ಕ್ರೈಂದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ದೆಹಲಿ ಸಿಎಂ ಬಗ್ಗೆ ಮೆಟ್ರೊ ರೈಲುಗಳ ಮೇಲೆ ಬೆದರಿಕೆ ಬರಹ ಬರೆಯುತ್ತಿದ್ದ ಯುವಕ ಅರೆಸ್ಟ್..! ಜೈಲುವಾಸ ಮುಗಿಸಿ ಬಂದ ಕೇಜ್ರಿವಾಲ್ ಗೆ ಮತ್ತೆ ಸಂಕಷ್ಟ..? ಇಲ್ಲಿದೆ ಸಿಸಿಟಿವಿ ದೃಶ್ಯ

ನ್ಯೂಸ್ ನಾಟೌಟ್: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇತ್ತೀಚೆಗೆ ಬಂಧನಕ್ಕೊಳಗಾಗಿ ಜೈಲಿನಿಂದ ಬೇಲ್ ಮೂಲಕ ಚುನಾವಣ ಪ್ರಚಾರಕ್ಕಾಗಿ ಹೊರಬಂದಿದ್ದಾರೆ.

ಈ ವೇಳೆ ಕೇಜ್ರಿವಾಲ್ ಗೆ ಬೆದರಿಕೆ ಹಾಕುವಂತಹ ಗೀಚುಬರಹಗಳನ್ನು ಮೆಟ್ರೊ ರೈಲುಗಳಲ್ಲಿ ಬರೆಯುತ್ತಿದ್ದ ಯುವಕನನ್ನು ಮೇ.22(ಬುಧವಾರ) ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು 33 ವರ್ಷದ ಅಂಕಿತ್ ಗೋಯಲ್ ಎಂದು ಗುರುತಿಸಲಾಗಿದೆ. ಮೆಟ್ರೊ ರೈಲುಗಳ ಕೋಚ್‌ಗಳು ಹಾಗೂ ಸೈನ್‌ಬೋರ್ಡ್‌ಗಳಲ್ಲಿ ಗೀಚುತ್ತಿದ್ದ ಯುವಕನ ದೃಶ್ಯಗಳು ಸಿಸಿಟಿವಿ ವಿಡಿಯೊದಲ್ಲಿ ಸೆರೆಯಾಗಿವೆ.

ಅಂಕಿತ್ ಗೋಯಲ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗೀಚುಬರಹಗಳ ಫೋಟೊಗಳನ್ನು ಹಂಚಿಕೊಂಡಿದ್ದ. ಆತನೇ ಗೀಚುಬರಹ ಬರೆದಿರಬಹುದೆಂದು ಪೊಲೀಸರು ಶಂಕಿಸಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

Click 👇

https://newsnotout.com/2024/05/dysp-cyber-case-madikeri-bank-account
https://newsnotout.com/2024/05/inspector-and-acp-threat-case
https://newsnotout.com/2024/05/lipslick-ban-in-nk-and-rules

Related posts

ಮಾರುತಿ ಸುಜುಕಿ ಕಾರು ಹೆಲಿಕಾಪ್ಟರ್ ಆಗಿ ಬದಲಾದದ್ದೇಗೆ..? ಇಲ್ಲಿದೆ ವೈರಲ್ ವಿಡಿಯೋ

ಬೆಳ್ಳಾರೆ: ನಿಂತಿದ್ದ ಬಾಲಕನಿಗೆ ಪಿಕಪ್ ಡಿಕ್ಕಿ, ರಸ್ತೆಗೆ ಬಿದ್ದ ಬಾಲಕ ಆಸ್ಪತ್ರೆಗೆ ದಾಖಲು

Chandrayaan 3 :ಟ್ರೋಲಿಗರಿಗೆ ನಟ ಪ್ರಕಾಶ್ ರಾಜ್ ಹೇಳಿದ್ದೇನು? ಲ್ಯಾಂಡಿಂಗ್ ಮುಗಿದರೂ ಮತ್ತೆ ಮತ್ತೆ ಟ್ರೋಲ್ ಮಾಡುತ್ತಿರುವುದೇಕೆ?