ಕರಾವಳಿಕ್ರೈಂ

ಧರ್ಮಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ! ವಾರಿಸುದಾರರಿಗಾಗಿ ಪೊಲೀಸರ ಹುಡುಕಾಟ

ನ್ಯೂಸ್ ನಾಟೌಟ್: ಧರ್ಮಸ್ಥಳದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ವರದಿಯಾಗಿದೆ.
ವೃದ್ದ ವ್ಯಕ್ತಿ ಧರ್ಮಸ್ಥಳ ಶರಾವತಿ ವಸತಿ ಗೃಹದ ಎದುರು ಅಸ್ವಸ್ಥಗೊಂಡು ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವ ಹಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಶರಾವತಿ ವಸತಿ ಗೃಹದ ಎದುರಿನಲ್ಲಿ ವೃದ್ದ ಬಿದ್ದಿದ್ದರು. ಅವರಿಗೆ ಮಾತನಾಡಲು ಕಷ್ಟವಾಗುತ್ತಿತ್ತು

ಕೂಡಲೇ ಕಛೇರಿಯಿಂದ ಮಾಹಿತಿ ಪಡೆದುಕೊಂಡು 108 ಅಂಬ್ಯುಲೆನ್ಸ್ ನವರಿಗೆ ಕರೆ ಮಾಡಲಾಯಿತು. ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಈ ವೇಳೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ಸಮಯದಲ್ಲಿ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತರು ಸುಮಾರು 60-70 ವರ್ಷದವರಾಗಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ಬಂದವರು ಯಾವುದೋ ಖಾಯಿಲೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಮೃತ ಪಟ್ಟಿರಬಹುದು ಎಂದು ಸಂಶಯಿಸಲಾಗಿದೆ. ಮೃತರ ಹೆಸರು ವಿಳಾಸ ಪತ್ತೆಯಾಗದ ಕಾರಣ ಮೃತರ ವಾರೀಸುದಾರರ ಬಗ್ಗೆ ಗೊತ್ತಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಅರಂಬೂರಿನಲ್ಲಿ ವಾಹನ ಪ್ರಯಾಣಿಕರ ಪರದಾಟ

ಕಾರ್ಯಕ್ರಮ ಮುಗಿಸಿ ಮನೆಗೆ ಹೋಗಲು ಲೇಟ್ ಮಾಡಿದ ಪತಿ,ಅಸಮಾಧಾನಗೊಂಡು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಪತ್ನಿ

ಮಕ್ಕಳಿಲ್ಲ ಅನ್ನುವವರಿಗೆ ಮಕ್ಕಳಿಲ್ಲದ ಕೊರಗು, 85 ವರ್ಷದ ಅಜ್ಜಿಗೆ 9 ಮಕ್ಕಳಿದ್ದರೂ ಜೀವನವೇ ಭಾರ..!