು ಘೋಷಿಸಿದ್ದರು. ಈ ವೇಳೆ ತನ್ನ ಪತ್ನಿಯ ಜೀವ ಉಳಿಸಲು ಬಟಿಸ್ಟಾ ಮುಂದಾಗಿದ್ದು, ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದಾನೆ. ಆದರೆ ಇದಾದ ಕೆಲವೇ ವರ್ಷಗಳ ಬಳಿಕ ಪತ್ನಿ ಡೊನ್ನೆಲ್ ವಿಚ್ಛೇದನ ಪಡೆಯಲು ಕೋರ್ಟ್​​​​ಗೆ ಅರ್ಜಿ ಸಲ್ಲಿಸಿದ್ದಳು. ಇದರಿಂದ ಸಾಕಷ್ಟು ನೋವುಂಡ ಪತಿ ನನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿದ್ದಾನೆ.

ಅಲ್ಲದೆ ಕಿಡ್ನಿ ವಾಪಸ್ ಇಲ್ಲವೇ ಹಣ ಕೊಡಿ ಎಂದು ಹೇಳಿದ್ದಾನೆ.ಆದರೆ ರಿಚರ್ಡ್ ಗೆ ನ್ಯಾಯ ಸಿಗಲಿಲ್ಲ. ಕಿಡ್ನಿಯನ್ನು ವಾಪಸ್ ನೀಡಲು ಸಾಧ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಸ್ಪಷ್ಟಪಡಿಸಿದ್ದು, ಡೊನ್ನೆಲ್ ತನ್ನ ಮೂತ್ರಪಿಂಡವನ್ನು ಹಿಂದಿರುಗಿಸಲು ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಇದರಿಂದ ಅವರ ಪ್ರಾಣಕ್ಕೂ ಅಪಾಯವಿದೆ. ಆದ್ದರಿಂದ ಮೂತ್ರಪಿಂಡವನ್ನು ಮರಳಿ ನೀಡಲು ಸಾಧ್ಯವಿಲ್ಲ ಎಂದು ತಜ್ಞರ ಹೇಳಿಕೆಯನ್ನಾಧರಿಸಿ ಕಿಡ್ನಿ ನೀಡಲಾಗುವುದಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ ಎನ್ನಲಾಗಿದೆ.

Related posts

ರಾಷ್ಟ್ರಪಕ್ಷಿಯ ಮಾಂಸ ಭಕ್ಷಸಿದ ಆ ಮೂವರು ಯಾರು? ಹುಲಿ ಉಗುರಿನ ಬೆನ್ನಲ್ಲೇ ಏನಿದು ವಿಚಿತ್ರ ಪ್ರಕರಣ?

ಕುಡಿದ ಮತ್ತಿನಲ್ಲಿ ರೈಲ್ವೆ ಹಳಿ ಮೇಲೆ ಬಿದ್ದ ವ್ಯಕ್ತಿ..! ಮೇಲಿನಿಂದ ರೈಲು ಚಲಿಸಿದರೂ ಆತ ಬದುಕಿದ್ದೇಗೆ..? ಇಲ್ಲಿದೆ ವಿಡಿಯೋ

ಈ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ದೆವ್ವದ ಕಾಟ? ಹತ್ತಾರು ವಿದ್ಯಾರ್ಥಿನಿಯರು ದಿಢೀರ್ ವಿಚಿತ್ರವಾಗಿ ವರ್ತಿಸಿದ್ದೇಕೆ? ಪ್ರವಾಹ ಇಳಿಕೆಯಾದ ಬಳಿಕ ಅಲ್ಲಿ ನಡೆದದ್ದಾದರೂ ಏನು?