ಕ್ರೈಂದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ನಟ ದರ್ಶನ್ ರೇಣುಕಾಸ್ವಾಮಿ ಮನೆಗೆ ತೆರಳಿ ಪೋಷಕರಲ್ಲಿ ಕ್ಷಮೆ ಕೇಳ್ತಾರಾ..? ದರ್ಶನ್ ನಮ್ಮ ಮನೆಗೆ ಬಂದ್ರೆ ಊಟ ಹಾಕ್ತೇವೆ ಎಂದ ರೇಣುಕಾಸ್ವಾಮಿ ತಂದೆ..!

268

ನ್ಯೂಸ್ ನಾಟೌಟ್ : ನಟ ದರ್ಶನ್ ಕುರಿತು ಮೃತ ರೇಣುಕಾಸ್ವಾಮಿ ತಂದೆ ಸ್ಫೋಟಕ ಹೇಳಿಕೆ ನೀಡಿದ್ದು, ನಟ ದರ್ಶನ್ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡುವ ಕುರಿತು, ಕ್ಷಮೆ ಕೇಳುವ ಕುರಿತು ಮಾತನಾಡಿದ್ದಾರೆ. ದರ್ಶನ್ ನಮ್ಮ ಮನೆಗೆ ಬಂದರೂ ನಾವು ದ್ವೇಷ ಮಾಡಲ್ಲ. ನಾವು ಯಾರ ಬಗ್ಗೆಯೂ ಕಾಮೆಂಟ್ ಮಾಡಲ್ಲ, ಎಲ್ಲರ ಬಗ್ಗೆ ಒಳ್ಳೆಯ ಭಾವನೆ ಇದೆ ಎಂದಿದ್ದಾರೆ. (darshan)

ಕಾನೂನು ಪ್ರಕಾರ ಏನು ನಡೆಯುತ್ತದೆಯೋ ಅದು ನಡೆಯಲಿ. ದರ್ಶನ ಮನೆಗೆ ಬರುವ ವಿಚಾರ ಗೊತ್ತಿಲ್ಲ, ನಾವು ಜಂಗಮರು, ಯಾರನ್ನೂ ನಾವು ದ್ವೇಷ ಮಾಡಲ್ಲ, ಅಸೂಯೆ ಪಡುವವರಲ್ಲ. ದರ್ಶನ್ ನಮ್ಮ ಮನೆಗೆ ಬರುವುದಾದರೆ ಬರಲಿ, ಯಾರನ್ನೂ ಬೇಡ ಅನ್ನುವುದಿಲ್ಲ ಎಂದು ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ತಂದೆ ಶಿವನಗೌಡ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಯಾರ ಜೊತೆಯೂ ಶತೃತ್ವ ಬಯಸಲ್ಲ, ಒಳ್ಳೆಯ ರೀತಿಯಲ್ಲಿ ಗೌರವಿಸುತ್ತೇವೆ. ದರ್ಶನ್ ನಮ್ಮ ಮನೆಗೆ ಬಂದ್ರು ಕೂಡಾ ಬನ್ನಿ ಊಟ ಮಾಡಿ, ಕೂತುಕೊಳ್ಳಿ ಎನ್ನುತ್ತೇವೆ ಎಂದಿದ್ದಾರೆ.

ನಾವು ಎಲ್ಲರಿಗೂ ಗೌರವ ಕೊಡುತ್ತೇವೆ, ಪ್ರೀತಿ ವಿಶ್ವಾಸದಿಂದ ಇರುತ್ತೇವೆ. ನಮಗೆ ಆಗಿರುವ ಅನ್ಯಾಯಕ್ಕೆ ಕಾನೂನು ಏನೂ ನಡೆಯುತ್ತದೆ ನಡೆಯಲಿ. ಯಾರೇ ನಮ್ಮ ಮನೆಗ ಬಂದರೂ ಬರಲಿ, ನಮ್ಮ ಅಭ್ಯಂತರ ಇಲ್ಲ. ಮನೆ ಬಾಗಿಲಿಗೆ ದರ್ಶನ್ ಬಂದರೆ ಬನ್ನಿ ಎಂದು ಕರೆಯುತ್ತೇವೆ ಎಂದು ತಿಳಿಸಿದ್ದಾರೆ.

Click

https://newsnotout.com/2024/07/lic-housing-calls-for-job-offers-kannada-news-200-vecancies-are-available/
https://newsnotout.com/2024/07/mangaluru-kannada-news-commisioner-kannada-news-viral-news/
https://newsnotout.com/2024/07/melukote-cheluvanarayana-swami-kannada-news-land-scam/
https://newsnotout.com/2024/07/bike-kannada-news-humanity-and-theft-kannada-news-bengaluru/
https://newsnotout.com/2024/07/14-hours-work-kananda-news-protest-kannada-news-viral-video-job-issue-at-bengaluru/
See also  ಕೊರಗಜ್ಜನ ವೇ‍ಷ ಧರಿಸಿದ್ದ ಮದುಮಗ ಅರೆಸ್ಟ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget