ಕರಾವಳಿ

34 ಲಕ್ಷ ರೂ. ದುರ್ಬಳಕೆ ಹಿನ್ನೆಲೆ ,ಪಿಡಿಒ ಸೇವೆಯಿಂದ ವಜಾ

ನ್ಯೂಸ್ ನಾಟೌಟ್ : 34 ಲಕ್ಷ ರೂ. ದುರ್ಬಳಕೆ ಹಿನ್ನಲೆಯಲ್ಲಿ ಉಡುಪಿಯ ಕಾಪು ತಾಲೂಕಿನ ಬೆಳ್ಳೆ ಗ್ರಾಮ ಪಂಚಾಯಿತಿಯ ಹಾಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸುಧಾಕರ ಶೆಟ್ಟಿ ಅವರನ್ನು ಆರ್ಥಿಕ ಅವ್ಯವಹಾರ ಆರೋಪದಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾರ್ಕಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರು ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಸಲ್ಲಿಸಿದ ತನಿಖಾ ವರದಿಯ ಮೇರೆಗೆ ಸುಧಾಕರ ಶೆಟ್ಟಿಯವರ ವಿರುದ್ಧ ಮಾಡಲಾದ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ನಿಜವೆಂದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ನಿಯಮ ಸಂಖ್ಯೆ 8 (viii) ಪ್ರಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಪಂಚಾಯತ್ ರಾಜ್ ಕಮಿಷನರೇಟ್‌ನ ಆಯುಕ್ತರು ಅಧಿಕಾರಿಯನ್ನು ಸಾರ್ವಜನಿಕ ಸೇವೆಯಿಂದ ತಕ್ಷಣ ವಜಾಗೊಳಿಸುವಂತೆ ಆದೇಶಿಸಿದ್ದಾರೆ.

Related posts

ಸುಳ್ಯ: ಕಳ್ಳತನದ ವಿಡಿಯೋ ವೈರಲ್ ಪ್ರಕರಣ, ನಾಲ್ವರು ಅರೆಸ್ಟ್

ಇಂದು ಮಧ್ಯಾಹ್ನದ ಭೂಕಂಪದ ತೀವ್ರತೆ 1.8 ದಾಖಲು

ಇದು ಬರೋಬ್ಬರಿ 20 ಅಡಿಯ ಅತ್ಯಂತ ಉದ್ದವಾದ ಪೆನ್ ..!ಇಂಡಿಯಾ ಬುಕ್ ಆಫ್ ರೆಕಾರ್ಡ್‌ʼನಲ್ಲಿ ಸ್ಥಾನ ಪಡೆದ ಈ ಪೆನ್ನಿನ ವಿಶೇಷತೆಯೇನು ಗೊತ್ತಾ?