ಕ್ರೈಂಬೆಂಗಳೂರುರಾಜಕೀಯರಾಜ್ಯವೈರಲ್ ನ್ಯೂಸ್ಸಿನಿಮಾ

ದರ್ಶನ್‍ ನಂತೆ ರಾಜಕಾರಣಿಗಳೂ ನಿರ್ಧಾರ ತಗೊಳೋದಾದ್ರೆ ಗಂಟೆಗೊಂದು ಹೆಣ ಬೀಳ್ತಿತ್ತು ಎಂದ ಸಿ.ಟಿ ರವಿ..! ಇಲ್ಲಿದೆ ಸಂಪೂರ್ಣ ಮಾಹಿತಿ

243

ನ್ಯೂಸ್ ನಾಟೌಟ್: ನಟ ದರ್ಶನ್ (Darshan Thoogudeepa) ಪ್ರಕರಣದ ಸುದ್ದಿ ನಾಗರೀಕ ಸಮಾಜ ತಲೆ ತಗ್ಗಿಸುವಂತದ್ದು. ರಾಜಕಾರಣಿಗಳ ಮೇಲಿನ ಟೀಕೆಗೆ ಕೊಲೆ ಮಾಡೋ ಹಾಗಿದ್ರೆ ಗಂಟೆಗೊಂದು ಹೆಣ ಬೀಳುತ್ತಿತ್ತು ಎಂದು ಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಹೇಳಿಕೆ ನೀಡಿದ್ದಾರೆ.

ದರ್ಶನ್ ಆ್ಯಂಡ್ ಗ್ಯಾಂಗ್ ಕೃತ್ಯವನ್ನು ಖಂಡಿಸಿದ ಸಿಟಿ ರವಿ, ದರ್ಶನ್ ಗೆ ಅಷ್ಟು ಕ್ರೂರ ಮನಸ್ಥಿತಿ ಇರುತ್ತೆ ಅಂತ ಯಾರೂ ಭಾವಿಸಿರಲಿಲ್ಲ. ಸಿನಿಮಾದಲ್ಲಿ ಹೀರೋಗಳಾದವರು ನಿಜ ಜೀವನದಲ್ಲಿ ಹೀರೋಗಳಾಗಿರಲ್ಲ. ದರ್ಶನ್‌ ಪ್ರಕರಣ ನೋಡಿದಾಗ ಅವರು ಸಿನಿಮಾದಲ್ಲಿ ಮಾತ್ರ ಹೀರೋ ಆಗಿದ್ರು ಅನ್ಸತ್ತೆ. ನಮ್ಮ ಪಕ್ಷ ರೇಣುಕಾಸ್ವಾಮಿ ಕುಟುಂಬದ ಜೊತೆ ಇದೆ, ಆ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದರು.

ಯಾರಿಗೂ ಕಾನೂನು ಕೈಗೆತ್ತಿಕೊಂಡು ಕ್ರೌರ್ಯ ಮಾಡುವ ಅಧಿಕಾರವಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಹೆಚ್ಚು ಬದ್ಧತೆ ಇರಬೇಕು. ಆ ಕ್ರೌರ್ಯವನ್ನ ಯಾರೂ ಒಪ್ಪಲು ಸಾಧ್ಯವಿಲ್ಲ. ಅವರಿಗೆ ರಾಜಮರ್ಯಾದೆ, ವಿಶೇಷ ಸವಲತ್ತು ಕೊಡ್ತಿದ್ದಾರೆ ಅನ್ನೋದು ಸಂದೇಶವೇ ಒಳ್ಳೆದಲ್ಲ. ಆ ರೀತಿ ಇದ್ರೆ ಬಲ ಇದ್ದವನಿಗೆ ಒಂದು, ಬಡವನಿಗೊಂದು ರೀತಿ ಎಂಬ ಸಂದೇಶ ಹೋಗುತ್ತೆ ಎಂದು ಹೇಳಿದ್ದಾರೆ.

Click 👇

https://newsnotout.com/2024/06/darshan-and-gang-issue-gold-kannada-news
https://newsnotout.com/2024/06/hair-cutting-shop-owner-misbehaviour-police-issue
https://newsnotout.com/2024/06/viral-news-company-interview-kannada-news
https://newsnotout.com/2024/06/darshan-and-gang-issue-accued-and-his-father-nomore
See also  ಪಹಲ್ಗಾಮ್ ​ನಲ್ಲಿ ಉಗ್ರರಿಗೆ ಬೆಂಬಲ ನೀಡಿದ್ದ 175 ಶಂಕಿತರು ಪೊಲೀಸ್ ವಶಕ್ಕೆ..! ಇಲ್ಲಿವರೆಗೆ ಉಗ್ರರ 8 ಮನೆಗಳು ಧ್ವಂಸ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget