ಕರಾವಳಿಸುಳ್ಯ

ಸುಳ್ಯ ಪ್ರೆಸ್ ಕ್ಲಬ್ ಗೆ ದ.ಕ ಜಿಲ್ಲಾಧಿಕಾರಿ ಭೇಟಿ, ಪತ್ರಕರ್ತರ ಪ್ರಯತ್ನವನ್ನು ಶ್ಲಾಘಿಸಿದ ಡಿ.ಸಿ.

ನ್ಯೂಸ್ ನಾಟೌಟ್ :ಪತ್ರಕರ್ತರೇ ಸೇರಿಕೊಂಡು ಧನಸಂಗ್ರಹ ಮಾಡಿ ಸುಳ್ಯದಲ್ಲಿ ಸುಂದರವಾದ ಪ್ರೆಸ್ ಕ್ಲಬ್ ಕಟ್ಟಡ ನಿರ್ಮಾಣಗೊಂಡಿದ್ದು , ಅದರ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ಅದ್ದೂರಿಯಾಗಿ ನಡೆದಿತ್ತು. ಅದರ ಬೆನ್ನಲ್ಲೇ ನಿನ್ನೆ ಪ್ರೆಸ್ ಕ್ಲಬ್ ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ರವರು ಭೇಟಿ ನೀಡಿ ಭವ್ಯ ಕಟ್ಟಡ ವೀಕ್ಷಿಸಿದರು.

ಪತ್ರಕರ್ತರ ಪ್ರಯತ್ನ ಶ್ಲಾಘನಾರ್ಹ:

ಈ ವೇಳೆ ಜಿಲ್ಲಾಧಿಕಾರಿಗಳನ್ನು ಪ್ರೆಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು. ನಂತರ ಅಧಿಕಾರಿಯವರು ಮಾತನಾಡಿ ಸುಳ್ಯದ ಪತ್ರಕರ್ತರ ಸಾಧನೆಯನ್ನು ಮೆಚ್ಚಿಕೊಳ್ಳುತ್ತೇನೆ.ಪತ್ರಕರ್ತರಿಗೆ ಸಮಯ ಎಂಬುದಿಲ್ಲ.ಇಂತಹ ಸನ್ನಿವೇಶದಲ್ಲಿ ಬಿಡುವುಮಾಡಿಕೊಂಡು ಧನ ಸಂಗ್ರಹ ಮಾಡಿ ಸುಂದರವಾದ ಕಟ್ಟಡ ನಿರ್ಮಾಣ ಮಾಡಿರುವುದು ಅತೀವ ಸಂತೋಷವಾಗಿದೆ. ಮುಂದೆ ಕಟ್ಟಡದ ಮೇಲ್ಭಾಗದ ಕಾಮಗಾರಿಗೆ ಸರಕಾರದ ಮಟ್ಟದಲ್ಲಿ ಅನುದಾನ ಸಿಗುವಂತೆ ವ್ಯವಸ್ಥೆ ಮಾಡುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಸುಳ್ಯ ತಹಶೀಲ್ದಾರ್‌ ಕು. ಅನಿತಾಲಕ್ಷ್ಮಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್,ಕಂದಾಯ ನಿರೀಕ್ಷಕರುಗಳಾದ ಕೊರಗಪ್ಪ ಹೆಗ್ಡೆ, ಶಂಕರ್‌, ತಾಲೂಕು ಪಂಚಾಯತ್ ಮ್ಯಾನೇಜರ್ ಹರೀಶ್ ,ಪ್ರೆಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಜೆ.ಕೆ ರೈ, ನಿರ್ದೇಶಕ ದುರ್ಗಾ ಕುಮಾರ್‌ ನಾಯರ್‌ ಕೆರೆ ಇದ್ದರು.ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿದರು. ಖಜಾಂಚಿ ಯಶ್ಚಿತ್ ಕಾಳಮ್ಮನೆ ವಂದಿಸಿದರು.ಪ್ರೆಸ್ ಕ್ಲಬ್ ನಿರ್ದೇಶಕರು, ಸದಸ್ಯರು ಹಾಜರಿದ್ದರು.

Related posts

ಪುಂಜಾಲಕಟ್ಟೆ: ಕಂಬಳ ಕೋಣಗಳ ಯಜಮಾನ ಇನ್ನಿಲ್ಲ,ಕಟ್ಟಡದಿಂದ ಕುಸಿದು ಬಿದ್ದು ಮೃತ್ಯು

ಆಂಬ್ಯುಲೆನ್ಸ್ -ರಿಕ್ಷಾ ನಡುವೆ ಅಪಘಾತ ನಾಲ್ವರಿಗೆ ಗಂಭೀರ ಗಾಯ

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ 2023-24 ಸಾಲಿನ ಅಲೈಡ್ ಹೆಲ್ತ್ ಸೈನ್ಸ್ ರ‍್ಯಾಂಕ್‌  ಪ್ರಕಟ: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿಗೆ 6 ರ‍್ಯಾಂಕ್‌