ಕರಾವಳಿಕ್ರೈಂ

ಆತ ಧರ್ಮಸ್ಥಳ ಮತ್ತು ಕಟೀಲು ದೇವಸ್ಥಾನದ ಹುಂಡಿಗೆ ಹಾಕಲು ತಂದಿದ್ದ ಲಕ್ಷ ಲಕ್ಷ ಹಣ! ಆ ಹಣ ಪೊಲೀಸರ ಕೈ ಸೇರಿದ್ದೇಕೆ?

ನ್ಯೂಸ್ ನಾಟೌಟ್: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಪೊಲೀಸರು ಚೆಕ್ ಪೋಸ್ಟ್‌ಗಳಲ್ಲಿ ಯಾವುದೇ ಅಕ್ರಮ ಸಾಗಟಗಳು ಆಗದಂತೆ ತಡೆಯಲು ವಾಹನ ತಪಾಸಣೆ ಮಾಡುತ್ತಿದ್ದಾರೆ. ಈ ವೇಳೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸುವ ವೇಳೆ 2.5 ಲಕ್ಷ ಹಣ ಪತ್ತೆಯಾಗಿದೆ.

ಪಾವಗಡ ಮೂಲದ ವೈದ್ಯಾಧಿಕಾರಿ ಫಾರ್ಚುನರ್ ವಾಹನದಲ್ಲಿ ಧರ್ಮಸ್ಥಳ ಮತ್ತು ಕಟೀಲು ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ವಾಹನ ಪರಿಶೀಲನೆ ವೇಳೆ 2.50 ಲಕ್ಷ ಹಣಕ್ಕೆ ದಾಖಲೆ ಇಲ್ಲದೆ ಸಾಗಟ ಮಾಡುತ್ತಿದ್ದ ಕಾರಣ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಆತ ಹಣವನ್ನು ಧರ್ಮಸ್ಥಳ ಮತ್ತು ಕಟೀಲು ದೇವಸ್ಥಾನದ ಹುಂಡಿಗೆ ಹಾಕಲು ತಂದಿದ್ದ ಎನ್ನಲಾಗಿದೆ. ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ 50 ಸಾವಿರ ಹಣ ಸಾಗಾಟಕ್ಕೆ ಮಾತ್ರ ಅವಕಾಶ ಇರುತ್ತದೆ ಹಾಗಾಗಿ ದಾಖಲೆ ರಹಿತ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಹುಲಿ ಉಗುರು: ಜಗ್ಗೇಶ್‌ ಗೂ ಕಾದಿದೆಯಾ ಕಾನೂನು ಕಂಟಕ? ನವರಸ ನಾಯಕನ ಮನೆಗೂ ಇಂದು ಭೇಟಿ ನೀಡಲಿದ್ದಾರಾ ಅರಣ್ಯಾಧಿಕಾರಿಗಳು? ಇಲ್ಲಿದೆ ವೈರಲ್ ವಿಡಿಯೋ

ಬಸ್ – ಕಾರ್ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು

ಜ್ಞಾನವಾಪಿಯಲ್ಲಿ ನಡೆಯುತ್ತಿರುವ ಪೂಜೆ ತಡೆಯುವಂತೆ ಮುಸ್ಲಿಂ ಸಮಿತಿ ಮನವಿ, ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌