ಕ್ರೈಂಬೆಂಗಳೂರುರಾಜ್ಯಸಿನಿಮಾ

ದರ್ಶನ್ ಪ್ರಕರಣ: ಇಂದಿಗೆ(ಜು.18) ನ್ಯಾಯಾಂಗ ಬಂಧನ ಅವಧಿ ಮುಕ್ತಾಯ..! ಹೈಕೋರ್ಟ್‌ನಲ್ಲಿ ದಾಸನ ಅರ್ಜಿ ವಿಚಾರಣೆ..!

255

ನ್ಯೂಸ್ ನಾಟೌಟ್: ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ಗೆ (Darshan) ಮನೆಯೂಟ ಸಿಗುತ್ತಾ ಅಥವಾ ಜೈಲೂಟವೇ ಗತಿಯಾಗುತ್ತಾ ಎಂಬ ಬಗ್ಗೆ ಇಂದು ಹೈಕೋರ್ಟ್‌ ನಿರ್ಧರಿಸಲಿದೆ. ಜೊತೆಗೆ ದರ್ಶನ್‌ ಮತ್ತು ಗ್ಯಾಂಗ್‌ನ ನ್ಯಾಯಾಂಗ ಬಂಧನ ಅವಧಿ ಇಂದು ಮುಕ್ತಾಯವಾಗಲಿದೆ. ವೀಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಇಂದು ಹಾಜರುಪಡಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಜೈಲಲ್ಲಿ ತಿನ್ನುವ ಊಟ ಜೀರ್ಣ ಆಗುತ್ತಿಲ್ಲ. ಪದೇ ಪದೇ ಫುಡ್ ಪಾಯಿಸನ್ ಆಗುತ್ತಿದೆ. ಇದರಿಂದ ಆರೋಗ್ಯ ಸಮಸ್ಸೆ ಎದುರಾಗಿದೆ. ಹಾಗಾಗಿ ಮನೆಯಿಂದ ಊಟ ಪೂರೈಕೆ ಮಾಡಲು ಅನುಮತಿ ನೀಡಬೇಕು ಎಂದು ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಗುರುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜೈಲಿನ ಮ್ಯಾನ್ಯುವಲ್‌ ಅಲ್ಲಿ ಮನೆಯ ಊಟ ನೀಡುವುದಕ್ಕೆ ಇರುವ ಅವಕಾಶಗಳು ಏನೇನು? ಮತ್ತೆ ಜೈಲಿನಲ್ಲಿ ದರ್ಶನ್ ಅವರಿಗೆ ಆಗುತ್ತಾ ಇರುವ ಆರೋಗ್ಯ ಸಮಸ್ಸೆ ಎಂತದ್ದು ಅಂತಾ ಉತ್ತರ ನೀಡುವಂತೆ ಜೈಲಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿತ್ತು.

ಅಲ್ಲದೇ ಪೊಲೀಸರು ಆಕ್ಷೇಪಣೆ ಸಲ್ಲಿಸುವುದಕ್ಕೆ ಸೂಚನೆ ನೀಡಲಾಗಿತ್ತು. ಹೀಗಾಗಿ ಇಂದು(ಜು.18) ಜೈಲಾಧಿಕಾರಿಗಳು ಆಕ್ಷೇಪಣೆ ಸಲ್ಲಿಸಿ ಹೈಕೋರ್ಟ್‌ನಲ್ಲಿ ವಾದ ಮಂಡಿಸಲಿದ್ದಾರೆ.

See also  ಮಹಿಳೆಗೆ ಕಿರುಕುಳ: ಗ್ರಾಪಂ ಸದಸ್ಯನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget