ನ್ಯೂಸ್ ನಾಟೌಟ್: ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಅಟ್ಟಹಾಸ ಮೆರೆದ ಉಗ್ರರ ಹೆಡೆಮುರಿ ಕಟ್ಟುವ ಕಾರ್ಯಾಚರಣೆಯನ್ನು ಭದ್ರತಾ ಪಡೆಯ ಸೈನಿಕರು ಮತ್ತು ಜಮ್ಮು ಕಾಶ್ಮೀರ ಪೊಲೀಸರು ತೀವ್ರಗೊಳಿಸಿದ್ದಾರೆ.
ಅನಂತನಾಗ್ ಜಿಲ್ಲೆಯ ಪೊಲೀಸರು, ಸೇನೆ, ಸಿಆರ್ ಪಿಎಫ್ ಮತ್ತು ಇನ್ನಿತರ ಭದ್ರತಾ ಪಡೆಗಳೊಂದಿಗೆ ಕೈಜೋಡಿಸಿದ್ದು, ಉಗ್ರರ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಅನಂತನಾಗ್ ಜಿಲ್ಲೆಯಲ್ಲಿ ಹಗಲು ರಾತ್ರಿ ಶೋಧಕಾರ್ಯ ನಡೆಸಿದ್ದು, ಉಗ್ರರಿಗೆ ಬೆಂಬಲ ನೀಡಿದ 175 ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಭಯೋತ್ಪಾದಕರಿಗೆ ಬೆಂಬಲ ಮತ್ತು ಅವರ ಚಟುವಟಿಕೆಯ ಜಾಲದ ಸಂಪರ್ಕವನ್ನು ಮೊಟಕುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅನಂತನಾಗ್ ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ವೆಹಿಕಲ್ ತಪಾಸಣಾ ಪಾಯಿಂಟ್ ಗಳನ್ನು ಮಾಡಲಾಗಿದ್ದು, ಈ ಮೂಲಕ ರಸ್ತೆ ಸೇರಿದಂತೆ ಅರಣ್ಯ ಪ್ರದೇಶ ಮತ್ತಿತರ ಕಡೆಗಳಲ್ಲಿ ಪ್ಯಾಟ್ರೋಲಿಂಗ್ ಕಾಯರ್ಯಚರಣೆ ಮೂಲಕ ಜನರ ಸುರಕ್ಷತೆಗೆ ಕ್ರಮ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
#WATCH | Bandipora, J&K: Visuals of a destroyed house in Naz Colony, allegedly linked to a terrorist pic.twitter.com/kMi9GerBgG
— ANI (@ANI) April 27, 2025
ಅಲ್ಲದೆ, ಪಹಲ್ಗಾಮ್ ದಾಳಿ ಬಳಿಕ, ದಕ್ಷಿಣ ಕಾಶ್ಮೀರದಲ್ಲಿರುವ ಅನಂತನಾಗ್ ಜಿಲ್ಲೆಯಲ್ಲಿದ್ದ ಲಷ್ಕರ್ ಎ ತೊಯ್ಬಾ ಕಮಾಂಡರ್ ಮನೆ, ಮತ್ತು ಪುಲ್ವಾಮಾ, ಶೋಪಿಯಾನ್ ಜಿಲ್ಲೆಗಳಲ್ಲಿನ 8 ಉಗ್ರರ ಮನೆಗಳನ್ನು ಭದ್ರತಾ ಪಡೆಯ ಸಿಬ್ಬಂದಿ ನೆಲಸಮಗೊಳಿಸಿದ್ದಾರೆ.