ಕರಾವಳಿ

ನೇತ್ರಾವತಿ ಪೀಕ್ ಗೆ ಆಗಮಿಸಿದ್ದ ಚಾರಣಿಗರಿಗೆ ನಿರಾಸೆ,ಅರಣ್ಯ ಇಲಾಖೆ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದ ಚಾರಣಿಗರು

ನ್ಯೂಸ್ ನಾಟೌಟ್ : ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆ ಚಾರಣಿಗರು ವಾಗ್ವಾದಕ್ಕಿಳಿದ ಘಟನೆ ಚಿಕ್ಕಮಂಗಳೂರಿನಲ್ಲಿ ನಡೆದಿದೆ.ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ನೇತ್ರಾವತಿ ಪೀಕ್ ನ್ನು ನೋಡೋದಕ್ಕೆ ಮುಂಗಡವಾಗಿ ಬುಕ್ಕಿಂಗ್ ಮಾಡಿದ್ರು ಅವಕಾಶ ಕಲ್ಪಿಸಿ ಕೊಟ್ಟಿಲ್ಲ ಎಂಬ ಆರೋಪ ಚಾರಣಿಗರಿಂದ ಕೇಳಿ ಬಂದಿದೆ.

ಚಿಕ್ಕಮಗಳೂರು-ದಕ್ಷಿಣಕನ್ನಡ ಜಿಲ್ಲೆಯ ನೇತ್ರಾವತಿ ಪೀಕ್ ಸ್ಪಾಟ್ ಇದ್ದು,  ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕುದುರೆಮುಖ ಅರಣ್ಯ ಪ್ರದೇಶದಲ್ಲಿ  ಈ ಸ್ಥಳವಿದೆ.ಪವಿತ್ರ ನೇತ್ರಾವತಿ ನದಿಯು ಈ ಬೆಟ್ಟದ ಸಾಲುಗಳಲ್ಲಿ ತನ್ನ ಜನ್ಮವನ್ನು ಪಡೆದಿದೆ. ಈ ನದಿಯು ಧರ್ಮಸ್ಥಳದ ಮೂಲಕ ಹರಿಯುತ್ತಿದ್ದು,ಭಾರತದ ಪವಿತ್ರ ನದಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.ಹೀಗಾಗಿ ಇಲ್ಲಿಗೆ ಚಾರಣಿಗರು ದಿನ ನಿತ್ಯ ಆಗಮಿಸುತ್ತಿರುತ್ತಾರೆ.ಟ್ರಕ್ಕಿಂಗ್ ಗೆ ಇದು ಸೂಕ್ತ ಜಾಗವೆಂದು ಜನ ಈ ಸ್ಥಳವನ್ನು ಆಯ್ಕೆ ಮಾಡುತ್ತಾರೆ. ಆದರೆ ಇಲ್ಲಿ 300 ಮಂದಿಗಷ್ಟೆ ದಿನಕ್ಕೆ ಅವಕಾಶದ ರೂಲ್ಸ್ ಇರೋದ್ರಿಂದ ಅಷ್ಟು ಸಂಖ್ಯೆಯಲ್ಲಿ ಮಾತ್ರ ಚಾರಣಕ್ಕೆ ಅವಕಾಶವನ್ನು ಅರಣ್ಯ ಇಲಾಖೆ ನೀಡುತ್ತಿದೆ. ಇದರಿಂದಾಗಿ ನೇತ್ರಾವತಿ ಪೀಕ್ ಗೆ ಆಗಮಿಸಿದ್ದ ಚಾರಣಿಗರಿಗೆ ನಿರಾಸೆಯಾಗಿದ್ದು, ಬೇಸತ್ತ ಚಾರಣಿಗರು ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ವಾಗ್ಯುದ್ಧಕ್ಕಿಳಿದ ಪ್ರಸಂಗ ನಡೆಯಿತು.

Related posts

ಉಡುಪಿ:ದಟ್ಟ ಕಾಡಿನಲ್ಲಿ ಯುವಕ ನಾಪತ್ತೆಯಾಗಿ ಒಂದು ವಾರದ ಬಳಿಕ ಪತ್ತೆ ಪ್ರಕರಣ,ಗ್ರಾಮಸ್ಥರಿಂದ ಸಾಕುನಾಯಿ-ವಿವೇಕಾನಂದ ಇಬ್ಬರ ಮೆರವಣಿಗೆ,ಕುಟುಂಬಸ್ಥರಿಂದ ಸಿಹಿಯೂಟ

ಮಂಗಳೂರು: ಮನೆಯವರಿಗೆ ಹಲ್ಲೆ ಮಾಡಿ ಕಾರು ಕದ್ದು ಮುಲ್ಕಿಯಲ್ಲಿ ತಂದಿಟ್ಟ ಕಳ್ಳರು..! ಬೆರಳಚ್ಚು ತಜ್ಞರಿಂದ ಪರಿಶೀಲನೆ

ಕೊಕ್ಕಡ:ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಹಸಿಮೀನಿನ ವ್ಯಾಪಾರಿ