Uncategorized

ದರ್ಶನ್ ನನ್ನು ಮದುವೆ ಆಗ್ತೇನೆ, ಒಳಗೆ ಬಿಡಿ ಎಂದು ಕಾರಾಗೃಹದ ಮುಂದೆ ಧರಣಿ ನಡೆಸುತ್ತಿರುವ ಮಹಿಳೆ..! ಬೆಂಗಳೂರಿನಿಂದ ಬಳ್ಳಾರಿಗೆ ಬಂದ ಮಹಿಳೆಗೆ ನೋ ಎಂಟ್ರಿ..!

ನ್ಯೂಸ್ ನಾಟೌಟ್: ಇಂದು (ಸೆಪ್ಟೆಂಬರ್ 05) ಮಹಿಳೆಯೊಬ್ಬರು ದರ್ಶನ್ ಇರುವ ಜೈಲಿನ ಬಳಿ ಬಂದು ಮಾಧ್ಯಮಗಳ ಮುಂದೆ ಹೈಡ್ರಾಮಾ ಮಾಡಿದ್ದಾರೆ. ನಟ ದರ್ಶನ್ ಅನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದ್ದು, ದರ್ಶನ್ ಅನ್ನು ಭೇಟಿ ಆಗಲು ಬರುವವರ ಮೇಲೆ ಮಿತಿ ಹೇರಲಾಗಿದೆ. ಮೊದಲ ರಕ್ತ ಸಂಬಂಧಿಗಳು ಹಾಗೂ ಅವರ ವಕೀಲರು ಮಾತ್ರವೇ ದರ್ಶನ್ ಅನ್ನು ಬಂದು ಭೇಟಿ ಆಗಬಹುದು.

‘ದರ್ಶನ್ ನನ್ನು ನೋಡಲು ಜೈಲೊಳಗೆ ಬಿಡೋದಾದ್ರೆ ಮದುವೆ ಆಗೋದಕ್ಕೂ ರೆಡಿ’ ಎಂದು ದರ್ಶನ್ ಮಹಿಳಾ ಅಭಿಮಾನಿಯೊಬ್ಬರು ಜೈಲಿನ ಮುಂಭಾಗದಲ್ಲಿ ಹೈಡ್ರಾಮಾ ಮಾಡಿದ ಘಟನೆ ನಡೆದಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ ರನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದಾಗ ದರ್ಶನ್ ನೋಡಲು ಬಂದಿದ್ದ ಮಹಿಳಾ ಅಭಿಮಾನಿ ಲಕ್ಷ್ಮೀ. ಆದರೆ ಅಂದು ದರ್ಶನ್ ನೋಡಲು ಪೊಲೀಸರು ಅವಕಾಶ ಕೊಟ್ಟಿರಲಿಲ್ಲ ಎನ್ನಲಾಗಿದೆ. ಇದೀಗ ದರ್ಶನ್‌ರನ್ನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿರುವ ಹಿನ್ನೆಲೆ ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಬಂದಿರುವ ಅಭಿಮಾನಿ ಲಕ್ಷ್ಮೀ. ನಾನು ದರ್ಶನ್ ರನ್ನ ನೋಡಬೇಕು ಎಂದು ಜೈಲು ಸಿಬ್ಬಂದಿ ಜೊತೆ ತಕರಾರು ತೆಗೆದಿದ್ದಾರೆ.

‘ಹಾಗಾದ್ರೆ ಸಂಬಂಧಿಗಳಿಗೆ ಮಾತ್ರ ಬಿಡೋದಾದರೆ ನಾನು ದರ್ಶನ್‌ನರನ್ನ ಮದುವೆಯಾಗುತ್ತೇನೆ ಎಂದ ಮಹಿಳೆ. ನನಗೆ ದರ್ಶನ್ ಇಷ್ಟ, ವಿಜಯಲಕ್ಷ್ಮೀ ರೀತಿಯಲ್ಲಿ ನಾನು ಮದುವೆಯಾಗುತ್ತೇನೆ. ಒಳಗೆ ಬಿಡಿ ನಾನು ದರ್ಶನ್ ನೋಡಲೇಬೇಕು. ಬೆಂಗಳೂರು ಜೈಲಿಗೆ ಹೋದ್ರೆ ಅಲ್ಲೂ ಬಿಡ್ಲಿಲ್ಲ. ಬಳ್ಳಾರಿಗೆ ಬಂದ್ರೆ ಇಲ್ಲೂ ಬಿಡಲ್ಲ ಅಂದ್ರೆ ಹೇಗೆ? ಎಂದು ಜೈಲು ಸಿಬ್ಬಂದಿಯನ್ನ ಪ್ರಶ್ನಿಸಿದ ಮಹಿಳೆ ಬಹಳ ಹೊತ್ತು ಚರ್ಚೆ ನಡೆಸಿದ್ದಾರೆ.
ನಾನಿವತ್ತು ದರ್ಶನ್‌ರನ್ನ ನೋಡಲೇಬೇಕು. ಹಣ್ಣು ಕೊಟ್ಟು ಮಾತಾಡಿಸಿಕೊಂಡು ಹೋಗುತ್ತೇನೆ ನನ್ನನ್ನು ಜೈಲೊಳಗೆ ಬಿಡಿ ಎಂದು ಜೈಲು ಮುಂಭಾಗ ಪಟ್ಟು ಹಿಡಿದು ಮಹಿಳೆ ಕುಳಿತಿದ್ದರು ಎಂದು ವರದಿ ತಿಳಿಸಿದೆ.

Click

https://newsnotout.com/2024/09/tulunadu-culture-are-misused-in-maharatra-kanada-news-kantara-effect/
https://newsnotout.com/2024/09/pattanagere-shed-bengaluru-renukaswami-photo-leaked-kannada-news/
https://newsnotout.com/2024/09/konkana-railway-job-vacancy-kannada-news-karnataka-190-jobs/

Related posts

ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ವೃದ್ದೆ, 13 ಗಂಟೆ ನೀರಿನಲ್ಲಿದ್ದರೂ 78ರ ವೃದ್ದೆ ಬದುಕಿ ಬಂದಿದ್ದೇ ಪವಾಡ..!

ಕೊಡಗಿನಲ್ಲಿ ಭೂಕಂಪದ ಅನುಭವ, ಜನ ಕಕ್ಕಾಬಿಕ್ಕಿ..!

ಭಾಗಮಂಡಲ: ನಕಲಿ ಬಂದೂಕು ತಯಾರಿಸುತ್ತಿದ್ದವನ ಹೆಡೆಮುರಿ ಕಟ್ಟಿದ ಪೊಲೀಸರು, ಬಂದೂಕು ಖರೀದಿಸಿದವರೂ ಈಗ ಪೊಲೀಸರ ಬಲೆಗೆ..!