ವೈರಲ್ ನ್ಯೂಸ್ಸಿನಿಮಾ

ದರ್ಶನ್ ಹುಟ್ಟುಹಬ್ಬಕ್ಕೆ ಬರಲಿದೆ ‘ಡೆವಿಲ್’ ಟೀಸರ್..? ಚಿತ್ರತಂಡದಿಂದ ಘೋಷಣೆ

290

ನ್ಯೂಸ್ ನಾಟೌಟ್: ಪ್ರತಿ ವರ್ಷ ದರ್ಶನ್ ಜನ್ಮದಿನ ಅದ್ದೂರಿಯಾಗಿರುತ್ತದೆ. ಆದರೆ ಈ ವರ್ಷ ಬೆನ್ನು ನೋವಿನ ಕಾರಣದಿಂದ ಅವರು ಫ್ಯಾನ್ಸ್ ಜೊತೆ ಬರ್ತ್​ಡೇ ಸೆಲೆಬ್ರೇಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಈಗಾಗಲೇ ವಿಡಿಯೋ ಮೂಲಕ ತಿಳಿಸಿದ್ದಾರೆ. ಈಗ ಮತ್ತೊಂದು ವಿಷಯ ಹೊರಬಿದ್ದಿದ್ದು, ಹುಟ್ಟುಹಬ್ಬದ ದಿನವೇ (ಫೆ.16) ‘ಡೆವಿಲ್’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.

‘ಕಾಟೇರ’ ಸಿನಿಮಾದ ಸಕ್ಸಸ್ ಬಳಿಕ ದರ್ಶನ್‘ಡೆವಿಲ್’ ಸಿನಿಮಾದ ಕೆಲಸ ಶುರು ಮಾಡಿದ್ದರು. ‘ಮಿಲನ’ ಪ್ರಕಾಶ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2024ರಲ್ಲೇ ಈ ಸಿನಿಮಾ ತೆರೆಕಾಣಬೇಕಿತ್ತು. ಆದರೆ ದರ್ಶನ್ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿ ಆಗಿ ಜೈಲು ಸೇರಿದ್ದರಿಂದ ಶೂಟಿಂಗ್ ನಿಂತಿತ್ತು. ದರ್ಶನ್ ಅರೆಸ್ಟ್​ ಆಗುವುದಕ್ಕೂ ಮುನ್ನ ‘ಡೆವಿಲ್’ ಸಿನಿಮಾದ ಶೂಟಿಂಗ್​​ನಲ್ಲಿ ಪಾಲ್ಗೊಂಡಿದ್ದರು.

ಒಂದು ಟೀಸರ್ ಕೂಡ ಬಿಡುಗಡೆ ಮಾಡಲಾಗಿತ್ತು. ದರ್ಶನ್ ಜಾಮೀಮಿನ ಮೇಲೆ ಹೊರಗೆ ಬಂದ ಬಳಿಕ ಚಿತ್ರದ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಈ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ ಗಿಫ್ಟ್ ರೂಪದಲ್ಲಿ ಟೀಸರ್​ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Click

https://newsnotout.com/pakisthan-bengaluru-star-cricketer-viral-news-video/

See also  ಮಾಜಿ ಮುಖ್ಯಮಂತ್ರಿಯ ಮಗನಿಂದ ವೇದಿಕೆಯಲ್ಲಿ ಕುಣಿಯುವಂತೆ ಪೊಲೀಸ್ ಅಧಿಕಾರಿಗೆ ಬೆದರಿಕೆ..! ವಿಡಿಯೋ ವೈರಲ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget