Uncategorized

ತಂದೆಯ ಚಿತೆಗೆ ಹಿರಿ ಮಗಳಿಂದ ಅಗ್ನಿ ಸ್ಪರ್ಶ

ನ್ಯೂಸ್ ನಾಟೌಟ್ : ತಂದೆ-ತಾಯಿ ಮರಣ ಹೊಂದಿದ ಬಳಿಕ ಅವರ ಚಿತೆಗೆ ಗಂಡು ಮಕ್ಕಳೇ ಅಗ್ನಿ ಸ್ಪರ್ಶ ಮಾಡಬೇಕು ಅನ್ನುವ ನಿಯಮ ಅನಾದಿ ಕಾಲದಿಂದಲೂ ಬಂದಿದೆ. ಆದರೆ ತೀರ ಇತ್ತೀಚೆಗೆ ಕಾಲ ಬದಲಾಗುತ್ತಿದೆ. ಈಗ ಹೆಣ್ಣು ಮಕ್ಕಳೂ ಕೂಡ ತಮ್ಮ ಹೆತ್ತವರ ಅಂತ್ಯ ಸಂಸ್ಕಾರ ಮಾಡುವ ಅರ್ಹತೆ ಪಡೆದಿದ್ದಾರೆ.

ಇಲ್ಲೊಬ್ಬಳು ಹೆಣ್ಣು ಮಗಳು ತನ್ನ ತಂದೆಗೆ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾಳೆ. ಈ ಘಟನೆ ಭಟ್ಕಳ ತಾಲೂಕಿನ ಹಡೀಲು ಸಬ್ಬತ್ತಿಯಲ್ಲಿ ನಡೆದಿದೆ. ಮಂಜುನಾಥ ನಾಯ್ಕ್ (51) ಎಂಬುವವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳಿರಲಿಲ್ಲ. ಹೀಗಾಗಿ ಮೂವರು ಹೆಣ್ಣು ಮಕ್ಕಳ ಪೈಕಿ ಹಿರಿಯ ಮಗಳು ಶ್ವೇತಾ ತಂದೆಯ ಅಂತ್ಯಕ್ರಿಯೆ ನಡೆಸಿದ್ದಾರೆ. ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಂತಿಮ ವಿಧಿವಿಧಾನ ಮುಗಿಸಿದ್ದಾರೆ. ಗಂಡು ಮಕ್ಕಳೇ ಅಂತಿಮ ಸಂಸ್ಕಾರ ಮಾಡಬೇಕೆಂಬ ಸಂಪ್ರದಾಯವನ್ನು ಮುರಿದು ಶ್ವೇತಾ ನೋವಲ್ಲೂ ದಿಟ್ಟತನ ಮೆರೆದಿರುವುದು ವಿಶೇಷವಾಗಿದೆ.

Related posts

ಸುಳ್ಯ ತಾಲೂಕು ಮಟ್ಟದ ರೈತ ಬಂಧು ಅಭಿಯಾನಕ್ಕೆ ಚಾಲನೆ: ಅರ್ಹ ರೈತರಿಗೆ ಮಹಾತ್ಮಗಾಂಧಿ ನರೇಗಾದಡಿ 27,000 ಆರ್ಥಿಕ ನೆರವು

ಚಾರ್ಜ್ ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ; ಪ್ರಾಣಾಪಾಯದಿಂದ ಪಾರಾದ ಮನೆಯವರು

‘ಒಂದು ಮಳೆಬಿಲ್ಲು ಒಂದು ಮಳೆಮೋಡ’ ಹಾಡಿದ್ದ ಪ್ರಸಿದ್ಧ ಗಾಯಕನಿಗೆ ನಿಶ್ಚಿತಾರ್ಥ..!,ಬಹುಕಾಲದ ಗೆಳತಿ ಆಶ್ನಾ ಜತೆ ಅರ್ಮಾನ್ ಮಲಿಕ್ ಎಂಗೇಜ್