ಕರಾವಳಿ

ರೋಯಲ್ ಫ್ರೆಂಡ್ಸ್ ಆರ್ಟ್ಸ್ &ಸ್ಪೋರ್ಟ್ಸ್ ಟ್ರಸ್ಟ್ ಗೂನಡ್ಕ (ರಿ ) ಇದರ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ

ನ್ಯೂಸ್ ನಾಟೌಟ್ : ಸಾಮಾಜಿಕ, ಶೈಕ್ಷಣಿಕ, ಕ್ರೀಡಾಕ್ಷೇತ್ರ ,ಸಾಂತ್ವನ ಕಾರ್ಯಗಳಲ್ಲಿ ಸಕ್ರೀಯವಾಗಿ ಕಾರ್ಯಾಚರಿಸುತ್ತಿರುವ ರೋಯಲ್ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಟ್ರಸ್ಟ್ ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯೊಂದಿಗೆ ಬಡವರ ಮೇಲೆ ವಿಶೇಷ ಕಾಳಜಿಯನ್ನು ತೋರುತ್ತಾ ಬಂದಿದೆ. ಇದೀಗ ಕಡು ಬಡಕುಟುಂಬಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಅರ್ಹರು ಸಂತೋಷದಿಂದ ಪುಣ್ಯ ರಮಳಾನ್ ತಿಂಗಳನ್ನು ಸ್ವಾಗತಿಸಲಿ ಎಂಬ ಸದುದ್ದೇಶದಿಂದ ಕಿಟ್ ವಿತರಿಸಿ ನೆರವಾದರು.

ಕೊಯನಾಡು, ಸಂಪಾಜೆ, ಕಲ್ಲುಗುಂಡಿ, ಗೂನಡ್ಕ,ಪೆರಾಜೆ, ಆರಂತೋಡು ಆಸುಪಾಸಿನಲ್ಲಿರುವ ಸುಮಾರು 65 ಕ್ಕೂ ಹೆಚ್ಚು ಅರ್ಹ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆಯನ್ನು ಮಾಡಲಾಯಿತು.ಈ ಕಾರ್ಯಕ್ರಮಕ್ಕೆ ಏ.7 ಶುಕ್ರವಾರ ರೋಯಲ್ ಆರ್ಟ್ಸ್ &ಸ್ಪೋರ್ಟ್ಸ್ ಟ್ರಸ್ಟ್ (ರಿ) ಗೂನಡ್ಕ ದ ಕಚೇರಿ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ರೋಯಲ್ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಟ್ರಸ್ಟ್ (ರಿ) ಗೂನಡ್ಕ ಇದರ ಅಧ್ಯಕ್ಷರಾದ ಸಾಜೀದ್ ಐ.ಜಿ ರವರ ಮುಂದಾಳತ್ವದಲ್ಲಿ , ಸಲೀಂ ಪೆರಂಗೋಡಿ, ಶರೀಫ್ ಸೆಟ್ಟಿಯಡ್ಕ, ಇಜಾಸ್ ಗೂನಡ್ಕ, ಉಬೈಸ್ ಟಿ. ಕೆ, ಆಶಿಕ್ ಗೂನಡ್ಕ, ಯಹಿಯ ದೊಡ್ಡಡ್ಕ, ಹಾಗೂ ಸಮಿತಿಯ ಸದಸ್ಯರ ಸಹಕಾರದಿಂದ ಫಲಾನುಭವಿಗಳ ಮನೆಗಳಿಗೆ ತೆರಳಿ ರಮಳಾನ್ ಕಿಟ್ ನ್ನು ವಿತರಣೆ ಮಾಡಲಾಯಿತು.

Related posts

ಸುಳ್ಯ:ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಅಂಗಾರರ ಆರೋಗ್ಯದಲ್ಲಿ ಚೇತರಿಕೆ,ಶಸ್ತ್ರ ಚಿಕಿತ್ಸೆ ಯಶಸ್ವಿ

ಮಂಗಳೂರು: ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಸಿಐಎಸ್ಎಫ್ ಪಿಎಸ್ಸೈ..!, ಭದ್ರತಾ ಪಡೆಯ ಸಿಬ್ಬಂದಿ ಈ ನಿರ್ಧಾರ ಕೈಗೊಂಡಿದ್ಯಾಕೆ..?

ಭಾರತೀಯರ ಕಣ್ಮಣಿ ‘ರಾಜ ಹುಲಿ’ ಇನ್ನಿಲ್ಲ