ಕರಾವಳಿ

ಬಾಲಕನನ್ನೇ ಬಲಿ ಪಡೆಯಿತೇ ಐಸ್ ಕ್ರೀಂ? ಸೇವಿಸಿದ ಬಳಿಕ ಅಸ್ವಸ್ಥಗೊಂಡು ಮೃತ್ಯು

ನ್ಯೂಸ್ ನಾಟೌಟ್ : ಐಸ್ ಕ್ರೀಂ ತಿಂದ ಬಳಿಕ ವಾಂತಿ-ಭೇದಿಯಿಂದ ಬಳಲಿದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಕೇರಳದ ಕೋಝಿಕೋಡುನಲ್ಲಿ ನಡೆದಿದೆ.ಅರಿಕ್ಕುಲಂ‌ ನಿವಾಸಿ ಮೊಹಮ್ಮದ್ ಅಲಿ ಅವರ ಪುತ್ರ ಹಸನ್ ರಿಫಾಯಿ(12)ಮೃತ ಬಾಲಕ ಎಂದು ತಿಳಿದು ಬಂದಿದೆ.

6ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಆದಿತ್ಯವಾರ ಸಂಜೆ ಐಸ್ ಕ್ರೀಂ ತಿಂದಿದ್ದಾನೆ. ಬಳಿಕ ಬಾಲಕನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವಾಂತಿ ಭೇದಿಯೂ ಆಗಿದೆ. ಈ ಹಿನ್ನೆಲೆ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರ ಸಲಹೆಯ ಮೇರೆಗೆ ಕೋಝಿಕ್ಕೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸೋಮವಾರ ರಿಫಾಯಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ತೆರಳಿ ಪರಿಶೀಲಿಸಿದ್ದಾರೆ. ಬಾಲಕ ಐಸ್ ಕ್ರೀಂ ಖರೀದಿಸಿದ ಅಂಗಡಿಯನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಬಾಲಕನ‌ ಸಾವಿಗೆ ಐಸ್ ಕ್ರೀಂ ಕಾರಣವೇ ಎಂಬ ಬಗ್ಗೆ ತನಿಖೆಯೂ ನಡೆಯುತ್ತಿದೆ. ಅದೇ ಕಾರಣ ಏನೆಂದು ಸದ್ಯದಲ್ಲೇ ತಿಳಿಸುತ್ತೇವೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಮಾಹಿತಿ ಬಹಿರಂಗವಾಗಲಿದೆ.

Related posts

ದಕ್ಷಿಣ ಕನ್ನಡದಿಂದ ಲೋಕಸಭಾ ಚುನಾವಣೆಗೆ ಒಕ್ಕಲಿಗ ಅಭ್ಯರ್ಥಿಯೇ ‘ಟ್ರಂಪ್ ಕಾರ್ಡ್’..? ಅಭ್ಯರ್ಥಿಗಳ ಪಟ್ಟಿಯಲ್ಲಿದೆ ಸುಳ್ಯದ ಏಕೈಕ ಒಕ್ಕಲಿಗನ ಹೆಸರು..!

ಡಿ.5ರಿಂದ ಈ 4 ರಾಶಿಗಳಿಗೆ ಅದೃಷ್ಟ ಒಲಿದು ಬರಲಿದೆ

ಮರಳು ಮಾಫಿಯಾಕ್ಕೆ ಬಿಸಿ ಮುಟ್ಟಿಸಿದ ಪೊಲೀಸರು; ಟಿಪ್ಪರ್, ಮರಳು ವಶ