ಕ್ರೈಂದೇಶ-ಪ್ರಪಂಚ

ಇಂದೋರ್‌ ದೇಗುಲದಲ್ಲಿ ಭೀಕರ ದುರ್ಘಟನೆ, ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆ

ನ್ಯೂಸ್‌ ನಾಟೌಟ್‌: ಮಧ್ಯಪ್ರದೇಶದ ಇಂದೋರ್‌ನ ಬಾಲೇಶ್ವರ ಮಹಾದೇವ ದೇವಸ್ಥಾನದಲ್ಲಿ ಗುರುವಾರ ನೆಲ ಕುಸಿದ ಪರಿಣಾಮ ಅದರಡಿಯಲ್ಲಿದ್ದ 40 ಅಡಿ ಆಳದ ಬಾವಿಗೆ ಬಿದ್ದು ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

ರಾಮ ನವಮಿಯಂದು ಜನರು ಪ್ರಾರ್ಥನೆ ಸಲ್ಲಿಸಲು ಬಾಲೇಶ್ವರ ಮಹಾದೇವ ದೇವಸ್ಥಾನಕ್ಕೆ ಬಂದಿದ್ದು, ಈ ವೇಳೆ ಮಧ್ಯಾಹ್ನ 12.30ರ ಸುಮಾರಿಗೆ ದುರ್ಘಟನೆ ನಡೆದಿದೆ. ಪುರಾತನ ದೇವಾಲಯದ ಮೇಲ್ಛಾವಣಿಯ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿಂತಿದ್ದರಿಂದ, ಈ ಭಾರ ಹೊರಲಾರದೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಬಾವಿಯ ಮೇಲ್ಛಾವಣಿ ಕುಸಿದುಬಿದ್ದ ಕೂಡಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಆದರೆ ಘಟನೆ ಸಂಭವಿಸಿದ ಸ್ಥಳ ಕಿರಿದಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಎಂದು ತಿಳಿದುಬಂದಿದೆ. ಈ ದೇವಾಲಯವನ್ನು ಖಾಸಗಿ ಟ್ರಸ್ಟ್‌ ನಿರ್ವಹಿಸುತ್ತಿದ್ದು, ಈ ಹಿಂದೆಯ ದೇವಾಲಯದ ಅಭಿವೃದ್ಧಿಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ ಐದು ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ ಐವತ್ತು ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

Related posts

ಸಹೋದರರ ನಡುವೆ ತಂದೆಯ ಅಂತ್ಯಕ್ರಿಯೆಗಾಗಿ ಜಗಳ..! ತಂದೆಯ ಅರ್ಧ ಮೃತದೇಹ ಕೇಳಿದ ಮಗ..!

ಜ್ಞಾನವಾಪಿ ಮಸೀದಿ ಸ್ಥಳದಲ್ಲಿ ಸಿಕ್ಕ ಕನ್ನಡ ಶಿಲಾಶಾಸನದಲ್ಲಿ ಏನು ಬರೆದಿತ್ತು ಗೊತ್ತಾ..?ಫೋಟೋ ಬಹಿರಂಗಗೊಳಿಸಿದ ಇತಿಹಾಸ ತಜ್ಞರು

ಉದನೆ: ಮಾರಕಾಸ್ತ್ರಗಳಿಂದ ಎಲ್ಐಸಿ ಪ್ರತಿನಿಧಿಯ ಕೊಚ್ಚಿ ಕೊಲೆ