ರಾಜಕೀಯ

ಬಿಜೆಪಿ ಕಾರ್ಯಕರ್ತನ ಹೆಸರು ಬರೆದಿಟ್ಟು ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ

ನ್ಯೂಸ್ ನಾಟೌಟ್ : ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳು ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ನಡೆದಿದೆ.ಸಾವಿಗೂ ಮೊದಲು ಬಾಲಕಿ ಆಸ್ಪತ್ರೆಯಲ್ಲಿ ಡೆತ್ ನೋಟ್ ಬರೆದಿದ್ದು,  ಬಿಜೆಪಿ ಕಾರ್ಯಕರ್ತ ಹಿತೇಶ್(25) ಎಂಬಾತ ತನ್ನ ಸಾವಿಗೆ ಕಾರಣ ಎಂದು ತಿಳಿಸಿದ್ದಾಳೆನ್ನಲಾಗಿದೆ. ವಿಷ ಸೇವಿಸಿದ್ದ 17 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ವಂಚನೆ ಆರೋಪ:

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಕಳಸ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದಳು.ಹಿತೇಶ್ ಪ್ರೀತಿಸಿ ವಂಚಿಸಿದ್ದಾನೆಂದು ದೀಪ್ತಿ ಜನವರಿ 10 ರಂದು ಕಳೆ ನಾಶಕ ಸೇವಿಸಿದ್ದಳು. ನಂತರ ಆಕೆಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾಳೆ.

ಡೆತ್ ನೋಟ್ ಪತ್ತೆ:

ದೀಪ್ತಿ ಸಾಯುವ ಕೊನೆಯ ಕ್ಷಣದಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಾಳೆ.ಡೆತ್‌ನೋಟ್‌ನಲ್ಲಿ ಹೆಸರಿಸಿದಂತೆ, ಬಿಜೆಪಿ ಕಾರ್ಯಕರ್ತ ಎನ್ನಲಾದ ಹಿತೇಶ್ ವಿರುದ್ಧ ದೂರು ದಾಖಲಿಸಲು ಕುದುರೆಮುಖ ಪೊಲೀಸರು ಸತಾಯಿಸುತ್ತಿದ್ದರು ಎಂಬ ಮಾಹಿತಿಯಿತ್ತು.ಇದೀಗ ಹಿತೇಶ್ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Related posts

ಚೈತ್ರಾ ಕುಂದಾಪುರಗೆ ‘ಮೂರ್ಛೆ ರೋಗ’ ‘ಬಾಯಲ್ಲಿ ನೊರೆ’, ನಿನ್ನೆ ಬಟ್ಟೆ ಸೋಪು ಕೇಳಿದ್ದೇಕೆ ಚೈತ್ರಾ?ಅನಾರೋಗ್ಯದ ನೆಪವೊಡ್ಡಿ ನಾಟಕ ಮಾಡಿದ್ರಾ?

ಗೃಹಲಕ್ಷ್ಮಿ ಯೋಜನೆಯ ಹಣ ಹಲವರಿಗೆ ಬಾರದೆ ಇರೋದಕ್ಕೆ ಸಚಿವೆ ಹೇಳಿದ್ದೇನು? ಹಣ ಬಿಡುಗಡೆ ತಡವಾಗುತ್ತಿರುವುದೇಕೆ?

ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ದೂರು ದಾಖಲು..! ಈ ಬಗ್ಗೆ ಗೃಹಸಚಿವರಿಂದ ಭದ್ರತೆಯ ಭರವಸೆ