ಕರಾವಳಿಕ್ರೈಂವೈರಲ್ ನ್ಯೂಸ್

ಸೌಜನ್ಯ ಕುಟುಂಬದಿಂದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಗಳ ಭೇಟಿ, ಸೌಜನ್ಯ ನ್ಯಾಯಕ್ಕಾಗಿ ಆದಿಚುಂಚನಗಿರಿ ಮಠ ಜೊತೆಗಿರುತ್ತೆ, ಸ್ವಾಮೀಜಿ ಪುನರುಚ್ಚಾರ

ನ್ಯೂಸ್ ನಾಟೌಟ್: ಸೌಜನ್ಯ ಹೋರಾಟ ರಾಜ್ಯದಾದ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಒಕ್ಕಲಿಗ ಸಮುದಾಯ ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸುತ್ತಿದೆ. ಈ ಬೆನ್ನಲ್ಲೇ ಇದೀಗ ಸೌಜನ್ಯ ಕುಟುಂಬ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರನ್ನು ಮಂಗಳೂರಿನ ಕಾವೂರು ಮಠದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದೆ.

ಒಕ್ಕಲಿಗ ಸಮುದಾಯದ ಪ್ರಬಲ ಮಠವಾಗಿರುವ ಶ್ರೀ ಆದಿಚುಂಚನಗಿರಿ ಮಠ ಕೂಡ ಸೌಜನ್ಯ ನ್ಯಾಯಕ್ಕಾಗಿ ಹೋರಾಟಕ್ಕೆ ಪೂರ್ಣ ಬೆಂಬಲ ನೀಡಿದೆ. ಇದರಿಂದ ಸಹಜವಾಗಿಯೇ ಸೌಜನ್ಯ ಹೋರಾಟಕ್ಕೆ ದೊಡ್ಡ ಮಟ್ಟದ ಬಲ ಸಿಕ್ಕಿದ್ದಂತಾಗಿದೆ.

ಮೊನ್ನೆ ತಾನೆ ಬೆಳ್ತಂಗಡಿ ಪ್ರತಿಭಟನೆಯಲ್ಲಿ ಶ್ರೀ ಆದಿಚುಂಚನಗಿರಿ ಮಠದ ಮಂಗಳೂರು ಶಾಖೆ ಡಾ ಶ್ರೀ ಧರ್ಮಪಾಲನಾಥ ಸ್ವಾಮೀಜಿಗಳು ಪಾಲ್ಗೊಂಡು ಅಪರಾಧಿಗಳ ಬಂಧನಕ್ಕಾಗಿ ಆಗ್ರಹಿಸಿದ್ದರು. ಈ ಸಭೆಯ ಬಳಿಕ ಮೊದಲ ಸಲ ಸೌಜನ್ಯ ತಾಯಿ ಕುಸುಮಾವತಿ, ಮಾವ ವಿಠಲ ಗೌಡ ಸೇರಿದಂತೆ ಹಲವರು ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರನ್ನು ಭೇಟಿಯಾಗಿರುವುದು ದೊಡ್ಡ ಹೋರಾಟಕ್ಕೆ ಮುನ್ನುಡಿ ಇರಬಹುದು ಎಂದು ಅಂದಾಜಿಸಲಾಗಿದೆ.

ಸ್ವಾಮೀಜಿ ಜೊತೆ ಸೌಜನ್ಯ ಕುಟುಂಬ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿದರು. ಸೌಜನ್ಯಳಿಗೆ ನ್ಯಾಯ ಕೊಡುವ ದೃಷ್ಟಿಯಿಂದ ಆದಿಚುಂಚನಗಿರಿ ಮಠ ಸದಾ ಜೊತೆಗೆ ನಿಲ್ಲುತ್ತದೆ. ಆಕೆಗೆ ನ್ಯಾಯ ಸಿಗಲೇಬೇಕು ಎಂದು ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿಗಳು ಹೇಳಿದರು. ಕೇಸ್ ನಲ್ಲಿರುವ ಸೂಕ್ಷ್ಮ ವಿಚಾರದ ಬಗ್ಗೆಯೂ ಸ್ವಾಮೀಜಿಗಳ ಜೊತೆಗೆ ಚರ್ಚೆ ನಡೆಸಲಾಯಿತು.

ಎಲ್ಲವನ್ನು ಕೂಡ ಸ್ವಾಮೀಜಿಗಳು ಸಮಾಧಾನದಿಂದ ಆಲಿಸಿದರು. ಈ ಎಲ್ಲ ಬೆಳವಣಿಗೆಗಳಿಂದ ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ಉಗ್ರವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Related posts

ಹಿಂದೂ ನಾಯಕನ ಹತ್ಯೆ ಖಂಡನೀಯ: ವಿಪಕ್ಷ ನಾಯಕ ಸಿದ್ದರಾಮಯ್ಯ

44 ವರ್ಷಗಳ ಬಳಿಕ ಬಾಗಿಲು ತೆರೆದ ಮತ್ತೊಂದು ದೇವಾಲಯ..! ಕೋಮು ಹಿಂಸಾಚಾರ ಮರೆತು ಗ್ರಾಮಸ್ಥರಿಂದ ಸಹಕಾರ

ಸುಳ್ಯದಲ್ಲಿ ಕಾರ್ಮಿಕ ಸಂಘವನ್ನು ಚೀನಾಕ್ಕೆ ಹೋಲಿಸಿ ಅವಮಾನ..!