ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಪಾರ್ಟಿ ಮಾಡುವುದಕ್ಕಾಗಿ ನೃತ್ಯಗಾರ್ತಿಯರನ್ನು ಅಪಹರಿಸಿದ ಯುವಕರು..! ಬಂಧಿಸಲು ಹೋದ ಪೊಲೀಸರ ಮೇಲೆ ಗುಂಡಿನ ದಾಳಿ..!

ನ್ಯೂಸ್ ನಾಟೌಟ್: ಪಾರ್ಟಿಗಾಗಿ ಡ್ಯಾನ್ಸರ್ ಗಳನ್ನು ಅಪಹರಣ ಮಾಡಿದ್ದ 8 ಮಂದಿಯನ್ನು ಪೊಲೀಸ್ ಅಧಿಕಾರಿಗಳು ಗುಂಡು ಹಾರಿಸಿ ಬಂಧಿಸಿದ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದೆ.

ಸಂಗೀತ ಕಾರ್ಯಕ್ರಮಗಳಲ್ಲಿ ನೃತ್ಯಗಾರ್ತಿಯರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಯುವತಿಯರನ್ನು ಗನ್ ಪಾಯಿಂಟ್ ನಲ್ಲಿ ಈ 8 ಮಂದಿ ಅಪಹರಿಸಿದ್ದರು. ಹಣಕ್ಕಾಗಿ ಅಲ್ಲದೇ, ಹುಟ್ಟು ಹಬ್ಬದ ಕಾರ್ಯಕ್ರಮವೊಂದಕ್ಕೆ ನೃತ್ಯ ಮಾಡುವುದಕ್ಕಾಗಿ ಅಪಹರಣ ಮಾಡಿದ್ದರು ಎನ್ನಲಾಗಿದೆ.

ಭಾನುವಾರ(ಸೆ.8) ತಡ ರಾತ್ರಿ ಈ ಘಟನೆ ನಡೆದಿತ್ತು. ಆರೋಪಿಗಳ ಪೈಕಿ ಓರ್ವನಾದ ಅಜಿತ್ ಸಿಂಗ್ ಎಂಬಾತನ ಹುಟ್ಟು ಹಬ್ಬ ಆಚರಿಸಲು ಈ ಕೆಲಸ ಮಾಡಿದ್ದಾರೆ. ನೃತ್ಯಗಾರ್ತಿಯರು ಬಾಡಿಗೆಗೆ ಪಡೆದು ತಂಗಿದ್ದ ರೂಮ್ ಗಳಿಗೆ ತೆರಳಿ ನೃತ್ಯಗಾರ್ತಿಯರನ್ನು ಕಾರ್ಯಕ್ರಮಕ್ಕೆ ಬರುವಂತೆ ಕೇಳಿದ್ದರು. ಆದರೆ ನೃತ್ಯಗಾರ್ತಿಯರು ಇದಕ್ಕೆ ಒಪ್ಪಿಗೆ ನೀಡದ ಕಾರಣ ಗನ್ ತೋರಿಸಿ ಅವರನ್ನು ಒತ್ತಾಯಪೂರ್ವಕವಾಗಿ ಹೊತ್ತೊಯ್ದಿದ್ದಾರೆ.

ಆರೋಪಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದು ಸ್ಥಳೀಯರಲ್ಲಿ ಭೀತಿ ಉಂಟು ಮಾಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಜಿತ್ ಸಿಂಗ್ ನಿವಾಸಕ್ಕೆ ತೆರಳಿ ನೃತ್ಯಗಾರ್ತಿಯರನ್ನು ರಕ್ಷಿಸಿ ಅಜಿತ್ ಸಿಂಗ್ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಪೊಲೀಸರು 25,000 ರೂಪಾಯಿಗಳ ನಗದು ಬಹುಮಾನ ಘೋಷಿಸಿದ್ದರು. ಕಾರ್ಯಾಚರಣೆ ವೇಳೆ ಆರೋಪಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿದಾಳಿಯಲ್ಲಿ ಪೊಲೀಸರೂ ಗುಂಡು ಹಾರಿಸಿದ್ದು, ಇಬ್ಬರು ಆರೋಪಿಗಳ ಕಾಲಿಗೆ ಗುಂಡು ತಗುಲಿದೆ.

Click

https://newsnotout.com/2024/09/8-husband-as-man-allegation-on-wife-but-wife-says-only-four-highcourt-verdict/
https://newsnotout.com/2024/09/police-shock-during-illegal-alcho-kannada-news-viral-video-andra/
https://newsnotout.com/2024/09/arun-kumar-puttila-and-case-high-court-stay-on-investigation-kannada-news/
https://newsnotout.com/2024/09/mangaluru-eletric-scooter-kannada-news-notice-issue-mangaluru-corporation/
https://newsnotout.com/2024/09/electric-scooter-ola-kannada-news-viral-news-fire-on-showroom-police-arrested/
https://newsnotout.com/2024/09/food-corporation-of-india-kannada-news-job-vacency-all-over-india/
https://newsnotout.com/2024/09/muslim-ganesha-chaturti-kannada-news-mother-and-father-v/

Related posts

ಅಪ್ಪನ ಮೇಲೆ ಸಿಟ್ಟಾಗಿ ಹೈಟೆನ್ಷನ್‌ ವಿದ್ಯುತ್‌ ಕಂಬವೇರಿದ ಮಗ..! ಇಲ್ಲಿದೆ ಕುಡುಕ ಮಗನ ಫಜೀತಿ!

ಮಡಿಕೇರಿ:ಗರ್ಭಿಣಿ ಕಾಡಾನೆಯನ್ನು ಗುಂಡಿಕ್ಕಿ ಹತ್ಯೆ,ಆರೋಪಿಗಳಿಗಾಗಿ ಮುಂದುವರಿದ ಶೋಧ

ಸೇನಾ ಆಂಬ್ಯುಲೆನ್ಸ್‌ ಗೆ ಗುಂಡು ಹಾರಿಸಿದ ಭಯೋತ್ಪಾದಕರು..! 3 ಭಯೋತ್ಪಾದಕರ ಹತ್ಯೆಯ ವೇಳೆ ಸೇನಾ ಶ್ವಾನ ಸಾವು..!