ಕರಾವಳಿ

ಕಾಡು ಮಾಂಸದ ಆಸೆಗೆ ಕರೆಂಟ್ , ಓರ್ವನ ಸಾವು, ಮೂವರ ಬಂಧನ

ನ್ಯೂಸ್ ನಾಟೌಟ್ : ಕಾಡು  ಪ್ರಾಣಿಗಳ ಮಾಂಸದ ಆಸೆಯಿಂದ ಅವುಗಳನ್ನು ಹಿಡಿಯಲು ವಿದ್ಯುತ್ ತಂತಿ ಇಟ್ಟು ಓರ್ವನ ಸಾವಿಗೆ ಕಾರಣವಾದ ಮೂವರು ಆರೋಪಿಗಳನ್ನು ಧರ್ಮ ಸ್ಥಳ ಪೊಲೀಸರು ಬಂಧಿಸಿದ್ದಾರೆ.  

ಬಂಧಿತರನ್ನು ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕರಿಯನಿಲ ನಿವಾಸಿ ಹರೀಶ್ ಗೌಡ(59), ಕರಿಯನಿಲ ನಿವಾಸಿ ಸುಮಂತ್ (21), ಕರಿಯನಿಲ ನಿವಾಸಿ ಪ್ರಶಾಂತ್ (30) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕರಿಯನೆಲದ ಕರ್ಬಿತ್ತಿಲ್ ನಿವಾಸಿ ಶೀನಪ್ಪ ಗೌಡ ಎಂಬವರ ಪುತ್ರ ಉದಯ ಗೌಡ(43) ಅವರು ತೋಟಕ್ಕೆ ಹೋಗುವ ದಾರಿ ಮಧ್ಯೆ ಶಿವಪ್ಪ ಗೌಡ ಎಂಬವರ ಪಾಳುಬಿದ್ದ ಗದ್ದೆಯಲ್ಲಿ ಅಸಹಜವಾಗಿ ಮೃತಪಟ್ಟಿದ್ದರು. ಈ ಬಗ್ಗೆ ಸಹೋದರ ಯೋಗೀಶ ಕೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದರು.

Related posts

ಸುಳ್ಯ : ಎನ್ನೆಂಸಿ ಭೌತಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮ

ಪಂಜ: ‘ನ್ಯೂಸ್ ನಾಟೌಟ್’ ಸತತ ವರದಿಗೆ ಸಿಕ್ಕ ಜಯ, ಪುಟ್ಟ ಬಾಲಕನ ಬಡ ಕುಟುಂಬದ ಕೈಗೆ ಶೀಘ್ರವೇ ಸೇರಲಿದೆ ಆಧಾರ್ , ವೋಟರ್ ಐಡಿ

ಕೊಡೆ ಬಿಡಿಸಿದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಜೂನಿಯರ್ ಕಾಲೇಜಿನ ಉಪನ್ಯಾಸಕಿ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು