Latestಕ್ರೈಂರಾಜಕೀಯವಿಡಿಯೋವೈರಲ್ ನ್ಯೂಸ್

ಮಾಜಿ ಮುಖ್ಯಮಂತ್ರಿಯ ಮಗನಿಂದ ವೇದಿಕೆಯಲ್ಲಿ ಕುಣಿಯುವಂತೆ ಪೊಲೀಸ್ ಅಧಿಕಾರಿಗೆ ಬೆದರಿಕೆ..! ವಿಡಿಯೋ ವೈರಲ್

1.1k
Spread the love

ನ್ಯೂಸ್‌ ನಾಟೌಟ್: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜ್ ಪ್ರತಾಪ್ ಯಾದವ್ ಮಾಡಿದ್ದ ಹೋಳಿ ಆಚರಣೆ ಈ ಬಾರಿ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋದಲ್ಲಿ ತೇಜ್ ಪ್ರತಾಪ್ ಯಾದವ್ ಪೊಲೀಸರನ್ನು ಹೋಳಿ ಹಬ್ಬದಲ್ಲಿ ಕುಣಿಯಲು ಒತ್ತಾಯ ಮಾಡಿದ್ದಾರೆ. ಕುಣಿಯದಿದ್ದರೆ ಸಸ್ಪೆಂಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ ಘಟನೆ ನಡೆದಿದೆ.

ಈ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಬಿಹಾರ ರಾಜಕೀಯದಲ್ಲಿ ಬಿರುಗಾಳಿ ಸಂಚಲನ ಉಂಟಾಗಿದೆ. ವಿರೋಧ ಪಕ್ಷಗಳು ಇದನ್ನು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಟೀಕೆ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾವೆ.

ವೈರಲ್ ವಿಡಿಯೋದಲ್ಲಿ ತೇಜ್ ಪ್ರತಾಪ್ ಯಾದವ್ ವೇದಿಕೆ ಮೇಲೆ ಕುಳಿತಿದ್ದು, ಪೊಲೀಸ್ ಸಿಬ್ಬಂದಿಯೊಬ್ಬರು ಅವರ ಮುಂದೆ ನಿಂತಿರುವುದು ಕಾಣಿಸುತ್ತದೆ. ಈ ವೇಳೆ ಅವರು, “ಏಯ್ ಸಿಪಾಯಿ, ಏಯ್ ದೀಪಕ್, ಒಂದು ಹಾಡು ಹಾಕ್ತೀನಿ, ಅದಕ್ಕೆ ನೀನು ಕುಣಿಯಬೇಕು. ಬೇಜಾರು ಮಾಡ್ಕೋಬೇಡ” ಎಂದಿದ್ದಾರೆ.

ಆಗ ಪೊಲೀಸ್ ಅಧಿಕಾರಿ ನಯವಾಗಿ ನಿರಾಕರಿಸಿದ್ದಾರೆ. ಈ ವೇಳೆ “ಹೋಳಿ ಹಬ್ಬ ಇದು. ಇವತ್ತು ಕುಣಿಯದಿದ್ದರೆ ಸಸ್ಪೆಂಡ್ ಮಾಡ್ತೀನಿ” ಎಂದು ಬೆದರಿಕೆ ಹಾಕಿದ್ದಾರೆ. ವಾಸ್ತವವಾಗಿ, ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ಹೋಳಿ ಹಬ್ಬವು ದೇಶಾದ್ಯಂತ ಪ್ರಸಿದ್ಧವಾಗಿದೆ.

ಬಿಜೆಪಿ ವಕ್ತಾರ ಶಹಜಾದ್ ಪೂನಾವಾಲಾ ಮಾತನಾಡಿ, ತೇಜ್ ಪ್ರತಾಪ್ ಅವರು ತಮ್ಮ ತಂದೆಯಂತೆಯೇ ಇದ್ದಾರೆ. ಈ ಹಿಂದೆ ಲಾಲು ಯಾದವ್ ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಸುವ್ಯವಸ್ಥೆಯನ್ನು ನಗೆಪಾಟಲುಗೀಡು ಮಾಡಿದ್ದರು, ಈಗ ಅವರ ಮಗ ಪೊಲೀಸರನ್ನು ಕುಣಿಯುವಂತೆ ಮಾಡುತ್ತಿದ್ದಾರೆ. ಒಂದು ವೇಳೆ ಆರ್‌ಜೆಡಿ ಅಧಿಕಾರಕ್ಕೆ ಬಂದರೆ, ಅವರು ಕಾನೂನು ಪಾಲಕರನ್ನು ಕುಣಿಸುತ್ತಾರೆ. ಇದು ಟ್ರೇಲರ್ ಅಷ್ಟೇ, ಇಡೀ ಬಿಹಾರ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.

See also  ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ಬೆಂಕಿ ಅವಘಡ..! ರೋಗಿಗಳು ಪಾರಾಗಿದ್ದೇಗೆ? ಮಧ್ಯರಾತ್ರಿಯೇ ಶಾಸಕ ಅಶೋಕ್ ರೈ ಭೇಟಿ!
  Ad Widget   Ad Widget   Ad Widget   Ad Widget   Ad Widget   Ad Widget