ಕರಾವಳಿಸುಳ್ಯ

ಧರ್ಮಸ್ಥಳ:9 ಶಾಲೆಗಳಿಂದ ಬ್ಯಾಟರಿ ಕಳವು ಪ್ರಕರಣ, ಕಡಬ ಮೂಲದ ನಾಲ್ವರು ಆರೋಪಿಗಳ ಅರೆಸ್ಟ್

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯ 9 ಶಾಲೆಗಳಿಂದ ಬ್ಯಾಟರಿ‌ ಕಳವು ಮಾಡಿರುವ ಕಡಬ ಮೂಲದ ನಾಲ್ವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಮೂರು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ‌ ಆರೋಪಿಗಳನ್ನು ಕಡಬದ ಕುಟ್ರಪಾಡಿ ನಿವಾಸಿ ರಕ್ಷಿತ್‌ ಡಿ.(24), ಕಡಬ ಮೀನಾಡಿ ನಿವಾಸಿ ತೀರ್ಥೇಶ್‌ ಎಂ. (29), ಕಡಬ ಉರುಂಬಿ ನಿವಾಸಿ ಯಜ್ಞೆಶ್‌ ಯು.ಕೆ.(30) ಮತ್ತು ಹಳ್ಳಿಮನೆ ನಿವಾಸಿ ರೋಹಿತ್‌ ಎಚ್‌.ಶೆಟ್ಟಿ (23) ಎಂದು‌ ಗುರುತಿಸಲಾಗಿದೆ.ಕೊಕ್ಕಡ ಗ್ರಾಮದ ಸರಕಾರಿ ಪ್ರೌಢ ಶಾಲೆಯಿಂದ 3.20 ಲಕ್ಷ ರೂ. ಮೌಲ್ಯದ 8 ನಿರುಪಯುಕ್ತ ಬ್ಯಾಟರಿಗಳನ್ನು ಕಳವು ಮಾಡಿದ ಕುರಿತು ಇಲ್ಲಿನ ಪ್ರಭಾರ ಮುಖ್ಯೋಪಾಧ್ಯಾಯ ಹಲ್ಲಿಕೇರಿ ಪ್ರಭಾಕರ ನಾಯ್ಕ ಎಂಬವರು ಧರ್ಮಸ್ಥಳ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ದೂರಿನ‌ ಹಿನ್ನೆಲೆಯಲ್ಲಿ ಪ್ರಕರಣದ ಜಾಡು ಹಿಡಿದ ಠಾಣೆಯ ಉಪನಿರೀಕ್ಷಕರಾದ ಅನಿಲ್‌ ಕುಮಾರ್‌ ಹಾಗೂ ರೇಣುಕಾ ಸೇರಿದಂತೆ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳು ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿರುವುದು ಬಹಿರಂಗಗೊಂಡಿದೆ. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನಾಲ್ಕು ಶಾಲೆಗಳಿಂದ, ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಎರಡು ಶಾಲೆಗಳಿಂದ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಒಂದು ಶಾಲೆಯಿಂದ, ಬಂಟ್ವಾಳ ಠಾಣಾ ವ್ಯಾಪ್ತಿಯ ಒಂದು ಶಾಲೆಯಿಂದ ಹಾಗೂ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಒಂದು ಶಾಲೆಯಲ್ಲಿ ಹೀಗೆ ಒಂಬತ್ತು ಶಾಲೆಗಳಲ್ಲಿ ಕಳ್ಳತನ ನಡೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಕಾರ್ಯಾಚರಣೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ(ಕಾ.ಸು)ಅನೀಲ ಕುಮಾರ ಡಿ, ಪಿ.ಎಸ್.ಐ(ತನಿಖೆ) ಶ್ರೀಮತಿ ರೇಣುಕರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ.ಎಸ್.ಐ ಸ್ಯಾಮುವೆಲ್, ರಾಜೇಶ್‌, ಹೆಡ್‍ಕಾನ್‍ಸ್ಟೇಬಲ್ ಪ್ರಶಾಂತ, ಸತೀಶನಾಯ್ಕ ಜಿ ಹೆಚ್‌.ಲಾರೆನ್ಸ್‌ ಪಿ.ಆರ್‌, 357 ಕೃಷ್ಣಪ್ಪ, ಶೇಖರ ಗೌಡ, ಮಂಜುನಾಥ, ಪ್ರಮೋದಿನಿ, ಅನಿಲ್ ಕುಮಾರ್, ಜಗದೀಶ, ಹರೀಶ್, ನಾಗರಾಜ್,ರಾಧಾ ಕೋಟಿನ್ ವಾಹನ ಚಾಲಕ ಲೋಕೇಶ್ ರವರುಗಳು ಭಾಗಿಯಾಗಿದ್ದಾರೆ.

Related posts

ವಿಜೃಂಭಿಸಿದ ಸುಳ್ಯ ತಾಲೂಕು ಮಟ್ಟದ 27ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು, ಆಸ್ಪತ್ರೆಯ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿಗೆ ಕನ್ನಡ ಕಸ್ತೂರಿ ಪುರಸ್ಕಾರ

ಪುತ್ತೂರಿನಲ್ಲಿ ಕಾಣಿಸಿಕೊಂಡ ಖತರ್ನಾಕ್ ಚಡ್ಡಿ ಗ್ಯಾಂಗ್ ..? ರಾತ್ರಿ ಮನೆಯಂಗಳಕ್ಕೆ ಬಂದು ತಲವಾರು ತೋರಿಸಿ ಹಣ, ಚಿನ್ನ ನೀಡುವಂತೆ ಬೆದರಿಕೆ

ಗೂನಡ್ಕ:ಕಾರು ಮತ್ತು ಲಾರಿ ಮಧ್ಯೆ ಅಪಘಾತ,ಸಂಪಾಜೆಯ ವ್ಯಕ್ತಿಗೆ ಗಂಭೀರ ಗಾಯ