Latest

ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಪ್ರಮುಖ ರೂವಾರಿ ಎಂಬ ಶಾಸಕ ಜನಾರ್ದನ ರೆಡ್ಡಿ ಗಂಭೀರ ಆರೋಪಕ್ಕೆ ಸಸಿಕಾಂತ್ ಸೆಂಥಿಲ್ ಪ್ರತಿಕ್ರಿಯೆ, ರೆಡ್ಡಿ ಹೇಳಿಕೆ ಕೇಳಿ ನನಗೆ ನಗು ಬರುತ್ತಿದೆ ಎಂದು ಹೇಳಿದ್ಯಾಕೆ..?

1.6k

ನ್ಯೂಸ್ ನಾಟೌಟ್: ಧರ್ಮಸ್ಥಳದ  ವಿರುದ್ಧದ ಷಡ್ಯಂತ್ರದ ಪ್ರಮುಖ ರೂವಾರಿ ಎಂಬ ಶಾಸಕ ಜನಾರ್ದನ ರೆಡ್ಡಿ ಗಂಭೀರ ಆರೋಪಕ್ಕೆ ಹಾಲಿ ಕಾಂಗ್ರೆಸ್ ಸಂಸದ, ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪ್ರತಿಕ್ರಿಯಿಸಿದ್ದಾರೆ. ಜನಾರ್ದನ ರಡ್ಡಿಯವರು ಕೇವಲ ನಮ್ಮ ಮೇಲೆ ಊಹಾಪೋಹಗಳಿಂದ ಹೇಳಿಕೆ ನೀಡಿದ್ದಾರೆ, ಅವರು ಕಟ್ಟು ಕಥೆಗಳನ್ನು ಕಟ್ಟುತ್ತಿದ್ದಾರೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.  

ಜನಾರ್ದನ ರಡ್ಡಿ ಆರೋಪ ಕೇಳಿ ನನಗೆ ತುಂಬಾ ನಗು ಬರುತ್ತಿದೆ. ಅವರ ಮಾತಿನ ಹಿಂದೆ ಏನಿದೆ ಎಂಬುದು ಗೊತ್ತಿಲ್ಲ. ನಾನು ಐಎಎಸ್​ ಹುದ್ದೆಗೆ ರಾಜೀನಾಮೆ ನೀಡಿ 6 ವರ್ಷ ಆಗಿದೆ. ಈಗ ನಾನು ಬೇರೆ ಪಕ್ಷದಲ್ಲಿ ಇದ್ದೇನೆ. ನಾನು ಬಳ್ಳಾರಿಯಲ್ಲಿ ಕರ್ತವ್ಯದಲ್ಲಿ ಇದ್ದಾಗ ರೆಡ್ಡಿ ಬಂಧನ ಆಗಿತ್ತು. ನಾನು ಅವಾಗ ಮಾತ್ರ ರೆಡ್ಡಿಯವರನ್ನು ನೋಡಿದ್ದು ಎಂದು ಸೆಂಥಿಲ್ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಿಕ ದೂರು ನೀಡಿದ್ದ ಪ್ರಕರಣ ಸಂಬಂಧ ಮಂಗಳವಾರ ಮಾತನಾಡಿದ್ದ ಜನಾರ್ದನ ರೆಡ್ಡಿ, ಇದರ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ತಮಿಳುನಾಡಿನ ಹಾಲಿ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಕೈವಾಡ ಇದೆ ಎಂದು ಹೇಳಿಕೆಯನ್ನು ನೀಡಿದ್ದರು. ಕಾಂಗ್ರೆಸ್ ಸರ್ಕಾರವು ಸಂಸದ ಸಸಿಕಾಂತ್ ಸೆಂಥಿಲ್ ಒತ್ತಡದ ಮೇರೆಗೆ ಎಸ್​ಐಟಿ ರಚನೆಯನ್ನು ಮಾಡಿದೆ. ಸೆಂಥಿಲ್ ಅವರು ಕಾಂಗ್ರೆಸ್ ವರಿಷ್ಠರಿಗೆ ಆಪ್ತರಾಗಿದ್ದಾರೆ. ಅವರೇ ಎಸ್​ಐಟಿ ರಚನೆಗೆ ಒತ್ತಡ ಹಾಕಿದ್ದಾರೆ. ಅನಾಮಿಕ ಮಾಸ್ಕ್ ಮ್ಯಾನ್ ತಮಿಳುನಾಡಿನವ. ಅಲ್ಲದೆ, ಸಸಿಕಾಂತ್ ಸೆಂಥಿಲ್ ಜತೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ರೆಡ್ಡಿ ಆರೋಪಿಸಿದ್ದನ್ನು ಸ್ಮರಿಸಬಹುದು.

See also  ನಾವು ನೆಮ್ಮದಿಯಿಂದ ಬದುಕಬೇಕು.. ನೀನು ಬಂದು ಶರಣಾಗು ಎಂದ ಉಗ್ರನ ತಾಯಿ..! ಭಯೋತ್ಪಾದಕರ ಮನೆಗಳು ನೆಲಸಮ, ಸಂಬಂಧಿಕರು ವಶಕ್ಕೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget