ಸುಳ್ಯ

ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾಗಿ ಕೆ. ಎಂ. ಮುಸ್ತಾಫ ಸುಳ್ಯ ಪುನರಾಯ್ಕೆ

ನ್ಯೂಸ್ ನಾಟೌಟ್ : ದ.ಕ. ಮತ್ತು ಉಡುಪಿ ಜಿಲ್ಲೆಯ 180ಕ್ಕೂ ಮಿಕ್ಕಿದ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ (MIEF) ಮಹಾಸಭೆ ಮಂಗಳೂರಿನ ಪ್ರೆಸ್ಟೀಜ್ ಇಂಟರ್‌ನ್ಯಾಶನಲ್ ಆಡಿಟೋರಿಯಂನಲ್ಲಿ ಜರುಗಿತು.

ಸಭೆಯಲ್ಲಿ 2023-25ನೇ ಸಾಲಿಗೆ ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಒಕ್ಕೂಟದ ಉಪಾಧ್ಯಕ್ಷರಾಗಿ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ.ಮುಸ್ತಾಫ ಸುಳ್ಯ ಪುನರಾಯ್ಕೆಯಾಗಿದ್ದಾರೆ. ಒಕ್ಕೂಟದ ಗೌರವಾಧ್ಯಕ್ಷ ಬೆಂಗಳೂರಿನ ಖ್ಯಾತ ಉದ್ಯಮಿ ಟಿಕೆ ಗ್ರೂಪ್ ಎಂ. ಡಿ. ಉಮ್ಮರ್ ಟಿಕೆ ಚುನಾವಣಾಧಿಕಾರಿಯಾಗಿದ್ದರು.

ಒಕ್ಕೂಟವು ಖಾಸಗಿ ಶಿಕ್ಷಣಸಂಸ್ಥೆಗಳ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ, ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರತಿಭಾನ್ವಿತ ಉಚಿತ ತರಬೇತಿ, ಪ್ರತೀ ಶಿಕ್ಷಣ ಸಂಸ್ಥೆಯ ಟಾಪರ್‌ಗಳಿಗೆ ಬೆಂಗಳೂರು, ಮಂಗಳೂರಿನ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ವಸತಿ ಸಹಿತ ಉಚಿತ ಪಿ. ಯು. ಸಿ ಶಿಕ್ಷಣ, ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ಪ್ರಶಸ್ತಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಇಲಾಖೆ ಮತ್ತು ಸರ್ಕಾರ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟದ ಮೂಲಕ ಸಮಸ್ಯೆಗಳ ಬಗೆಹರಿಸುವಿಕೆಗೆ ಪ್ರಯತ್ನ ಮೊದಲಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಬರುತ್ತಿದೆ.

Related posts

ಹಿಂದೂ -ಮುಸ್ಲಿಂ ಸಂಘರ್ಷದ ಕಥೆಯುಳ್ಳ ‘ಬೇರ’ ಸಿನಿಮಾದ ಟೀಸರ್ ನೋಡಿ ‘ಯಾರಿಗೆ ಯಾರನ್ನು ಕೊಲ್ಲುವ ಹಕ್ಕೂ ಇಲ್ಲ’ ಎಂದು ಕಣ್ಣೀರಿಟ್ಟ ಪ್ರವೀಣ್ ನೆಟ್ಟಾರ್ ಪತ್ನಿ

ಕಲ್ಮಡ್ಕ: ಕಾಚಿಲ ಶ್ರೀಮಹಾವಿಷ್ಣುಮೂರ್ತಿ ದೈವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿ, ಸಾವಿರಾರು ಜನ ಸೇರುವ ನಿರೀಕ್ಷೆ

ಸುಳ್ಯ: ಸಿವಿಲ್‌ ನ್ಯಾಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ